HomePage_Banner
HomePage_Banner

ಕಾವು: ಕೊರೋನಾ ವಾರಿಯರ್ಸ್‌ಗಳಿಗೆ ದಿನಸಿ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾವು: ಕೋವಿಡ್ ಲಾಕ್‌ಡೌನ್ ಸಂಕಷ್ಟದಲ್ಲಿ ಕೊರೊನಾ ವಾರಿಯಾರ್ಸ್‌ಗಳಾಗಿ ಸೇವೆ ಸಲ್ಲಿಸಿದ ಮಾಡ್ನೂರು ಗ್ರಾಮದ ಆರೋಗ್ಯ ಸಹಾಯಕಿಯರಿಗೆ, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಗೆ ದಿನಸಿ ಕಿಟ್ ವಿತರಣೆಯು ಕಾವು ಸರಯೂ ಕ್ಲಿನಿಕ್ ಬಳಿಯಲ್ಲಿ ನಡೆಯಿತು.

ಕಾವು ಸರಯೂ ಕ್ಲಿನಿಕ್ ಮತ್ತು ಮೆಡಿಕಲ್ಸ್‌ನ ಡಾ. ನವೀನಶಂಕರ್, ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿ, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಶಿವಪ್ರಸಾದ್ ಕೊಚ್ಚಿ, ಮಧು ಮಲ್ಟಿಪಲ್ಸ್‌ನ ವೆಂಕಟಕೃಷ್ಣ ಎಂ.ಎನ್, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಸದಸ್ಯ ಮಳಿ ರಾಮಚಂದ್ರ ಭಟ್‌ರವರ ನೇತೃತ್ವದಲ್ಲಿ ಕಿಟ್ ವಿತರಣೆ ಮಾಡಲಾಯಿತು. ಆರೋಗ್ಯ ಸಹಾಯಕಿಯರಾದ ನವ್ಯ, ಜೆಸಿಂತಾ, ಆಶಾಕಾರ್ಯಕರ್ತೆಯರಾದ ಮಮತಾ ರಾವ್, ಉಷಾಲತಾ, ಪ್ರಮೀಳಾ, ಉಷಾ ಡಿ.ಎಂ, ಹರಿಣಾಕ್ಷಿ, ಅಂಗನವಾಡಿ ಕಾರ್ಯಕರ್ತೆಯರಾದ ಸೀತಾರತ್ನ, ತಿಲಕ, ಸವಿತಾ, ಜಲಜ, ಶೋಭಾ, ಉಷಾಪೂರ್ಣ ಮತ್ತು ಅಂಗನವಾಡಿ ಸಹಾಯಕಿಯರಿಗೆ ಅಗತ್ಯ ವಸ್ತುಗಳ ದಿನಸಿ ಕಿಟ್ ವಿತರಣೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.