HomePage_Banner
HomePage_Banner

ನಾಳೆಯಿಂದ(ಜೂ.23) ಎಲ್ಲಾ ಅಂಗಡಿಗಳು ಓಪನ್ – ಸಚಿವ ಕೋಟ ಶ್ರೀನಿವಾಸ ಪೂಜಾರಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಿಲ್ಲೆಯಲ್ಲಿ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಒಂದಷ್ಟು ಸಮಸ್ಯೆ ಆಗಿದೆ. ಜವುಳಿ ವ್ಯಾಪಾರಸ್ಥರು, ಜೆರಾಕ್ಸ್ ಸೇರಿದಂತೆ ಬೇರೆ ಬೇರೆ ಅಂಗಡಿಯವರು ಮಾಲಿಕರು ನಮಗೆ ಬದುಕು ಕಟ್ಟಿಕೊಳ್ಳಲು ಕಷ್ಟ ಆಗಿದೆ ಎಂಬ ಮನವಿ ಮತ್ತು ಜಿಲ್ಲೆಯ ಶಾಸಕರು ಲಾಕ್‌ಡೌನ್ ಸಡಿಲಗೊಳಿಸಲು ಆಗ್ರಹಿಸಿದ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್‌ವರು ಲಾಕ್‌ಡೌನ್ ಸಡಿಲಿಕೆಗೆ ಸೂಚನೆ ಕೊಟ್ಟಂತೆ ಮುಖ್ಯಮಂತ್ರಿಗಳಲ್ಲಿ ಮಾತುಕತೆ ನಡೆಸಿದ್ದೇನೆ.

ಅದರಂತೆ ಮುಖ್ಯಮಂತ್ರಿಗಳು ನಾಳೆಯಿಂದ ಎಲ್ಲಾ ರೀತಿಯ ಅಂಗಡಿ ಮುಂಗಟ್ಟು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ತೆರೆಯಬಹುದೆಂದು ಆದೇಶ ಕೊಟ್ಟಿದ್ದಾರೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಚಿವರಿಂದ  ವಿನಂತಿ:
ನಾವು ಕಠಿಣ ಪರಿಸ್ಥಿತಿಯಲ್ಲಿ ತುಂಬಾ ಆತಂಕಕಾರಿ ಪರಿಸ್ಥಿತಿಯಲ್ಲಿ ಸ್ವೇಚಾಚಾರಿಯಾಗಿ ತಿರುಗಾಟ ಮಾಡುವುದನ್ನು ನಿಲ್ಲಿಸಬೇಕು. ವ್ಯಾಕ್ಸಿನ್‌ಗಳನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು. ನಮ್ಮ ಕೋವಿಡ್ ನಿಯಮ ಯಾವುದೇ ರೀತಿಯಲ್ಲಿ ಉಲ್ಲಂಘಿಸಬಾರದು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೆಲವೆ ಕ್ಷಣದಲ್ಲಿ ಅಧಿಕೃತ ಆದೇಶ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಎಲ್ಲರು ಒಟ್ಟಾಗಿ ಸೇರಿ ಕೊರೋನಾ ಎದುರಿಸಬೇಕು. ಯಾವುದೇ ಕಾರಣಕ್ಕೂ ಕೊರೋನಾ ನಿಯಮ ಉಲ್ಲಂಘಿಸಬಾರದೆಂದು ಎಂದು ಸಚಿವರು ವಿನಂತಿಸಿದ್ದಾರೆ.

About The Author

Related posts

1 Comment

  1. [email protected]

    ಇಷ್ಟೆಲ್ಲಾ ಮಾಡಿ ಕೊರೊನಾ ನಿಯಮ ಪಾಲನೆ ಅನ್ನೋದು ಹಾಸ್ಯಾಸ್ಪದ. ಮತ್ತು ಅದು ಸಾಧ್ಯವಿಲ್ಲ ಕೂಡ..ಬೇಕಾದರೆ ನಾಳೆಯಿಂದ ನೋಡಿಕೊಳ್ಳಿ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.