HomePage_Banner
HomePage_Banner

ಸವಣೂರಿನಲ್ಲಿ ವಿಕೇಂಡ್ ಕರ್ಫ್ಯೂ- ಬೆಳ್ಳಾರೆ ಪೋಲೀಸ್ ಠಾಣಾ ಎಸ್.ಐ ಅಂಜನೇಯ ರೆಡ್ಡಿ ನೇತ್ರತ್ವದ ಪೋಲೀಸ್ ತಂಡದಿಂದ ಬಿಗು ತಪಾಸಣೆ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕೋವೀಡ್ ಪರೀಕ್ಷೆ

Puttur_Advt_NewsUnder_1
Puttur_Advt_NewsUnder_1

 

                                                                                                  ವರದಿ- ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ಕಡಬ ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಸವಣೂರು ಪಟ್ಟಣದಲ್ಲಿ ವಿಕೇಂಡ್ ಕರ್ಫ್ಯೂಗೆ ಉತ್ತಮ ಸ್ವಂದನೆ ದೊರೆತಿದೆ. ಪಟ್ಟಣದ ಎಲ್ಲಾ ಅಂಗಡಿಗಳು ಮುಚ್ಚಿದ್ದವು, ವೈದ್ಯಕೀಯ, ಪತ್ರಿಕೆ ವಿತರಣೆ ಮತ್ತು ಹಾಲು ಸೊಸೈಟಿಗೆ ಮಾತ್ರ ಅವಕಾಶ ಇತ್ತು, ಸವಣೂರು ಮುಖ್ಯ ರಸ್ತೆಯಲ್ಲಿ ಬೆಳ್ಳಾರೆ ಪೋಲೀಸ್ ಠಾಣಾ ಎಸ್.ಐ ಅಂಜನೇಯ ರೆಡ್ಡಿ ನೇತ್ರತ್ವದ ಪೋಲೀಸ್ ತಂಡದಿಂದ ಅನಗತ್ಯವಾಗಿ ರಸ್ತೆಯಲ್ಲಿ ತಿರುಗುವ ವಾಹನ ಸವಾರರಿಗೆ ಏಚ್ಚರಿಕೆಯನ್ನು ನೀಡುವ ಮೂಲಕ ಕರೋನಾ ನಿಗ್ರಹಕ್ಕೆ ವಿಶೇಷವಾದ ಕಾಳಜಿಯನ್ನು ವಹಿಸುತ್ತಿದ್ದರು. ಅಗತ್ಯ ಸೇವೆಗೆ ತೆರಳುವ ವಾಹನಗಳಿಗೆ ಅವಕಾಶವನ್ನು ನೀಡಲಾಯಿತು.

ಕೋವೀಡ್ ತಪಾಸಣೆ
ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಸವಣೂರಿನ ಬಸ್ ಸ್ಟಾಂಡ್‌ನಲ್ಲಿಯೇ ಕೋವೀಡ್ ಪರೀಕ್ಷಾ ತಪಾಸಣೆಯನ್ನು ನಿರ್ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ವಾಗೀಶ್ವರಿ, ಸುಧಾಕ್ಷಿಣಿ, ನಿಶ್ಮಿತಾ, ಪ್ರಯೋಗಾಲಯ ತಂತ್ರಜ್ಞೆ ಭಾರತಿ, ಫಾರ್ಮ್‌ಸ್ಟ್ ವಿವೇಕ್, ಆಶಾ ಕಾರ್‍ಯಕರ್ತೆಯರಾದ ಗೀತಾ, ಅನಿತಾ, ಶ್ಯಾಮಲ, ವೇದಾವತಿ. ಕೋವೀಡ್ ಕಾರ್‍ಯಪಡೆಯ ಮುಂದಾಳು ಸುರೇಶ್ ರೈ ಸೂಡಿಮುಳ್ಳು, ಸಚಿನ್ ಸವಣೂರು, ಸವಣೂರು ಗ್ರಾ.ಪಂ, ಸಿಬ್ಬಂಧಿ ಪ್ರಮೋದ್ ಕುಮಾರ್ ರೈ, ಸವಣೂರು ವಿ.ಎ, ಚಂದ್ರ ನಾಯ್ಕ್, ಸವಣೂರು ಗ್ರಾ.ಪಂ, ಸದಸ್ಯರಾದ ಸತೀಶ್ ಅಂಗಡಿಮೂಲೆ, ಅಬ್ದುಲ್ ರಜಾಕ್ ಕೆನರಾರವರುಗಳು ಸಹಕಾರ ನೀಡಿದರು

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.