HomePage_Banner
HomePage_Banner

ಬೆಳಂದೂರು ಕಾಲೇಜಿನಲ್ಲಿ ಟ್ಯಾಬ್ಲೆಟ್ ಪಿಸಿ ಹಸ್ತಾಂತರ- ಐಸಿಟಿಸ್ಮಾರ್ಟ್ ಕ್ಲಾಸ್ ರೂಮ್ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ಬೆಳಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸರ್ಕಾರ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಕಲಿಕೆ ಅಂಗವಾಗಿ 2020-21 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಬಿ.ಎ ಮತ್ತು ಬಿ.ಕಾಂ ಪದವಿಗಳಿಗೆ ದಾಖಲಾದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿ ಗಳ ಹಸ್ತಾಂತರ ಹಾಗೂ ಐಸಿಟಿ ಸ್ಮಾರ್ಟ್ ಕ್ಲಾಸ್ ರೂಮ್ ನ ಉದ್ಘಾಟನಾ ಕಾರ್ಯಕ್ರಮವು ಜೂ 23ರಂದು ನಡೆಯಿತು. ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ.ಕೆಡೆಂಜಿಕಟ್ಟರವರು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ಪಿಸಿ ಗಳನ್ನು ಹಸ್ತಾಂತರಿಸಿ ಸ್ಮಾರ್ಟ್ ಕ್ಲಾಸ್ ರೂಮ್ ಉದ್ಘಾಟಿಸಿ ಸರ್ಕಾರದ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ವೈಯಕ್ತಿಕ ಸಾಧನೆಯೊಂದಿಗೆ ಕಾಲೇಜಿಗೆ ಕೀರ್ತಿ ತರುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ‌ ಪ್ರಾಂಶುಪಾಲರಾದ ಪ್ರೊ.ಪದ್ಮನಾಭ.ಕೆ ಇವರು ವಹಿಸಿದ್ದರು. ಬೆಳಂದೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ನಾರಾಯಣರವರು ಹಾಗೂ ಪ್ರಾಧ್ಯಾಪಕರಾದ ಪ್ರೊ.ವೆಂಕಟೇಶ ಪ್ರಸನ್ನ, ಬೋಧಕೇತರ ಸಿಬ್ಬಂದಿಗಳಾದ ಮನೋಹರ್, ಶ್ವೇತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಸ್ವಾಮಿ.ಎಸ್ ಕಾರ್ಯಕ್ರಮ ನಿರ್ವಹಿಸಿದರು. ಕೋವಿಡ್-19 ರ ಮಾರ್ಗಸೂಚಿಗಳ ಅನುಸಾರ ಕಾರ್ಯಕ್ರಮ ನೆರವೇರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.