HomePage_Banner
HomePage_Banner

ಕಾಣಿಯೂರು ಗ್ರಾ.ಪಂ. ಕೋವಿಡ್-19 ಕಾರ್ಯಪಡೆ ಸಭೆ- ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕುಟುಂಬದ ಬಗ್ಗೆ ಆಲೋಚಿಸಿ ಕೋವಿಡ್ ಸೆಂಟರ್‌ಗೆ ದಾಖಲಾಗಿ- ಎಸ್. ಅಂಗಾರ

ಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: ಒಂದು ಮನೆಯಲ್ಲಿ ಒಬ್ಬರಿಗೆ ಕೊರೋನಾ ಪಾಸಿಟಿವ್ ಬಂದಾಗ ತನ್ನ ಕುಟುಂಬದ ರಕ್ಷಣೆಯ ಬಗ್ಗೆ ಆಲೋಚನೆ ಮಾಡಿ ಇನ್ನೊಬ್ಬರಿಗೆ ಹರಡದಂತೆ ಕೋವಿಡ್ ಸೆಂಟರ್‌ಗೆ ಕಡ್ಡಾಯವಾಗಿ ದಾಖಲಾಗಬೇಕು. ಕೋವಿಡ್ ಸೆಂಟರ್‌ನಲ್ಲಿಯೇ ಅವರ ಆರೈಕೆ ಮಾಡಲು ಅಗತ್ಯವಾದ ವ್ಯವಸ್ಥೆಗಳನ್ನು ಸಿದ್ಧಗೊಳಿಸಿದ್ದು, ಈ ನಿಟ್ಟಿನಲ್ಲಿಯೇ ಸರಕಾರ ಕೋವಿಡ್ ಸೆಂಟರ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರು, ಶಾಸಕ ಎಸ್. ಅಂಗಾರ ಹೇಳಿದರು. ಅವರು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಛೇರಿ ಕಾಣಿಯೂರಿನ ಸಭಾಂಗಣದಲ್ಲಿ ಜೂ 19ರಂದು ನಡೆದ ಕಾಣಿಯೂರು ಗ್ರಾ.ಪಂ. ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು. ಕಾಣಿಯೂರು ಗ್ರಾ.ಪಂ.ಕಾರ್ಯಪಡೆಯ ಹೆಚ್ಚಿನ ಮುತುರ್ವಜಿಯಿಂದ ಕೊರೋನಾ ಪಾಸಿಟವ್ ಪ್ರಕರಣಗಳು ಇಳಿಮುಖ ಕಾಣಲು ಸಾಧ್ಯವಾಗಿದೆ. ಕೊರೋನಾ ಪೂರ್ತಿ ನಿರ್ಮೂಲನೆ ಮಾಡಲು ಇನ್ನಷ್ಟೂ ಕ್ರೀಯಾಶೀಲತೆಯಿಂದ ಕಾರ್ಯಪಡೆಗಳು ಕಾರ್ಯ ನಿರ್ವಹಿಸಬೇಕಾಗಿದೆ. ಕೊರೋನಾ ಸೋಂಕಿತರಿಗೆ ನೀಡಬೇಕಾದ ಔಷಧಿಯ ಕೊರತೆಯಿದ್ದರೂ ಒದಗಿಸುವ ಕೆಲಸ ತಕ್ಷಣ ಮಾಡಲಾಗುವುದು ಎಂದ ಸಚಿವರು ಕೊರೋನಾದ ಜೊತೆ ಜೊತೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಾ ಇವೆ, ಡೆಂಗ್ಯೂ ಜ್ವರದ ಬಗ್ಗೆಯೂ ಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಇದೆ ಎಂದರು.

 

 

ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ ಮಾತನಾಡಿ, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೊರೋನಾ ವೈರಸ್ ಇಳಿಮುಖ ಕಂಡಿದೆ ಎಂದರೆ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಅವರ ಪರಿಶ್ರಮ ತುಂಬಾ ಇದೆ. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳ ಹಾಗೂ ಅಧಿಕಾರಿಗಳ ಸೇವೆ ಮೆಚ್ಚುವಂತದ್ದು. ತಮ್ಮ ಜೀವನವನ್ನೇ ಪಣಕಿಟ್ಟು ಇವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾಣಿಯೂರು ಗ್ರಾಮ ಪಂಚಾಯತ್‌ನಿಂದ ವಿವಿಧ ರೀತಿಯಲ್ಲಿ ಸ್ಪಂದಿಸಿದ್ದೇವೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಮಾತನಾಡಿ, ಕಾಣಿಯೂರು ಗ್ರಾ.ಪಂ. ವ್ಯಾಪ್ತಿಗೆ ಸಂಬಂಧಪಟ್ಟ ಹಾಗೇ ಒಟ್ಟು ೩೭ ಕೊರೋನಾ ಪಾಸಿಟಿವ್ ಪ್ರಕರಣಗಳು ಇದ್ದು, ಇದರಲ್ಲಿ ೩ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋರೋನಾ ಪಾಸಿಟಿವ್ ಬಂದ ವ್ಯಕ್ತಿ ಕಡ್ಡಾಯವಾಗಿ ಕೋವಿಡ್ ಸೆಂಟರ್‌ಗೆ ದಾಖಲಾಗುವ ಮೂಲಕ ಕೊರೋನಾ ವೈರಸ್‌ನ್ನು ಪೂರ್ತಿ ನಿರ್ಮೂಲನೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಾಣಿಯೂರು ಗ್ರಾ.ಪಂ. ಅಧ್ಯಕ್ಷೆ ಲಲಿತಾ ದರ್ಖಾಸು, ಕಡಬ ತಹಶೀಲ್ಧಾರ್ ಅನಂತಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಬೆಳ್ಳಾರೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆನಂದ ಗೌಡ ಮೇಲ್ಮನೆ, ಸುಳ್ಯ ಮಂಡಲ ಬಿಜೆಪಿ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ. ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಜಿ.ಪಂ. ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ, ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ದೇವಯ್ಯ ಖಂಡಿಗ, ಚಾರ್ವಾಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಕಾಣಿಯೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ದೇವರಾಜ್, ಗ್ರಾ.ಪಂ. ಸದಸ್ಯರಾದ ದೇವಿಪ್ರಸಾದ್ ದೋಳ್ಪಾಡಿ, ತಾರಾನಾಥ ಇಡ್ಯಡ್ಕ, ಲೋಕಯ್ಯ ಪರವ, ವಸಂತ ಪೆರ್ಲೋಡಿ, ತೇಜಕುಮಾರಿ ಉದ್ಲಡ್ಡ, ಕೀರ್ತಿಕುಮಾರಿ ಅಂಬುಲ, ಮೀರಾ, ಸುನಂದ ಅಬ್ಬಡ, ಅಂಬಾಕ್ಷಿ ಕೂರೇಲು, ಗಂಗಮ್ಮ ಗುಜ್ಜರ್ಮೆ, ಸುಲೋಚನಾ ಮೀಯೊಳ್ಪೆ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ನಿರ್ದೇಶಕರಾದ ಅನಂತ ಬೈಲಂಗಡಿ, ಧರ್ಮೇಂದ್ರ ಗೌಡ ಕಟ್ಟತ್ತಾರು, ಕಾಣಿಯೂರು ಸಿಆರ್‌ಪಿ ಯಶೋದ ಹಾಗೂ ಆರೋಗ್ಯ ಕೇಂದ್ರ ಸಿಬ್ಬಂದಿಗಳು, ಗ್ರಾಮಕರಣಿಕರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಗ್ರಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾ.ಪಂ. ಸದಸ್ಯರಾದ ರಾಮಣ್ಣ ಗೌಡ ಮುಗರಂಜ ಸ್ವಾಗತಿಸಿ, ಪ್ರವೀಣ್‌ಚಂದ್ರ ರೈ ಕುಮೇರು ವಂದಿಸಿದರು.

ಕಿಟ್ ವಿತರಣೆ: ಈ ಸಂದರ್ಭದಲ್ಲಿ ಆಶಾಕಾರ್ಯಕರ್ತೆಯರಿಗೆ ದಿನಸಿ ಕಿಟ್ ಹಾಗೂ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ವತಿಯಿಂದ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಪರಿಕರಗಳನ್ನು ಸಚಿವರು ಸಾಂಕೇತಿಕವಾಗಿ ವಿತರಿಸಿದರು.

ಕೊರೋನಾ ನಿರ್ಮೂಲನೆ ಮಾಡಲು ಇನ್ನಷ್ಟೂ ಕ್ರೀಯಾಶೀಲತೆಯಿಂದ ಕಾರ್ಯಪಡೆಗಳು ಕೆಲಸಮಾಡಬೇಕಾಗಿದೆ. ಕೊರೋನಾ ಸೋಂಕಿತರಿಗೆ ನೀಡಬೇಕಾದ ಔಷಧಿಯ ಕೊರತೆಯಿದ್ದರೂ ಒದಗಿಸುವ ಕೆಲಸ ಮಾಡಲಾಗುವುದು. ಕೊರೋನಾದ ಜೊತೆ ಜೊತೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಾ ಇವೆ, ಡೆಂಗ್ಯೂ ಜ್ವರದ ಬಗ್ಗೆಯೂ ಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಇದೆ

ಎಸ್ ಅಂಗಾರ
ಸಚಿವರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.