HomePage_Banner
HomePage_Banner

ಬಾಲಕಾರ್ಮಿಕತೆ ನಿಲ್ಲಿಸಿ…ಶಿಕ್ಷಣ ಒದಗಿಸಿ ಪುತ್ತೂರು ಕ್ಯಾಂಪಸ್ ಫ್ರಂಟ್‌ನಿಂದ ಶಿಕ್ಷಣಾಧಿಕಾರಿ, ತಹಶೀಲ್ದಾರ್‌ಗೆ ಮನವಿ.

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿರುವ `ಬಾಲಕಾರ್ಮಿಕತೆ ನಿಲ್ಲಿಸಿ, ಶಿಕ್ಷಣ ಒದಗಿಸಿ’ ಅಭಿಯಾನದ ಭಾಗವಾಗಿ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ತಹಶೀಲ್ದಾರ್ ಮತ್ತು ಪುತ್ತೂರು ಕ್ಷೇತ್ರ ಸಹ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಗ್ರಾಮದಲ್ಲಿರುವ ಪ್ರತಿಯೊಂದು ವಿದ್ಯಾರ್ಥಿ ಕೂಡ ಶಿಕ್ಷಣದಿಂದ ವಂಚಿತರಾಗಬಾರದು, ಬಾಲ ಕಾರ್ಮಿಕತೆಗೆ ಒಳಗಾದ ಮಕ್ಕಳಿದ್ದರೆ ಅವರಿಗೆ ಶಿಕ್ಷಣ ಒದಗಿಸುವ ಯೋಜನೆಯನ್ನು ಸರಕಾರ ರೂಪಿಸಬೇಕು, ಕಾರ್ಯಾಂಗ ವ್ಯವಸ್ಥೆಯನ್ನು ಸರಿಯಾಗಿ ಸದುಪಯೋಗಪಡಿಸಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಯ ಮಟ್ಟದಲ್ಲಿ ಬಾಲ ಕಾರ್ಮಿಕತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದ ಬಗ್ಗೆ ಸರಕಾರ ಚಿಂತಿಸಬೇಕು ಎಂದು ಆಗ್ರಹಿಸಿ ಮನವಿಯನ್ನು ನೀಡಲಾಯಿತು.

ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಮುಸ್ತಾಫ ಕೊಡಿಪ್ಪಾಡಿ, ಜಿಲ್ಲಾ ಸಮಿತಿ ಸದಸ್ಯ ಅಫ್ರೀದ್ ಕೂರ್ನಡ್ಕ, ಸಂಟ್ಯಾರ್ ಏರಿಯಾ ಅಧ್ಯಕ್ಷ ಆರಿಫ್ ತಂಬುತ್ತಡ್ಕ ಉಪಸ್ಥಿತರಿದ್ಧರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.