HomePage_Banner
HomePage_Banner

ನಗರಸಭೆ ಕಲ್ಲಿಮಾರ್‌ನಲ್ಲಿ ಕೋವಿಡ್ ನಿಯಂತ್ರಣ ಟಾಸ್ಕ್ ಫೋರ್ಸ್ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿ ನಗರಸಭೆ ವ್ಯಾಪ್ತಿಯಲ್ಲಿ ವಾರ್ಡ್‌ಗಳಲ್ಲಿ ಕೈಗೊಂಡದಕ್ಕೆ ಸಂಬಂಧಿಸಿ ವಾರ್ಡ್-೧೯ರಲ್ಲಿ ಟಾಸ್ಕ್‌ಫೋರ್ಸ್ ಸಭೆ ನಗರಸಭಾ ಉಪಾಧ್ಯಕ್ಷೆ ವಿದ್ಯಾಗೌರಿ ನೇತೃತ್ವದಲ್ಲಿ ಕಲ್ಲಿಮಾರ್ ಶಿವಕುಮಾರ್ ಇವರ ಮನೆಯಲ್ಲಿ ಜರುಗಿತು.

 

 

ನಗರಸಭೆ ಪೌರಾಯುಕ್ತ ಮಧುಮನೋಹರ್ ಅವರು ಕೊರೋನಾ ನಿಯಂತ್ರಣಕ್ಕೆ ತರುವಲ್ಲಿ ಎಚ್ಚೆತ್ತುಕೊಂಡು ಮಾಡಬೇಕಾದ ಕೆಲಸದ ಬಗ್ಗೆ ತಿಳಿಸಿದರು. ವಿಜ್ಞಾನಿಗಳು, ತಜ್ಞರು ತಿಳಿಸಿರುವಂತೆ ಮೂರನೇ ಅಲೆಯಿಂದ ಮಕ್ಕಳ ಮೇಲೆ ಹಾನಿ ಆಗಬಹುದಾದ ಸಾಧ್ಯತೆಯಿರುವುದರಿಂದ ಮಕ್ಕಳನ್ನು ಹೊರಗಡೆ ಕರೆದು ಹೋಗದೆ ನಿಗಾವಹಿಸಬೇಕಾದ ಅವಶ್ಯಕತೆಯಿದೆಯೆಂದರು. ಕೊರೋನಾ ದೃಢಗೊಂಡ ವ್ಯಕ್ತಿಯ ಮನೆಯ ಆಸುಪಾಸು ಐವತ್ತು ಮನೆಯವರು ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯವೆಂದರು. ಡೆಲ್ಟಾಪ್ಲಸ್ ಕೊರೋನಾ ಬದಲಾದ ರೂಪದ ಬಗ್ಗೆ ಮಾಹಿತಿ ನೀಡಿದರು. ನಗರಸಭೆ ಮಾಜಿ ಉಪಾಧ್ಯಕ್ಷ ವಿನಯ್ ಭಂಡಾರಿ ವಂದಿಸಿದರು. ನಗರಸಭಾ ಇಂಜಿನಿಯರ್ ಶ್ರೀಧರ್, ಟಾಸ್ಕ್‌ಫೋರ್ಸ್ ಟೀಮ್ ಸದಸ್ಯರಾದ ನಗರಸಭಾ ಸಿಬ್ಬಂದಿ ನಾಗೇಶ್, ಆಶಾ ಕಾರ್ಯಕರ್ತೆ ಶ್ರೀಮತಿ ವೀಣಾ ಆಚಾರ್ಯ, ಶಿವಕುಮಾರ್, ನಾಗೇಶ್ ಪ್ರಭು, ವೀಕ್ಷಿತ್ ಕಲ್ಲಿಮಾರ್ ಹಾಗೂ ರವಿರಾಜ್ ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.