HomePage_Banner
HomePage_Banner

ಶಿಥಿಲಗೊಂಡ ಪಾಣಾಜೆ ಗ್ರಾಮ ಕರಣಿಕರ ಕಚೇರಿ ಕಟ್ಟಡ- ತಾತ್ಕಾಲಿಕವಾಗಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡಕ್ಕೆ ಸ್ಥಳಾಂತರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ: ಪಾಣಾಜೆ ಗ್ರಾಮ ಕರಣಿಕರ ಕಚೇರಿ ಕಟ್ಟಡ ತೀರಾ ಹದಗೆಟ್ಟು ಬೀಳುವ ಸ್ಥಿತಿಯಲ್ಲಿರುವುದರಿಂದ ಕಚೇರಿಯನ್ನು ತಾತ್ಕಾಲಿಕವಾಗಿ ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡದ ಕೊಠಡಿಗೆ ಜೂ.19 ರಂದು ಸ್ಥಳಾಂತರಿಸಲಾಯಿತು.
ಕಟ್ಟಡವು ತೀರಾ ಹದ ಗೆಟ್ಟಿದ್ದು ಗಾಳಿ ಮಳೆಗೆ ಮುರಿದು ಬೀಳುವ ಹಂತದಲ್ಲಿದ್ದು ಶೀಘ್ರವಾಗಿ ದುರಸ್ತಿ ಮಾಡಿ ಸರಿಪಡಿಸಿ ಕೊಡುವಂತೆ ಕಂದಾಯ ಇಲಾಖೆಯವರು ಗ್ರಾಮ ಪಂಚಾಯತ್ ಗೆ  ಮನವಿ ಸಲ್ಲಿಸಿದ ಕಾರಣ ಕಂದಾಯ ಇಲಾಖೆಯನ್ನು ತಾತ್ಕಾಲಿಕವಾಗಿ  ಸ್ಥಳಾಂತರಿಸಲಾಗಿದೆ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್ ತಿಳಿಸಿದ್ದಾರೆ.
ಕಂದಾಯ ಇಲಾಖೆ ಕಾರ್ಯನಿರ್ವಹಿಸುತ್ತಿರುವ ಕಟ್ಟಡವು ದುರಸ್ತಿಯಾಗುವವರೆಗೆ ಜೂ.20 ರಿಂದ ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ.
ಗ್ರಂಥಾಲಯವೂ ಸ್ಥಳಾಂತರ;  ಪಾಣಾಜೆ ಗ್ರಾಮ ಪಂಚಾಯತ್ ನ ಗ್ರಂಥಾಲಯ ಇರುವ  ಕಟ್ಟಡವೂ  ದುರಸ್ತಿಯಾಗ ಬೇಕಾದ  ಕಾರಣ ಗ್ರಂಥಾಲಯವನ್ನೂ ಕೂಡ ತಾತ್ಕಾಲಿಕವಾಗಿ ಪಾಣಾಜೆ ಸುಬೋಧ ಪ್ರೌಢಶಾಲೆಯ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಕಟ್ಟಡ ದುರಸ್ತಿಯಾಗುವವರೆಗೆ ಗ್ರಂಥಾಲಯವು ಸುಬೋಧ ಪ್ರೌಢಶಾಲೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್, ಉಪಾಧ್ಯಕ್ಷ ಅಬೂಬಕ್ಕರ್.ಕೆ ಸದಸ್ಯರಾದ ಸುಭಾಷ್ ರೈ, ನಾರಾಯಣ ನಾಯಕ್, ಮೋಹನ ನಾಯ್ಕ, ಸುಲೋಚನ ಮತ್ತೀತರರು ಕಚೇರಿ ಸ್ಥಳಾಂತರದ ಸಂದರ್ಭದಲ್ಲಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.