HomePage_Banner
HomePage_Banner

ರೆಂಜಲಾಡಿ ಸ್ಪೋರ್ಟಿಂಗ್ ಕ್ರಿಕೆಟರ್ಸ್‌, ಸರ್ವೆ ಸೌಹಾರ್ದ ವೇದಿಕೆ ಆಶ್ರಯದಲ್ಲಿ ಸರ್ವೆ ಕಲ್ಪಣೆ ಶಾಲಾ ಪರಿಸರ ಸ್ವಚ್ಛಗೊಳಿಸಿ ಮಾದರಿಯಾದ ಯುವಕರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸ್ಪೋರ್ಟಿಂಗ್ ಕ್ರಿಕೆಟರ್ಸ್ ರೆಂಜಲಾಡಿ ಹಾಗೂ ಸೌಹಾರ್ದ ವೇದಿಕೆ ಸರ್ವೆ ವತಿಯಿಂದ ಸರ್ವೆ ಗ್ರಾಮದ ಕಲ್ಪಣೆ ಸರಕಾರಿ ಹಿ.ಪ್ರಾ.ಶಾಲಾ ಪರಿಸರ ಸ್ವಚ್ಛತಾ ಕಾರ್ಯಕ್ರಮ ಜೂ.20ರಂದು ನಡೆಯಿತು. ಶಾಲಾ ವಠಾರ ಮತ್ತು ಪರಿಸರದಲ್ಲಿ ಬೆಳೆದಿದ್ದ ಹುಲ್ಲು, ಗಿಡಗಂಟಿ, ಪೊದರುಗಳನ್ನು ಕತ್ತರಿಸಿ ತೆರವುಗೊಳಿಸಿದ ಯುವಕರು ಶಾಲಾ ಕಟ್ಟಡದ ಮೇಲ್ಭಾಗ ಹಾಗೂ ಮೈದಾನದ ಸುತ್ತಮುತ್ತ ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಮೂಲಕ ಶಾಲಾ ಪರಿಸರವನ್ನು ಕಂಗೊಳಿಸುವಂತೆ ಮಾಡಿದ್ದಾರೆ. ಸುಮಾರು 20ರಷ್ಟು ಯುವಕರು ಸೇರಿಕೊಂಡು ನಡೆಸಿದ ಸ್ವಚ್ಛತಾ ಶ್ರಮದಾನ ಬೆಳಗ್ಗಿನಿಂದ ಸಂಜೆ ವರೆಗೆ ನಡೆಯಿತು.

ಸರ್ವೆ ಸೌಹಾರ್ದ ವೇದಿಕೆ ಅಧ್ಯಕ್ಷ, ಕಲ್ಪಣೆ ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿರುವ ಕೆ.ಎಂ ಹನೀಫ್ ರೆಂಜಲಾಡಿ, ಬಾತಿಷ ಬಾಳಾಯ, ಅಬ್ದುಲ್ ಹಕ್ ರೆಂಜಲಾಡಿ, ಜಾಬಿರ್ ಸುಲ್ತಾನ್ ಬಾಳಾಯ, ಮುಸ್ತಫಾ ರೆಂಜಲಾಡಿ, ಯಾಸಿರ್ ಅರಾಫತ್ ಕೌಸರಿ, ಹಾರಿಸ್ ಕೂಡುರಸ್ತೆ, ಇಸ್ಮಾಯಿಲ್ ಬಾಳಾಯ, ಫೈಝಲ್ ರೆಂಜಲಾಡಿ, ಕಲಂದರ್ ರೆಂಜಲಾಡಿ, ನಿಝಾರ್ ರೆಂಜಲಾಡಿ,, ತಮೀಮ್ ರೆಂಜಲಾಡಿ, ಶರೀಫ್ ಕಲ್ಪನೆ, ಬಾತಿಷ ಪರಾಡ್, ರಝಾಕ್ ರೆಂಜಲಾಡಿ, ಸಫ್ವಾನ್ ರೆಂಜಲಾಡಿ, ಅಜ್ಮಲ್ ರೆಂಜಲಾಡಿ, ತ್ವಾಹಿರ್ ಕಲ್ಪನೆ, ಸುಹೈಲ್ ರೆಂಜಲಾಡಿ, ಸುಲ್ತಾನ್ ರೆಂಜಲಾಡಿ ಶ್ರಮದಾನದಲ್ಲಿ ಭಾಗವಹಿಸಿದ್ದರು.

ಶಾಲಾ ಪರಿಸರ ಸಂಪೂರ್ಣ ಸ್ವಚ್ಛವಾಗಿದೆ-ಕೆ.ಎಂ ಹನೀಫ್ ರೆಂಜಲಾಡಿ
ನಮ್ಮೂರಿನ ಶಾಲಾ ಪರಿಸರವನ್ನು ಶ್ರಮದಾನದ ಮೂಲಕ ಸಂಪೂರ್ಣವಾಗಿ ಸ್ವಚ್ಛತೆ ಮಾಡಲಾಗಿದೆ. ಸ್ಪೋರ್ಟಿಂಗ್ ಕ್ರಿಕೆಟರ್ಸ್ಸ್ ರೆಂಜಲಾಡಿ ಮತ್ತು ಸೌಹಾರ್ದ ವೇದಿಕೆ ಸರ್ವೆ ಇದರ ಸುಮಾರು ೨೦ರಷ್ಟು ಯುವಕರು ಸೇರಿಕೊಂಡು ಶ್ರಮದಾನ ನಡೆಸಿ ಶಾಲಾ ಪರಿಸರವನ್ನು ಅಂದಗೊಳಿಸಿದ್ದೇವೆ. ಲಾಕ್‌ಡೌನ್ ಸಂದರ್ಭವನ್ನು ಸದ್ವಿನಿಯೋಗಪಡಿಸಿಕೊಂಡ ಯುವಕರು ಉತ್ತಮ ಮಾದರಿ ಕಾರ್ಯವನ್ನು ಮಾಡಿದ್ದಾರೆ ಎಂದು ಸರ್ವೆ ಸೌಹಾರ್ದ ವೇದಿಕೆ ಅಧ್ಯಕ್ಷ, ಕಲ್ಪಣೆ ಪ್ರಾ.ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರೂ ಆಗಿರುವ ಕೆ.ಎಂ ಹನೀಫ್ ರೆಂಜಲಾಡಿ ತಿಳಿಸಿದ್ದಾರೆ.

ಗ್ರಾಮಸ್ಥರಿಂದ ಮೆಚ್ಚುಗೆ:
ಗ್ರಾಮದಲ್ಲಿ ಅನೇಕ ಸೌಹಾರ್ದ ಕಾರ್ಯಕ್ರಮಗಳ ಮೂಲಕ ಹೆಸರನ್ನು ಪಡೆದಿರುವ ಸೌಹಾರ್ದ ವೇದಿಕೆ ಸದಸ್ಯರು ಹಾಗೂ ಕ್ರಿಕೆಟ್ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆಯನ್ನು ಹೊಂದಿರುವ ರೆಂಜಲಾಡಿ ಸ್ಪೋರ್ಟಿಂಗ್ ಕ್ರಿಕೆಟರ್ಸ್ಸ್ ತಂಡ ಸದಸ್ಯರು ಮಾಡಿರುವ ಸ್ವಚ್ಛತಾ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.