HomePage_Banner
HomePage_Banner

ಲಾಕ್‌ಡೌನ್: ಗ್ರಾಮದ 721 ಕುಟುಂಬಗಳಿಗೆ ಕಿಟ್ ವಿತರಿಸಿದ ಗ್ರಾಪಂ ಸದಸ್ಯ

Puttur_Advt_NewsUnder_1
Puttur_Advt_NewsUnder_1
  • ಬಡವರ ಮನೆ ಬಾಗಿಲಿಗೆ ಕಿಟ್ ತಲುಪಿಸಿದ ಗ್ರಾಪಂ ಸದಸ್ಯ ಬೂಡಿಯಾರ್ ಪುರುಷೋತ್ತಮ ರೈ

ಪುತ್ತೂರು: ಆರ್‍ಯಾಪು ಗ್ರಾಪಂ ಸದಸ್ಯ ಬೂಡಿಯಾರ್ ಪುರುಷೋತ್ತಮ ರಐ ಯವರು ತನ್ನ ಕುರಿಯ ಗ್ರಾಪಂ ವ್ಯಾಪ್ತಿಯ ಸುಮಾರು ೭೨೧ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಿದ್ದಾರೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾದ ಗ್ರಾಮದ ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಬಹುತೇಕ ಎಲ್ಲಾ ಮನೆಗಳಿಗೂ ಆಹಾರ ಸಾಮಾಗ್ರಿಗಳನ್ನೊಳಗೊಂಡ ಕಿಟ್ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

 

ಕಳೆದ ೨೩ ದಿನಗಳಿಂದ ನಿರಂತರವಾಗಿ ಕಿಟ್ ವಿತರಣೆ ಮಾಡುತ್ತಿದ್ದು ಗ್ರಾಮದಲ್ಲಿ ಸರ್ವೆ ಕಾರ್ಯ ನಡೆಸಿ ಯಾರು ಕಷ್ಟದಲ್ಲಿದ್ದಾರೆ ಎಂಬುದನ್ನು ತಿಳಿದುಕೊಂಡು ಅಂಥವರ ಮನೆಗಳಿಗೆ ಸ್ವತ ಕಿಟ್ ವಿತರಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಜೂ. ೨೫ ರಂದು ಕುರಿಯ ಗ್ರಾಪಂ ವ್ಯಾಪ್ತಿಯ ಡಿಂಬ್ರಿಯಲ್ಲಿ ೨೦ ಮನೆಗಳಿಗೆ ಕಿಟ್ ವಿತರಿಸಿ ಮಾತನಾಡಿದ ಪುರುಷೋತ್ತಮ ರೈ ಬೂಡಿಯಾರ್ ರವರು ತನ್ನಿಂದಾದ ಸಹಾಯವನ್ನು ಮಾಡುವ ಸಂಕಲ್ಪ ಮಾಡಿದ್ದೇನೆ. ಕೋವಿಡ್ ಕಾರಣಕ್ಕೆ ಕೆಲಸವಿಲ್ಲದೆ ಅನೇಕ ಕುಟುಂಬಗಳು ಮೂರು ಹೊತ್ತಿನ ಆಹಾರಕ್ಕೂ ಕಷ್ಟಪಡುವ ಸನ್ನಿವೇಶ ನಿರ್ಮಾಣವಾಗಿದೆ. ಲಾಕ್‌ಡೌನ್ ಮುಗಿಯುವ ತನಕ ನಿರಂತರವಾಗಿ ಈ ಸೇವೆ ಮುಂದುವರೆಯಲಿದೆ. ಈಗಾಗಲೇ ಕುರಿಯ ಗ್ರಾಮದ ಬಹುತೇಕ ಕುಟುಂಬಗಳಿಗೆ ಕಿಟ್ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಡಿಂಬ್ರಿ ತರ್ಬಿಯತ್ತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮದ್ರಸದ ಅಧ್ಯಕ್ಷ ಯೂಸುಫ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು ಬಡವರನ್ನು ಗುರುತಿಸಿ ಅವರಿಗೆ ನೆರವು ನೀಡುವ ಮೂಲಕ ಬೂಡಿಯಾರ್ ಪುರುಷೋತ್ತಮ ರೈ ಯವರು ಎಲ್ಲರಿಗೂ ಮಾದರಿಯಾಗಿದ್ದಾರೆ. ತನ್ನ ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಹಸಿವಿನಿಂದ ಇರುವವ ಬಗ್ಗೆ ಮಾಹಿತಿ ತಿಳಿದು ಅವರ ಮನೆಗೆ ತೆರಳಿ ನೋವನ್ನು ಆಲಿಸುತ್ತಿರುವುದು ಮಾನವೀಯ ಕಾರ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ಮಲಾರ್, ಅಶ್ವಥ್ ಕುರಿಯ , ಹಿರಿಯ ಕಾಂಗ್ರೆಸ್ ಮುಖಂಡ ಅಬ್ದುಲ್ಲ ಹಾಜಿ ಡಿಂಬ್ರಿ, ಅರಬಿ ಹಾಜಿ ಡಿಂಬ್ರಿ, ಮಹಮ್ಮದ್ ಮಗಿರೆ ಡಿಂಬ್ರಿ, ಮಹಮ್ಮದ್ ಮುಸ್ಲಿಯಾರ್ ಡಿಂಬ್ರಿ, ಅಬೂಬಕ್ಕರ್ ಮುಸ್ಲಿಯಾರ್ ಡಿಂಬ್ರಿ, ನಿಝಾರ್ ಡಿಂಬ್ರಿ, ಬಶೀರ್ ಡಿಂಬ್ರಿ ಉಪಸ್ಥಿತರಿದ್ದರು. ಯೂಸುಫ್ ಅರ್ಷದಿ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.