HomePage_Banner
HomePage_Banner

ಚಿಕ್ಕಮುಡ್ನೂರು: ಕಲಿಯುಗ ಸೇವಾ ಸಮಿತಿಯಿಂದ ಅಂತರ್ಜಲ ಸಂರಕ್ಷಣಾ ಅಭಿಯಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊಳವೆ ಬಾವಿಗಳಿಗೆ ಮಳೆ ನೀರನ್ನು ತುಂಬಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸುವ ನಿಟ್ಟಿನಲ್ಲಿ ಚಿಕ್ಕಮುಡ್ನೂರು ಗ್ರಾಮದಲ್ಲಿ ಕಲಿಯುಗ ಸೇವಾ ಸಮಿತಿ ಹಮ್ಮಿಕೊಂಡಿರುವ ಅಂತರ್ಜಲ ಸಂರಕ್ಷಣಾ ಅಭಿಯಾನಕ್ಕೆ ಜೂ.27 ರಂದು ಚಿಕ್ಕಮುಡ್ನೂರು ನೆಕ್ಕರೆ ಅಂಗನವಾಡಿಯಲ್ಲಿ ಚಾಲನೆ ನೀಡಲಾಯಿತು.

ಕಲಿಯುವ ಸೇವಾ ಸಮಿತಿ ಕಳೆದ ಎರಡು ವರ್ಷಗಳಿಂದ ಚಿಕ್ಕಮುಡ್ನೂರು ಗ್ರಾಮದಲ್ಲಿ ಜಲ ಸಂರಕ್ಷಣಾ ಅಭಿಯಾನವನ್ನು ಹಮ್ಮಿಕೊಂಡು ಬರುತ್ತಿದ್ದು ಸ್ಥಳೀಯ ಪರಿಸರಾಕ್ತರನ್ನು ಸೇರಿಸಿಕೊಂಡು ಕೊಳವೆ ಬಾವಿಗಳಿಗೆ ಮಳೆ ನೀರನ್ನು ಇಂಗಿಸುವ ಮೂಲಕ ಅಂತರ್ಜಲ ಮಟ್ಟ ವೃದ್ಧಿಸಲು ಪ್ರಯತ್ನಿಸುತ್ತಿದೆ.

ಅಭಿಯಾನಕ್ಕೆ ಚಾಲನೆ ನೀಡಿದ ರೀಟಾ ಜೆಸಿಂತಾ ತೋರಸ್ ಮಾತನಾಡಿ, ಅಂತರ್ಜಲ ಮಟ್ಟ ವೃದ್ಧಿಸಲು ಪ್ರತಿಯೊಬ್ಬರು ಪ್ರಯತ್ನಿಸಬೇಕಾಗಿದೆ. ಇಲ್ಲದೇ ಹೋದಲ್ಲಿ ಮುಂದೊಂದು ದಿನ ನೀರಿನ ಅಭಾವದಿಂದ ಬರಗಾಲ ಪೀಡಿತವಾಗವಹುದು ಎಂದು ತಿಳಿಸಿದರು.  ಲಗೋರಿ ಸೆರಾವೋ, ರಮೇಶ್ ಕೆಮ್ಮಾಯಿ, ರಘುನಾಥ ರೈ, ಆನಂದ ಗೌಡ ರೋಟರಿಪುರ, ಸತೀಶ್ ರೈ, ಪದ್ಮನಾಭ ಪ್ರಭು, ದೇವದಾಸ, ಸುರೇಂದ್ರ ಪೂಜಾರಿ, ಪ್ರಮೀಳಾ ಸೆರಾವೋ, ಐರಿನ್ ತೋರಸ್, ಪುಷ್ಪಾವತಿ, ಸಂಪತ್ ಕುಮಾರ್ ಜೈನ್ ಡೋಲ್ಫಿ ನೊರೋಹ್ನಾ, ಅಭಿನ್ ರೋಟರಿಪುರ ಹಾಗೂ ಅಭೀಶ್ ರೋಟರಿಪುರ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.