HomePage_Banner
HomePage_Banner

ಹಡೀಲು ಗದ್ದೆಯಲ್ಲಿ‌ ಭತ್ತದ ಬೇಸಾಯ – ಮರಿಕೆ ಗುಂಡಿಗದ್ದೆಯಲ್ಲಿ ಪ್ರಥಮ ಯಾಂತ್ರೀಕೃತ ನೇಜಿ ನಾಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಗದ್ದೆಗಿಳಿಯೋಣ ಕಾರ್ಯಕ್ರಮದ ಅಂಗವಾಗಿ ಆರ್ಯಾಪು ಗ್ರಾಮದ ಮರಿಕೆ ರಸ್ತೆಯ ಹಡೀಲ್ ಭೂಮಿ ಗುಂಡಿಗದ್ದೆಯಲ್ಲಿ ತಾಲೂಕಿನಲ್ಲಿ ಪ್ರಥಮವಾಗಿ ಯಾಂತ್ರೀಕೃತವಾಗಿ ನೇಜಿ ನಾಟಿ ಕಾರ್ಯಕ್ರಮ ನಡೆಸಿದರು.

ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಂಟಿ ಆಶ್ರಯದಲ್ಲಿ ನಡೆದ ಹಡೀಲು ಗದ್ದೆಯಲ್ಲಿ ಭತ್ತದ ಬೇಸಾಯವನ್ನು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು ಉದ್ಘಾಟಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಯೋಜನಾಧಿಕಾರಿ ಉಮೇಶ್ ಪೂಜಾರಿ, ಪಂಚಾಯತ್ ಸದಸ್ಯರಾದ ಹರೀಶ್ ನಾಯಕ್ ಮಿನಿಪದವು, ಚೇತನ್ ಡಿಎಸ್,ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಟ್ಯಾರ್ ಒಕ್ಕೂಟದ ಅಧ್ಯಕ್ಷೆ ಅಂಬಿಕಾ ರಮೇಶ ಬಲ್ಯಾಯ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ‌ ಸದಸ್ಯರಾದ ದೇವಯ್ಯ ಗೌಡ, ವಿನಯ ನಾಯ್ಕ್, ಭಾರತಿ ಶಾಂತಪ್ಪ ಪೂಜಾರಿ, ವನಿತಾ ಜನಾರ್ದನ ನಾಯಕ್, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾನಿರತೆ ಜಯಂತಿ ಅಶೋಕ್ ಗೌಡ, ಕೃಷಿಕರಾದ ಸದಾಶಿವ ಭಟ್ಗ ಮರಿಕೆ, ಗದ್ದೆಯ ಯಜಮಾನರಾದ ದಾಜಮ್ಮ, ಸದಾಶಿವ ಗೌಡ, ಭತ್ತದ ಬೇಸಾಯದ ಉಸ್ತುವಾರಿ ರಮೇಶ ಬಲ್ಯಾಯ , ಸ್ಥಳೀಯರಾದ ರಂಗನಾಥ ಕಾರಂತ ಮರಿಕೆ, ಸೂರ್ಯನಾರಾಯಣ ಕಾರಂತ, ಶಿವರಾಮ ಕಾರಂತ, ಹೇಮಾವತಿ ಕಾರಂತ, ಭತ್ತದ ಕೃಷಿಕ ರಮಾನಂದ ಬಲ್ಯಾಯ, ಸಂದ್ಯಾ , ಹರೀಶ್ ನಾಯಕ್ ಮರಿಕೆ,ಗಂಗಯ್ಯ ಮರಿಕೆ, ಚೆನ್ನಪ್ಪ ಮರಿಕೆ ಮತ್ತಿತರರು ಭಾಗವಹಿಸಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿ ಉಮೇಶ್ ಸ್ವಾಗತಿಸಿ, ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಾಲಯದ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು ವಂದಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.