HomePage_Banner
HomePage_Banner

ಭರತನಾಟ್ಯ ಸ್ಪರ್ಧೆ; ಸನುಷಾಗೆ ‘ಸ್ವರ್ಣ ಕಲಾ ರತ್ನ’ ರಾಜ್ಯ ಪ್ರಶಸ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಅಕ್ಷರದೀಪ ಫೌಂಡೇಶನ್, ಸ್ನೇಹಜೀವಿ ಫೌಂಡೇಶನ್ ಹಾಗೂ ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾವೇದಿಕೆ ಧಾರವಾಡ ಮತ್ತು ಬೆಂಗಳೂರು ಇದರ ಸಹಭಾಗಿತ್ವದಲ್ಲಿ ಆನ್‌ಲೈನ್ ಮೂಲಕ ನಡೆದ ರಾಜ್ಯಮಟ್ಟದ ಕ್ರೇಜಿ ಟ್ಯಾಲೆಂಟ್ ಭರತನಾಟ್ಯ ಸ್ಪರ್ಧೆಯಲ್ಲಿ ಸನುಷಾ ಅವರಿಗೆ ‘ಸ್ವರ್ಣ ಕಲಾ ರತ್ನ’ ರಾಜ್ಯ ಪ್ರಶಸ್ತಿ ಲಭಿಸಿದೆ.

ಈಕೆ ಹಲವಾರು ರಾಷ್ಟ್ರೀಯ ಹಾಗೂ ರಾಜ್ಯಮಟ್ಟದ ಆನ್‌ಲೈನ್ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಪ್ರಶಸ್ತಿ ಪಡಕೊಂಡಿದ್ದಾರೆ. ನೆಲ್ಯಾಡಿಯ ನಟವಯ೯ ಡ್ಯಾನ್ಸ್ ಸ್ಟುಡಿಯೋದವರು ನೀಡುವ ವರ್ಷದ ‘ನಟವಯ೯ ಕಲಾ ಸಾಧಕಿ’ ಬಿರುದು, ಹುಟ್ಟೂರ ಕಲಾಸಾಧಕಿ ಸನ್ಮಾನವನ್ನು ಪಡಕೊಂಡಿದ್ದಾರೆ. ಈಕೆ ಕಳೆದ ೬ ವರ್ಷಗಳಿಂದ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪುತ್ತೂರು ಇಲ್ಲಿನ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ಗಿರೀಶ್‌ಕುಮಾರ್‌ರವರಿಂದ ಭರತನಾಟ್ಯ ನೃತ್ಯಾಭ್ಯಾಸ ಕಲಿಯುತ್ತಿದ್ದಾರೆ. ಸಂಗೀತ ಶಿಕ್ಷಣವನ್ನು ಪದ್ಮಾವತಿ ಬಾಳ್ತಿಲ್ಲಾಯರವರಿಂದ ಕಲಿಯುತ್ತಿದ್ದಾರೆ. ಕುಶಾಲಪ್ಪ ನಮ್ಮ ಕಲಾವಿದೆರ್ ನೆಲ್ಯಾಡಿ ಸಾರಥ್ಯದ ನಟವಯ೯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿದಲ್ಲಿ ಕಥಕ್ ಹಾಗೂ ವೆಸ್ಟರ್ನ್ ನೃತ್ಯಭ್ಯಾಸ ಕಲಿಯುತ್ತಿದ್ದಾರೆ. ರಾಜೇಶ್ ಬಿ.ಸಿ.ರೋಡ್ ನಿರ್ಮಾಣದ ಶಿವರಾತ್ರೆದ ಏಲ್ಯ ಗಳಿಗೆಡ್ ತುಳುವ ಪುಣ್ಯ ಮಟ್ಟೆಲ್‌ದ ಮಾಮಲ್ಲ ಕಾರ್ಣಿಕ ಮಣ್ಣು ಕುದ್ರೋಳಿ ಗೋಕರ್ಣನಾಥೇಶ್ವರ ದೇವೆರ್‌ನ ಭಕ್ತಿ ಸುಗಿಪು “ರಾಗ ಅಭಿಷೇಕ” ಈ ಆಲ್ಬಂ ಸಾಂಗ್‌ನಲ್ಲಿ ನಟಿಸಿರುತ್ತಾರೆ.

ಬೂಡು ಮುಗೇರ್ ಅರಸಿನಮಕ್ಕಿ ನಿವಾಸಿ ರಾಜನ್ ಹಾಗೂ ಸೌಮ್ಯ ದಂಪತಿಯ ಪುತ್ರಿ. ಕೊಕ್ಕಡ ಸೈಂಟ್ ಫ್ರಾನ್ಸಿನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.