HomePage_Banner
HomePage_Banner

ಸುದ್ದಿಯಿಂದ ಜನಸೇವೆಯ ಅನಾವರಣ – ವಕೀಲರೊಂದಿಗೆ ನೇರ ಸಂವಾದ

Puttur_Advt_NewsUnder_1
Puttur_Advt_NewsUnder_1


ಪುತ್ತೂರು : ಸುದ್ದಿಯಿಂದ ಜನಸೇವೆಯ ಅನಾವರಣ ಸರಣಿ ಕಾರ್ಯಕ್ರಮದ ಅಂಗವಾಗಿ ವಕೀಲರೊಂದಿಗೆ ನೇರ ಫೋನ್ ಇನ್ ಕಾರ್ಯಕ್ರಮವು ಸುದ್ದಿ ಕೇಬಲ್ ಚಾನೆಲ್, ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನೆಲ್ ಮತ್ತು ಫೇಸ್‌ಬುಕ್ ಪೇಜ್‌ನಲ್ಲಿ ಜೂನ್ 26ರಂದು ಪ್ರಸಾರಗೊಂಡಿತು.

ಕಾರ್ಯಕ್ರಮದಲ್ಲಿ ಪುತ್ತೂರು ವಕೀಲರ ಸಂಘದ ಅಧ್ಯಕ್ಷರಾದ ಮನೋಹರ್ ಕೆ.ವಿ., ನ್ಯಾಯವಾದಿಗಳಾದ ಎನ್. ಕಿಶೋರ್ ಕೊಳತ್ತಾಯ, ಬಿ. ನರಸಿಂಹ ಪ್ರಸಾದ್ ಮತ್ತು ಸಂಜಯ್ ಡಿ. ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಮನೋಹರ್ ಕೆ.ವಿ ಅವರು ಸಿವಿಲ್, ಕಂದಾಯ ಮತ್ತು ವಿವಾಹ ಸಂಬಂಧಿತ ಕಾನೂನುಗಳ ಬಗ್ಗೆ ಮಾಹಿತಿ ನೀಡಿದರು. ಎನ್. ಕಿಶೋರ್ ಕೊಳತ್ತಾಯ ಅವರು ಸಿವಿಲ್ ದತ್ತಕ ಕಾನೂನು ಮತ್ತು ಕಂದಾಯ ಕಾಯ್ದೆಗಳ ಬಗ್ಗೆ ವಿವರಿಸಿದರು. ನ್ಯಾಯವಾದಿ ಬಿ. ನರಸಿಂಹ ಪ್ರಸಾದ್ ಅವರು ಕ್ರಿಮಿನಲ್ ಕಾನೂನಿನ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರೆ ಸಂಜಯ್ ಡಿ. ಅವರು ಗ್ರಾಹಕರ ಕಾಯ್ದೆಯ ಬಗ್ಗೆ ಪರಿಣಾಮಕಾರಿಯಾಗಿ, ಮನಮುಟ್ಟುವಂತೆ ಮಾಹಿತಿ ನೀಡಿದರು. ಪುತ್ತೂರು ವಕೀಲರ ಸಂಘದ ಕಾರ್ಯವೈಖರಿ, ಪುತ್ತೂರು ನ್ಯಾಯಾಲಯದ ಇತಿಹಾಸ, ಕೊರೊನಾ ಕಾರಣದಿಂದಾಗಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಬೀರಿರುವ ಪರಿಣಾಮಗಳು, ಬಳಕೆದಾರರಿಗೆ ಇರುವ ಹಕ್ಕುಗಳು, ಲೋಕ ಅದಾಲತ್, ಜೀವನಾಂಶ, ಚೆಕ್ ಕೇಸುಗಳು, ಬೇಲ್ ಮತ್ತು ನಾನ್ ಬೇಲೇಬಲ್ ಕೇಸ್‌ಗಳು, ಹೆಣ್ಣುಮಕ್ಕಳ ಆಸ್ತಿಯ ಹಕ್ಕು, ಮಧ್ಯಸ್ಥಿಕಾ ಕೇಂದ್ರ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ಅವರನ್ನು ಸಂಪರ್ಕಿಸಿ ವಕೀಲರು ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಸುದ್ದಿ ಚಾನೆಲ್‌ನ ಪ್ರಧಾನ ನಿರೂಪಕ ಗೌತಮ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.