HomePage_Banner
HomePage_Banner

ಬೆಳಂದೂರು ಗ್ರಾ.ಪಂ. ಕೋವಿಡ್-19 ಕಾರ್ಯಪಡೆ ಸಭೆ- ಕಿಟ್ ವಿತರಣೆ

ಮನವೊಲಿಸಿಯೂ ಒಪ್ಪದಿದ್ದರೆ ಪೊಲೀಸರ ಸಹಕಾರದಿಂದ ಕೋವಿಡ್ ಸೆಂಟರ್ ದಾಖಲಿಸಿ – ಎಸ್. ಅಂಗಾರ

ಚಿತ್ರ: ಸುಧಾಕರ್ ಕಾಣಿಯೂರು

ಕಾಣಿಯೂರು: ಕೊರೋನಾ ಸೋಂಕಿತರು ಮನವೊಲಿಕೆಯ ಬಳಿಕವೂ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಲು ಒಪ್ಪದಿದ್ದರೆ ಕಾರ್ಯಪಡೆಯ ಮುಖಾಂತರ ಪೊಲೀಸರ ಸಹಕಾರ ಪಡೆದು ಕೋವಿಡ್ ಸೆಂಟರ್‌ಗೆ ದಾಖಲಿಸಬೇಕು. ಮನೆಯ ಯಜಮಾನನಿಗೆ ಕೊರೋನಾ ಪಾಸಿಟಿವ್ ಬಂದಾಗ ತನ್ನ ಕುಟುಂಬದ ರಕ್ಷಣೆಯ ಬಗ್ಗೆ ಆಲೋಚನೆ ಮಾಡಿ ಇನ್ನೊಬ್ಬರಿಗೆ ಹರಡದಂತೆ ಕೋವಿಡ್ ಕೇರ್ ಸೆಂಟರ್‌ಗೆ ಕಡ್ಡಾಯವಾಗಿ ದಾಖಲಾಗಬೇಕು. ತಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಸಮಾಜದ ಆರೋಗ್ಯ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕೊರೋನಾ ನಿಯಂತ್ರಣಕ್ಕಾಗಿ ಹೆಚ್ಚಿನ ಹೋರಾಟ ಅಗತ್ಯ ಎಂದು ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರು, ಶಾಸಕ ಎಸ್. ಅಂಗಾರ ಹೇಳಿದರು.

ಅವರು ಬೆಳಂದೂರು ಕೆಲಂಬೀರಿ ರಾಜೀವಗಾಂಧಿ ಸಭಾಂಗಣದಲ್ಲಿ ಜೂ.19ರಂದು ನಡೆದ ಬೆಳಂದೂರು ಗ್ರಾ.ಪಂ. ಕೋವಿಡ್ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು. ಆಶಾಕಾರ್ಯಕರ್ತೆಯರ, ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸದಿದ್ದಾಗ ಮೇಲಾಧಿಕಾರಿಯವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಅತ್ಯಂತ ಸಮರ್ಥವಾಗಿ ಎದುರಿಸಿಕೊಂಡು ಕೋರೋನಾವನ್ನು ಪೂರ್ತಿ ನಿರ್ಮೂಲನೆ ಮಾಡಲು ಇನ್ನಷ್ಟೂ ಕ್ರೀಯಾಶೀಲತೆಯಿಂದ ಕಾರ್ಯಪಡೆಗಳು ಕೆಲಸ ನಿರ್ವಹಿಸಬೇಕು. ತಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ಹೊಸದಾಗಿ ಪಾಸಿಟಿವ್ ಪ್ರಕರಣಗಳು ಬರದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕಬೇಕು ಎಂದು ಸಚಿವರು ಹೇಳಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿದರು.

ಬೆಳಂದೂರು ಗ್ರಾ.ಪಂ.ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಗ್ರಾ.ಪಂ. ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಕಡಬ ತಹಶೀಲ್ಧಾರ್ ಅನಂತಶಂಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಸುಳ್ಯ ಮಂಡಲ ಬಿಜೆಪಿ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ. ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಜಿ.ಪಂ. ಮಾಜಿ ಸದಸ್ಯೆ ಪ್ರಮೀಳಾ ಜನಾರ್ದನ, ಬೆಳ್ಳಾರೆ ಪೊಲೀಸ್ ಠಾಣೆಯ ಠಾಣಾಧಿಕಾರಿ ಆಂಜನೇಯ ರೆಡ್ಡಿ, ಗ್ರಾ.ಪಂ. ಸದಸ್ಯರಾದ ಮೋಹನ್ ಅಗಳಿ, ಜಯಂತ್ ಅಬೀರ, ಉಮೇಶ್ವರಿ ಅಗಳಿ, ತಾರಾ ಅನ್ಯಾಡಿ, ಗೀತಾ ಕುವೇತ್ತೋಡಿ, ಕುಸುಮಾ ಅಂಕಜಾಲು, ಹರಿಣಾಕ್ಷಿ ಬನಾರಿ, ಪಾರ್ವತಿ ಮರಕ್ಕಡ, ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ, ಸವಣೂರು ಸಿಆರ್‌ಪಿ ಕುಶಾಲಪ್ಪ ಗೌಡ ಹಾಗೂ ಆರೋಗ್ಯ ಕೇಂದ್ರ ಸಿಬ್ಬಂದಿಗಳು, ಗ್ರಾಮಕರಣಿಕರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಗ್ರಾ.ಪಂ. ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾ.ಪಂ. ಪ್ರಭಾರ ಪಂಚಾಯತ್ ಅಭಿವೃಧಿ ಅಧಿಕಾರಿ ನಾರಾಯಣರವರು ಸ್ವಾಗತಿಸಿ, ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ವಂದಿಸಿದರು.

ಕಿಟ್ ವಿತರಣೆ: ಈ ಸಂದರ್ಭದಲ್ಲಿ ಆಶಾಕಾರ್ಯಕರ್ತೆಯರಿಗೆ ದಿನಸಿ ಕಿಟ್ ಹಾಗೂ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ವತಿಯಿಂದ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಪರಿಕರಗಳನ್ನು ಸಚಿವವರು ಸಾಂಕೇತಿಕವಾಗಿ ವಿತರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.