HomePage_Banner
HomePage_Banner

ಕೊರೋನಾ ಸಂಕಷ್ಟ: ಮರೀಲು ಚರ್ಚ್‌ನಲ್ಲಿ ಫಲಾನುಭವಿಗಳಿಗೆ ಆಹಾರ ಕಿಟ್ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಹಾಮಾರಿ ಕೊರೋನಾ ಅಲೆಯಿಂದಾಗಿ ಜನಜೀವನ ದುಸ್ತರವಾಗಿದ್ದು, ಬಡವರ್ಗದ ಜನರು ಸಂಕಷ್ಟವನ್ನುಎದುರಿಸುತ್ತಿರುವುದು ನಿಜ. ಈ ನಿಟ್ಟಿನಲ್ಲಿ ಪುತ್ತೂರು ಹೊರವಲಯದಲ್ಲಿರುವ ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್‌ನ 11 ವಾಳೆಗಳಲ್ಲಿನ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರುಗಳಿಗೆ ಆಹಾರ ಸಾಮಾಗ್ರಿಗಳ ಕಿಟ್‌ನ್ನು ವಿತರಿಸಿ ಮೆಚ್ಚುಗೆಗೆ ಪಾತ್ರವಾಗಿದೆ.

30 ಫಲಾನುಭವಿಗಳಿಗೆ ಕಿಟ್ ವಿತರಣೆ:
ಮರೀಲು ಚರ್ಚ್‌ನಲ್ಲಿ 11 ವಾಳೆಗಳಿದ್ದು, ಈ 11 ವಾಳೆಗಳಲ್ಲಿನ 30 ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರುಗಳಿಗೆ ಚರ್ಚ್‌ನ ಪ್ರಧಾನ ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್‌ರವರ ಮಾರ್ಗದರ್ಶನದಲ್ಲಿ ಆಹಾರ ಸಾಮಾಗ್ರಿಗಳ ಕಿಟ್‌ನ್ನು ಈಗಾಗಲೇ ವಿತರಿಸಲಾಗಿದೆ. ಧರ್ಮಗುರು ವಂ|ವಲೇರಿಯನ್ ಫ್ರ್ಯಾಂಕ್‌ರವರ ಚಿಂತನೆಗೆ ಚರ್ಚ್ ಪಾಲನಾ ಸಮಿತಿ, ವಾಳೆ ಗುರಿಕಾರರು ಹಾಗೂ ಪ್ರತಿನಿಧಿ ಹಾಗೂ ದಾನಿಗಳು ನೆರವು ನೀಡಿ ಸಹಕರಿಸಿದ್ದಾರೆ. ಕಳೆದ ವರ್ಷವೂ ಕೊರೋನಾ ಸಂಕಷ್ಟದ ಸಮಯದಲ್ಲಿ ಚರ್ಚ್ ಅರ್ಹ ಫಲಾನುಭವಿಗಳಿಗೆ ಕಿಟ್‌ನ ನೆರವು ನೀಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.