HomePage_Banner
HomePage_Banner

ಕೊಯಿಲ ಸೌಹಾರ್ದ ಫ್ರೆಂಡ್ಸ್ ಆಶ್ರಯದಲ್ಲಿ ರಕ್ತದಾನ ಶಿಬಿರ

  • ಅತ್ಯಂತ ಶ್ರೇಷ್ಠವಾದ ದಾನ ರಕ್ತದಾನ-ಹರ್ಷಿತ್ ಕುಮಾರ್
  • ಪಂಚಾಯಿತಿ ಅಧ್ಯಕ್ಷರು ರಕ್ತದಾನ ಮಾಡುವ ಕಾರ್‍ಯಕ್ರಮಕ್ಕೆ ಚಾಲನೆ

ಉಪ್ಪಿನಂಗಡಿ: ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದ್ದು, ಇದು ಜೀವದಾನಕ್ಕೆ ಸಮಾನವಾಗಿದ್ದು ಎಂದು ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರ್ಷಿತ್ ಕುಮಾರ್ ಹೇಳಿದರು.

ಅವರು ಜೂ. 20ರಂದು ಕೊಯಿಲದಲ್ಲಿ ಸೌಹಾರ್ದ ಫ್ರೆಂಡ್ಸ್ ಕೊಲ ಇದರ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಲೇಡಿಗೋಶನ್ ಆಸ್ಪತ್ರೆ ಮಂಗಳೂರು, ಅಕ್ಷಯ ಚಾರಿಟೇಬಲ್ ಟ್ರಸ್ಟ್ ಇದರ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಬಳಿಕ ಸ್ವಯಂಪ್ರೇರಿತನಾಗಿ ತಾನೇ ರಕ್ತದಾನ ಮಾಡುವ ಮೂಲಕ ಕಾರ್‍ಯಕ್ರಮಕ್ಕೆ ಚಾಲನೆ ನೀಡಿದರು.

ಇಂದಿನ ಕೊರೊನಾ ಸಂಕಷ್ಟದ ಲಾಕ್‌ಡೌನ್ ಸಂದರ್ಭದ ದಿನಗಳಲ್ಲಿ ರಕ್ತ ಕೊಡುವವರ ಸಂಖ್ಯೆ ಬಹಳ ಕಡಿಮೆ, ಹೀಗಿದ್ದರೂ ಇಲ್ಲಿನ ಯುವಕರು ಉತ್ತಮ ಸೇವೆಗೆ ಮುಂದಾಗಿರುವುದು ಶ್ಲಾಘನೀಯವಾಗಿದೆ. ಕೊಲ ಗ್ರಾಮವನ್ನು ಕೊರೊನಾ ಮುಕ್ತ ಮಾಡುವ ನಿಟ್ಟಿನಲ್ಲಿ ಪಂಚಾಯಿತಿ ಆಡಳಿತ ಕೆಲಸ ಮಾಡುತ್ತಿದ್ದು, ಈ ನಿಟ್ಟಿನಲ್ಲಿಯೂ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಅಕ್ಷಯ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಕರೀಂ ಕದ್‌ಕ್ಕಾರ್ ಮಾತನಾಡಿ ನಮ್ಮೀ ಸಂಸ್ಥೆಯ ಮೂಲಕ ಇದೀಗ ೫ನೇ ಶಿಬಿರ ನಡೆಯುತ್ತಿದ್ದು, ಬಹಳಷ್ಟು ಮಂದಿಗೆ ತೀರಾ ಅಗತ್ಯ ಎಂದೆನಿಸಿದಾಗ ರಕ್ತ ದೊರಕುವುದಿಲ್ಲ, ಅದರಲ್ಲೂ ಆಹೋರಾತ್ರಿಯಲ್ಲಿ ಒಂದು ಜೀವ ಉಳಿಸುವುದಕ್ಕಾಗಿ ರಕ್ತಕ್ಕಾಗಿ ಹರ ಸಾಹಸ ಪಡಬೇಕಾಗುತ್ತದೆ, ಇದನ್ನೆಲ್ಲ ಮನಗಂಡು ನಾವು ಈ ಸೇವೆಗೆ ಮುಂದಾಗಿದ್ದು, ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ಕಾರ್‍ಯಕ್ರಮದಲ್ಲಿ ಕೊಲ ಗ್ರಾಮ ಪಂಚಾಯಿತಿ ಸದಸ್ಯ ನಝೀರ್ ಪೂರಿಂಗ, ಲೇಡಿಗೋಶನ್ ಆಸ್ಪತ್ರೆಯ ಡಾ. ಬಿಳಾಲ್ ಬಂಟ್ವಾಳ, ಡಾ. ಜೀವನ್, ಅಕ್ಷಯ ಚಾರಿಟೇಬಲ್ ಟ್ರಸ್ಟ್‌ನ ಝಕರಿಯಾ ನಾರ್ಶ, ಖಾದರ್ ನಾರ್ಶ, ಸೈಫುಲ್ಲ ಉಪಸ್ಥಿತರಿದ್ದರು.

ಕೊಯಿಲ ಸೌಹಾರ್ದ ಫ್ರೆಂಡ್ಸ್ ಸಂಸ್ಥೆಯ ಹಸೈನಾರ್ ಸ್ವಾಗತಿಸಿ, ಫೈಝಲ್ ವಂದಿಸಿದರು. ಆಶಿಫ್ ಕೊಲ ಕಾರ್‍ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.