HomePage_Banner
HomePage_Banner

ಸಮಾಜಸೇವೆ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟರು… ಏಕಾಂಗಿಯಾಗಿ 1 ಕಿ.ಮೀ. ರಸ್ತೆ ಬದಿ ಚರಂಡಿ ಸ್ವಚ್ಛ ಮಾಡಿದ ಗೋಪಾಲ‌ ನಾಯ್ಕರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸಮಾಜ ಸೇವೆಯನ್ನು ಹೀಗೂ ಮಾಡಬಹುದು ಎಂದು ಗೋಪಾಲ ನಾಯ್ಕ ಕಂಚಲಗುರಿ ಎಂಬವರು ಮಾಡಿ ತೋರಿಸಿದ್ದಾರೆ.
ಪುತ್ತೂರಿನ ಬೆದ್ರಾಳ- ರಾಗಿದಕುಮೇರು ಸಂಪರ್ಕ ರಸ್ತೆಯ ಸುಮಾರು 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗೋಪಾಲ ನಾಯ್ಕರವರು ರಸ್ತೆಯ ಎರಡೂ ಬದಿಯ ಚರಂಡಿಯನ್ನು‌ ಏಕಾಂಗಿಯಾಗಿ ಸ್ವಚ್ಛಗೊಳಿಸಿದ್ದಾರೆ.

ಮಾತ್ರವಲ್ಲದೆ, ರಸ್ತೆ ಬದಿಯಲ್ಲಿದ್ದ ಗಿಡಗಂಟಿಗಳನ್ನು ತೆರವು ಮಾಡಿದ್ದಾರೆ. ಜೂ 19ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಅವರು ಈ ಸೇವಾ ಕಾರ್ಯ ಮಾಡಿದ್ದಾರೆ. ಲಾಕ್ಡೌನ್ ಸಮಯವನ್ನು ಸದುಪಯೋಗ ಮಾಡಿಕೊಂಡು ಶ್ರಮದಾನದ ಮೂಲಕ‌ ಸಮಾಜಸೇವೆ ಮಾಡಿರುವ ಗೋಪಾಲರವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.‌

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.