HomePage_Banner
HomePage_Banner

ನಾಳೆ(ಜೂ.21) ಪುರಭವನದಲ್ಲಿ ಕೋವಿಡ್ -19 ಬೃಹತ್ ವ್ಯಾಕ್ಸಿನ್ ಮೇಳ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಹಲವಾರು ದಿನಗಳಿಂದ ಪುತ್ತೂರು ಪುರಭವನದಲ್ಲಿ ವಿವಿಧ ವಿಭಾಗದ ಉದ್ಯೋಗಿಗಳನ್ನು ಗುರುತಿಸಿ ಅವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದ್ದು, ಜೂ.21ರಂದು ‘ಕೋವಿಡ್-19 ಬೃಹತ್ ವ್ಯಾಕ್ಸಿನ್ ಮೇಳ’ ನಡೆಯಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ವ್ಯಾಕ್ಸಿನ್ ಮೇಳವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ಸಂಜೀವ ಮಠಂದೂರವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಿದ್ದಾರೆ. ಸದ್ರಿ ವ್ಯಾಕ್ಸಿನ್ ಮೇಳದಲ್ಲಿ 18 ವರ್ಷ ಮೇಲ್ಪಟ್ಟ ಅದ್ಯತಾ ಗುಂಪಿನ ಫಲಾನುಭವಿಗಳಾದ ಕಟ್ಟಡ ಕಾರ್ಮಿಕರು, ಬ್ಯೂಟಿಪಾರ್ಲರ್, ಸವಿತಾ ಸಮಾಜ, ವರ್ತಕರು, ಹೆಲ್ತ್‌ಕೇರ್ ವರ್ಕರ್‍ಸ್ ಕುಟುಂಬದವರಿಗೆ ಲಸಿಕೆ ನೀಡಲಾಗುವುದು. ಇದರ ಜೊತೆಗೆ ಪುತ್ತೂರು ಮತ್ತು ಕಡಬ ತಾಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳಲ್ಲೂ ಇದೇ ವ್ಯವಸ್ಥೆಯಲ್ಲಿ ಲಸಿಕೆ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.