HomePage_Banner
HomePage_Banner

ಸಂಪ್ಯ: ಗದ್ದೆಗೆ ಇಳಿಯೋಣ- ಬೇಸಾಯ ಮಾಡೋಣ ಅಭಿಯಾನಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಂಪ್ಯ ಮಹಾವಿಷ್ಣು ಮೂರ್ತಿ ದೇವಸ್ಥಾನ ಹಾಗು ನವಚೇತನಾ ಯುವಕ ಮಂಡಲದ ನೇತೃತ್ವ

ಸಂಪ್ಯ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮಿತಿಯ ಕಲ್ಪನೆಯ ಯೋಜನೆ ಗದ್ದೆಗೆ ಇಳಿಯೋಣ- ಬೇಸಾಯ ಮಾಡೋಣ ಅಭಿಯಾನಕ್ಕೆ ಕಾರ್ಯಗತ ಮಾಡುವ ನಿಟ್ಟಿನಲ್ಲಿ ಭತ್ತ ಬೇಸಾಯ ಮಾಡುವ ಕಾರ್ಯಕ್ಕೆ  ಜೂ.20 ರಂದು ಸಂಪ್ಯ ಮಹಾ ವಿಷ್ಣು ಮೂರ್ತಿ ದೇವಸ್ಥಾನ ಮತ್ತು ನವಚೇತನಾ ಯುವಕ ಮಂಡಲ ಸಂಪ್ಯ ಇದರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಮೊದಲು
ನಂತರ

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಭತ್ತ ಬೇಸಾಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ವನ್ನು ಪ್ರಾರಂಭಿಸಿದ್ದು ದೇವರ ಆಶೀರ್ವಾದದಿಂದ ಉತ್ತಮ ಬೆಳೆ ಪಡೆಯುವಂತಾಗಲಿ ಈ ಮೂಲಕ ಇನ್ನೂ ಹೆಚ್ಚು ಭತ್ತ ದ ಬೇಸಾಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗಲಿ ಎಂದು ನುಡಿದರು. ಹಾಗೂ ಈ ಕೆಲಸಕ್ಕೆ ಉತ್ತೇಜನ ಹಾಗೂ ಸಹಕಾರ ನೀಡಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಆಡಳಿತ ವರ್ಗಕ್ಕೂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳಿಗೂ ಕ್ರತಜ್ಙತೆ ಸಲ್ಲಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳಾದ ಉಮೇಶ್ , ಉಮೇಶ್ ಆಗಮಿಸಿ ಬೇಸಾಯ ನಡೆಸುವ ಬಗ್ಗೆ ಮಾಹಿತಿ ನೀಡಿದರು.

ಸಂಪ್ಯ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಯ ಕುಮಾರ್ ನಾಯರ್, ಲಕ್ಷ್ಮಣ ಬೈಲಾಡಿ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ, ವಿನ್ಯಾಸ್ ಗೌಡ, ಪ್ರೇಮ ಸಪಲ್ಯ, ಅರ್ಚಕರಾದ ಮೋಹನ್ ರಾವ್ ಪಜಿಮಣ್ಣು ಉಪನ್ಯಾಸಕಿ ಹರಿಣಿ ಪುತ್ತೂರಾಯ, ಬೇಸಾಯಕ್ಕೆ ಗದ್ದೆ ನೀಡಿದ ಸ್ಥಳದ ಮಾಲಕರಾದ ಚಂದ್ರಾವತಿ ಉಗ್ಗಪ್ಪ ಗೌಡ, ನವಚೇತನಾ ಯುವಕ ಮಂಡಲದ ಅಧ್ಯಕ್ಷ ವಿಜಯ ಬಿ.ಎಸ್. ಹಾಗೂ ಸದಸ್ಯರು, ಸಂಪ್ಯ ವಿಷ್ಣು ಬಳಗದ ಸದಸ್ಯರು, ಹಾಗೂ ಸ್ಥಳೀಯರು ಸಮಾರು ಐವತ್ತಕ್ಕೂ ಹೆಚ್ಚು ಮಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.