HomePage_Banner
HomePage_Banner

ಪುತ್ತಿಲ ಶ್ರೀರಾಮ ಗೆಳೆಯರ ಬಳಗದಿಂದ `ಮನೆಗೊಂದು ತುಳಸಿ ಕಟ್ಟೆ’ ವಿನೂತನ ಕಾರ್ಯಕ್ರಮ – ಹಿಂದೂ ಮನೆಗಳಿಗೆ ತುಳಸಿ ಕಟ್ಟೆ ವಿತರಣಾ ಅಭಿಯಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶ್ರೀರಾಮ ಗೆಳೆಯರ ಬಳಗ ಪುತ್ತಿಲ ವತಿಯಿಂದ `ಮನೆಗೊಂದು ತುಳಸಿ ಕಟ್ಟೆ’ ವಿನೂತನ ಕಾರ್ಯಕ್ರಮ ನಡೆಯಿತು. ಮುಂಡೂರು ಗ್ರಾಮದ ಪುತ್ತಿಲ ದೇವಪ್ಪ ಮುಗೇರ ಎಂಬವರ ಗೃಹ ಪ್ರವೇಶದ ದಿನ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ್ ಅವರು ಮುಂಡೂರು ಗ್ರಾ.ಪಂ ಸದಸ್ಯರಾದ ಅಶೋಕ್ ಪುತ್ತಿಲ ಮತ್ತು ಬಾಲಕೃಷ್ಣ ಪೂಜಾರಿಯವರ ಅವರ ಉಪಸ್ಥಿತಿಯಲ್ಲಿ ದೇವಪ್ಪ ದಂಪತಿಗಳಿಗೆ ತುಳಸಿಕಟ್ಟೆ ಹಸ್ತಾಂತರಿಸುವುದರ ಮೂಲಕ ಚಾಲನೆ ನೀಡಲಾಯಿತು. ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ ರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟನೆ ಪ್ರಮುಖರಾದ ಪ್ರಸಾದ್ ಬಿ.ಕೆ, ಧನಂಜಯ ನಾಯ್ಕ್, ಸತೀಶ್,
ವಸಂತ ರೈ, ಧನುಷ್, ಸಂತೋಷ್ ಉಪಸ್ಥಿತರಿದ್ದರು.

ಭಗವದ್ಗೀತೆ ಪರಿಕಲ್ಪನೆಯಡಿಯಲ್ಲಿ ವಿದೇಶಿ ಸಂಸ್ಕೃತಿಯನ್ನು ಅನುಸರಿಸುವ ಮಾನಸಿಕತೆಯನ್ನು ಮೆಟ್ಟಿ ನಿಂತು ಸನಾತನ ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಆಶಯಡೊಡನೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ನಮ್ಮ ಗ್ರಾಮದಲ್ಲಿ ಇರುವ ಎಲ್ಲಾ ಹಿಂದೂ ಮನೆಗಳ ಸಮೀಕ್ಷೆ ಮಾಡಿ ತುಳಸಿಕಟ್ಟೆ ಮತ್ತು ಭಗವದ್ಗೀತೆ ಪುಸ್ತಕ ಇಲ್ಲದ ಮನೆಗಳಿಗೆ ಸಂಘಟನೆ ವತಿಯಿಂದ ತುಳಸಿಕಟ್ಟೆ ಮತ್ತು ಪುಸ್ತಕಗಳನ್ನು ಕೊಡುವ ಉದ್ದೇಶಕ್ಕೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮ ಗೆಳೆಯರ ಬಳಗದ ಪದಾಧಿಕಾರಿಗಳು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.