HomePage_Banner
HomePage_Banner

ನರಿಮೊಗರು ಮರಾಟಿ ಸಮಾಜ ಸೇವಾ ಸಂಘದಿಂದ ದಿನಸಿ ಕಿಟ್ ವಿತರಣೆ

ಪುತ್ತೂರು: ಕೋವಿಡ್ ಸಂದರ್ಭದಲ್ಲಿ ಸಂಕಷ್ಟಕ್ಕೊಳದಾ ಸಮಾಜ ಬಾಂಧವರಿಗೆ ನರಿಮೊಗರು ಮರಾಟಿ ಸಮಾಜ ಸೇವಾ ಸಂಘದಿಂದ ದಿನಸಿ ಆಹಾರದ ಕಿಟ್ ವಿತರಣೆ ಜೂ. 24ರಂದು ನಡೆಯಿತು.

ಸಂಘದ ಅಧ್ಯಕ್ಷ ಪರಮೇಶ್ವರವರ ನೆರವಿನೊಂದಿಗೆ ಸ್ಥಾಪಕ ಅಧ್ಯಕ್ಷ ಮಹಾಲಿಂಗ ನಾಯ್ಕ, ಪ್ರಧಾನ ಕಾರ್ಯದರ್ಶಿ ಬಿ.ಕೆ.ಸುಂದರ, ಖಜಾಂಜಿ ಯೋಗಿಶ್ ಶಾಂತಿಗೋಡು, ಶೀನಪ್ಪ ನಾಯ್ಕ ನೆಕ್ಕಿಲು, ಶಿವಪ್ರಸಾದ್ ಬಜಪ್ಪಾಲ, ಮೋಹನ ನಾಯ್ಕ, ಕೊರಗಪ್ಪ ನಾಯ್ಕ ಕಲ್ಲಮ, ಸುಂದರ ನಾಯ್ಕ ಮಾಯಂಗಲ, ಸಂಕಪ್ಪ ನಾಯ್ಕ ಪಂಜಳ ಅವರು ಆಹಾರದ ಕಿಟ್ ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಕೋವಿಡ್ ನಿಂದಾಗಿ ಸಮಾಜ ಬಾಂಧವರಿಗೆ ಯಾವುದೆ ರೀತಿಯ ಸಂಕಷ್ಟ ಎದುರಾಗದೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ಸಂಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ಸಂಘದ ಮೂಲಕ ಸಹಕಾರ ನೀಡಲಾಗುವುದು. ಇದಕ್ಕಾಗಿ ಸಹಾಯವಾಣಿ ತೆರೆಯಲಾಗಿದ್ದು, ಫಲಾನುಭವಿಗಳು ದೂರವಾಣಿ ಸಂಖ್ಯೆ ಮೊ: 8310108145, 9449161133, 9743599653, 8050398067 ಅನ್ನು ಸಂಪರ್ಕಿಸುವಂತೆ ಸಂಘದ ಅಧ್ಯಕ್ಷ ಪರಮೇಶ್ವರ ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.