HomePage_Banner
HomePage_Banner

ತಿಂಗಳೊಳಗೆ ಪುತ್ತೂರಿನಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಜಿಲ್ಲಾಡಳಿತ ನಿರ್ಧಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ -೧೯ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೋವಿಡ್ ಪರೀಕ್ಷಾ ವರದಿ ಅತೀ ಶೀಘ್ರದಲ್ಲಿ ನೀಡಬೇಕೆನ್ನುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಪುತ್ತೂರು ಉಪವಿಭಾಗಕ್ಕೆ ಸಂಬಂಧಿಸಿದಂತೆ ಪುತ್ತೂರಿನಲ್ಲಿ ಕೋವಿಡ್ ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸುವ ಕುರಿತು ನಿರ್ಧಾರ ಕೈಗೊಂಡಿದೆ. ಪುತ್ತೂರಿನಲ್ಲಿ ಪ್ರಾರಂಭವಾಗುವ ಕೋವಿಡ್ ಪರೀಕ್ಷಾ ಕೇಂದ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೨ನೇಯದ್ದಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ರವರು ತಿಳಿಸಿದ್ದಾರೆ.

ಜಿಲ್ಲಾ ಕೇಂದ್ರದ ಲ್ಯಾಬ್ ಮೇಲೆ ಬೀಳುವ ಒತ್ತಡವನ್ನು ತಪ್ಪಿಸಲು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿರವರ ಸೂಚನೆಯಂತೆ ಒಂದು ತಿಂಗಳ ಹಿಂದೆ ಸುಳ್ಯ ಕೆ.ವಿ.ಜಿ. ಮಹಾವಿದ್ಯಾಲಯದ ಮೂಲಸೌಕರ್ಯ ವ್ಯವಸ್ಥೆ ಬಳಸಿಕೊಂಡು ಲ್ಯಾಬ್ ಆರಂಭಿಸಲಾಗಿತ್ತು. ಪುತ್ತೂರು, ಕಡಬ, ಸುಳ್ಯ ತಾಲೂಕುಗಳಲ್ಲಿ ಸಂಗ್ರಹಿಸಿದ ಗಂಟಲ ದ್ರವದ ಮಾದರಿಗಳನ್ನು ಅಲ್ಲಿಗೆ ಕೊಂಡೊಯ್ದು ಪರೀಕ್ಷೆ ನಡೆಸಿ ವರದಿ ನೀಡಲಾಗುತ್ತಿತ್ತು. ಪುತ್ತೂರಿನಲ್ಲಿ ಸರಿಯಾದ ಪ್ರಯೋಗಾಲಯದ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಸುಳ್ಯ ಕೆ.ವಿ.ಜಿ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕವಾಗಿ ಲ್ಯಾಬ್ ಸ್ಥಾಪಿಸಲಾಗಿತ್ತು. ಆದರೆ ಇದೀಗ ಯಂತ್ರೋಪಕರಣಗಳನ್ನು ಪುತ್ತೂರಿಗೆ ವರ್ಗಾಯಿಸಿ ಪೂರ್ಣ ಪ್ರಮಾಣದ ಸರಕಾರಿ ಲ್ಯಾಬ್ ನಿರ್ಮಿಸಲು ನಿರ್ಧರಿಸಲಾಗಿದೆ. ಮುಂದೆ ಮಂಗಳೂರಿನ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿರುವ ಸ್ವೇಬ್ ಟೆಸ್ಟ್(ಗಂಟಲು ದ್ರವ ಮಾದರಿ) ಲ್ಯಾಬ್‌ನ ರೀತಿಯಲ್ಲೇ ಪುತ್ತೂರಿನ ಪರೀಕ್ಷಾ ಕೇಂದ್ರ ಕಾರ್ಯನಿರ್ವಹಿಸಲಿದೆ. ಪುತ್ತೂರು ನಗರದಲ್ಲಿ ಎರಡು ಮೂರು ಕಡೆಗಳಲ್ಲಿ ಲ್ಯಾಬ್ ನಿರ್ಮಾಣ ಮಾಡಲು ಉತ್ತಮ ಸ್ಥಳಕ್ಕಾಗಿ ಹುಡುಕಾಟ ನಡೆಸಲಾಗಿತ್ತು. ಅಂತಿಮವಾಗಿ ತಾ.ಪಂ. ವಾಣಿಜ್ಯ ಸಂಕೀರ್ಣದ ಮೊದಲ ಮಹಡಿಯಲ್ಲಿ ಲ್ಯಾಬ್ ಆರಂಭಿಸಲು ನಿರ್ಧರಿಸಲಾಗಿದೆ. ಈ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದ ಜಿಲ್ಲಾಧಿಕಾರಿಯವರು ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸರಕಾರಿ ಕೋವಿಡ್ ಸ್ವಾಬ್ ಟೆಸ್ಟ್ ಲ್ಯಾಬ್ ಪುತ್ತೂರಿನಲ್ಲಿ ಪ್ರಾರಂಭಗೊಳ್ಳಿದೆ ಎಂದರು.

ಸ್ಥಳ ಪರಿಶೀಲಿಸಲಾಗಿದೆ
ಒತ್ತಡದ ಹಿನ್ನೆಲೆಯಲ್ಲಿ ಮಾದರಿ ಪರೀಕ್ಷಾ ವರದಿ ಬರಲು ೩,೪ ದಿನ ತಗುಲುತ್ತಿದ್ದು, ಈ ಪರ್ಯಾಯ ವ್ಯವಸ್ಥೆಯಿಂದಾಗಿ ೪೮ ಗಂಟೆಯಲ್ಲಿ ವರದಿ ಪಡೆಯಲು ಸಾಧ್ಯವಾಗಿದೆ. ಪುತ್ತೂರಿನಲ್ಲಿ ಹಲವು ಕಡೆ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಅಂತಿಮವಾಗಿ ತಾ.ಪಂ ಕಚೇರಿ ಪಕ್ಕದ ಕಟ್ಟಡವನ್ನು ನೋಡಲಾಗಿದೆ – ಸಂಜೀವ ಮಠಂದೂರು, ಶಾಸಕರು ಪುತ್ತೂರು

೧ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ
ಪುತ್ತೂರು ಉಪವಿಭಾಗ ವ್ಯಾಪ್ತಿಯಲ್ಲಿಯೇ ಕೋವಿಡ್ ಪರೀಕ್ಷಾ ಕೇಂದ್ರ ಇರಬೇಕಾಗಿದ್ದು, ಸುಳ್ಯ, ಪುತ್ತೂರು, ಕಡಬ ಮತ್ತು ಬೆಳ್ತಂಗಡಿ ತಾಲೂಕುಗಳಿಗೆ ಸಂಬಂಧಪಟ್ಟು ಒಂದು ಸುಸಜ್ಜಿತ ಲ್ಯಾಬ್ ಪುತ್ತೂರಿನಲ್ಲಿ ಸುಮಾರು ರೂ. ೧ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಎಸ್‌ಡಿಆರ್‌ಎಫ್‌ನಿಂದ ಇದರ ವೆಚ್ಚ ಭರಿಸಲಾಗುವುದು. ಕೆ.ವಿ.ಜಿ. ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾದ ಯಂತ್ರೋಪಕರಣಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುತ್ತದೆ. ಮುಂದೆ ಜಿಲ್ಲೆಯಲ್ಲಿ ೨ ಲ್ಯಾಬ್ ಇರಲಿದ್ದು, ಬಂಟ್ವಾಳ, ಮೂಡುಬಿದ್ರೆ ಮತ್ತು ಮಂಗಳೂರು ಭಾಗದ ಮಾದರಿ ಪರೀಕ್ಷೆಗೆ ಜಿಲ್ಲಾ ಕೇಂದ್ರದ ಲ್ಯಾಬ್ ಬಳಸಲಾಗುತ್ತದೆ – ಡಾ. ರಾಜೇಂದ್ರ ಕೆ.ವಿ. ದ. ಕ. ಜಿಲ್ಲಾಧಿಕಾರಿ

ಸೂಕ್ತ ಸ್ಥಳವಕಾಶಕ್ಕಾಗಿ ಹಲವೆಡೆ ಹುಡುಕಾಟ
ಕೋವಿಡ್ ಪರಿಕ್ಷಾ ಕೇಂದ್ರಕ್ಕೆ ಆರಂಭದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ಸುಪರ್ದಿಯಲ್ಲಿರುವ ಸಬ್‌ರಿಜಿಸ್ಟ್ರರ್ ಕಚೇರಿಯ ಹಳೆ ಕಟ್ಟಡವನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅದನ್ನು ಪ್ರಸ್ತುತ ೪೫ ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲು ವ್ಯವಸ್ಥೆ ಮಾಡಿದ್ದರಿಂದ ಅದನ್ನು ಅಲ್ಲಿಂದ ತಾತ್ಕಾಲಿಕವಾಗಿ ನಗರಸಭೆ ಸಮುದಾಯ ಭವನಕ್ಕೆ ಸ್ಥಳಾಂತರಿಸುವುದೆಂದು ಚಿಂತಿಸಲಾಗಿತ್ತು. ಆದರೆ ಆ ಬಳಿಕದ ಬೆಳವಣಿಗೆಯಲ್ಲಿ ಜಿಲ್ಲಾಧಿಕಾರಿಯವರು ತಾ.ಪಂ ವಾಣಿಜ್ಯ ಸಂಕೀರ್ಣದ ಮಹಡಿಯೇ ಸೂಕ್ತ ಎಂದು ಪರಿಗಣಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.