ವರದಿ- ಉಮಾಪ್ರಸಾದ್ ರೈ ನಡುಬೈಲು
ಪುತ್ತೂರು: ಇಂಡಿಯನ್ ಕೌನ್ಸಿಲ್ ಅಫ್ ಅಗ್ರಿಕಲ್ಚರಲ್ ರಿಸರ್ಚ್(ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ) ಐಸಿಎಆರ್ ನವದೆಹಲಿ ಇದರ ಆಡಳಿತ ಸಮಿತಿಯ ನಿರ್ದೇಶಕರಾಗಿ ಮೂಲತ: ಪುತ್ತೂರಿನ ಬೆಟ್ಟಂಪಾಡಿ ಸಮೀಪದ ಕೊಮ್ಮಂಡ ಸದಾನಂದ ಶೆಟ್ಟಿರವರು ಆಯ್ಕೆಯಾಗಿದ್ದಾರೆ. ಸದಾನಂದ ಶೆಟ್ಟಿರವರು ಪ್ರಸ್ತುತ ಕಾಸರಗೋಡು ಜಿಲ್ಲೆಯ ಪೈವಳಿಕೆ ಎಂಬಲ್ಲಿ ಪ್ರಗತಿಪರ ಕೃಷಿಕರಾಗಿ, ಸಾಮಾಜಿಕ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ.
ಸದಾನಂದ ಶೆಟ್ಟಿ ಕೊಮ್ಮಂಡರವರ ಪರಿಚಯ : ಸದಾನಂದ ಶೆಟ್ಟಿರವರು ಪುತ್ತೂರಿನ ಬೆಟ್ಟಂಪಾಡಿ ಗ್ರಾಮದ ಕೊಮ್ಮಂಡದವರಾಗಿದ್ದು, ತನ್ನ ಎಳೆಯ ಪ್ರಾಯದಿಂದಲೇ ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಯ ಹೆಸರನ್ನು ಪುತ್ತೂರಿನಲ್ಲಿ ಪಡೆದಿದ್ದರು. ಪುತ್ತೂರು ತಾಲೂಕು ಬಿಜೆಪಿ ಯುವ ಮೋರ್ಚದಲ್ಲಿ ೨ ಬಾರಿ ಅಧ್ಯಕ್ಷ ಹಾಗೂ ಒಂದು ಬಾರಿ ಕಾರ್ಯದರ್ಶಿ, ಜಿಲ್ಲಾ ಮಟ್ಟದಲ್ಲಿ ಬಿಜೆಪಿ ನಾಯಕರೊಂದಿಗೆ ಪಕ್ಷ ಸಂಘಟನೆ, ಜಿಲ್ಲಾ ಯುವ ಮೋರ್ಚ್ದ ಸಂಘಟನೆಯ ಜವಾಬ್ದಾರಿ, ರಾಜ್ಯ ಬಿಜೆಪಿ ಯುವ ಮೋರ್ಚ್ ಕಾರ್ಯಕಾರಿಣಿ ಸದಸ್ಯ, ಶ್ರೀ ರಾಮ ಜನ್ನಭೂಮಿ ವಿಮೋಚನಾ ಚಳುವಳಿಯಲ್ಲಿ ಪೂರ್ಣ ರೀತಿಯಲ್ಲಿ ಭಾಗವಹಿಸುವಿಕೆ, ಬಿಜೆಪಿ ವಿಧಾನ ಪರಿಷತ್ ಸದಸ್ಯರಾಗಿದ್ದ ಅಣ್ಣಾ ವಿನಯಚಂದ್ರರವರೊಂದಿಗೆ ಪಕ್ಷ ಸಂಘಟನೆಗಾಗಿ ರಾಜ್ಯ ವ್ಯಾಪಿ ಪ್ರವಾಸ, ಪುತ್ತೂರು ತಾಲೂಕು ಬಂಟರ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸದಾನಂದ ಶೆಟ್ಟಿರವರು ಬಿಜೆಪಿಯಿಂದ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾದ ವಿ.ಧನಂಜಯಕುಮಾರ್ ಮತ್ತು ಪುತ್ತೂರಿನ ಶಾಸಕರಾಗಿ ಪ್ರಧಮ ಬಾರಿಗೆ ಆಯ್ಕೆಯಾದ ಸದಾನಂದ ಗೌಡರವರ ಗೆಲುವಿನ ಬಳಿಕ ಸದಾನಂದ ಶೆಟ್ಟಿರವರು ಮಂಜೇಶ್ವರದ ಪೈವಳಿಕೆಯಲ್ಲಿ ತಮ್ಮ ಕೃಷಿ ಹಾಗೂ ಸಾಮಾಜಿಕ ಹಾಗೂ ರಾಜಕೀಯ ಜೀವನವನ್ನು ಆರಂಭಿಸಿದ್ದರು. ಅಲ್ಲೂ ತಮ್ಮ ಸಮರ್ಥ ನಾಯಕತ್ವವನ್ನು ತೋರಿಸಿಕೊಟ್ಟರು. ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಭಾರತೀಯ ಕಿಸಾನ್ ಸಂಘದ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ, ಜೋಡುಕಲ್ಲು ಸೇವಾ ಬಾರತೀಯ ಸಂಚಾಲಕರಾಗಿ, ಅನೇಕ ಸಂಘ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಸದಾನಂದ ಶೆಟ್ಟಿರವರಿಗೆ ಆರ್ಹವಾಗಿಯೇ ತಮ್ಮ ಪ್ರತಿಭೆಗೆ ಪ್ರಸ್ತುತ ಪ್ರತಿಷ್ಟಿತ ಐಸಿಎಆರ್- ಸಿಪಿಸಿಆರ್ಐ ನಿರ್ದೆಶಕ ಸ್ಥಾನ ಒಲಿದು ಬಂದಿದೆ.
ತಪ್ಪಿದ ಅವಕಾಶ : ಸದಾನಂದ ಶೆಟ್ಟಿರವರು ಪುತ್ತೂರಿನಲ್ಲಿ ಇದ್ದಾಗ, ಬಿಜೆಪಿ ಪಕ್ಷದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಗಾಗಿ ಅವರಿಗೆ ಕರ್ನಾಟಕ ರಾಜ್ಯ ವಿಧಾನ ಪರಿಷತ್ ಸದಸ್ಯತ್ವವನ್ನು ನೀಡಲು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್ರವರು ನಿರ್ಧರಿಸಿದ್ದರು. ಆದರೆ ಸದಾನಂದ ಶೆಟ್ಟಿರವರು ಪ್ರಸ್ತುತ ಕೇರಳ ರಾಜ್ಯದಲ್ಲಿ ವಾಸ ಮಾಡುತ್ತಿರುವುದರಿಂದ ಈ ಅವಕಾಶ ತಪ್ಪಿ ಹೋಯಿತು.