HomePage_Banner
HomePage_Banner

ಪುತ್ತೂರು ಪೇಟೆಯ ಮಧ್ಯೆ ಅಬಕಾರಿ ಅಧಿಕಾರಿಯೊಬ್ಬರ ಭತ್ತದ ಕೃಷಿ ನಾಟಿ-ಸಾತ್ ಕೊಟ್ಟ ಬನ್ನೂರಿನ ನವೋದಯ ಅನ್ಯಾನ್ಯ ಸಂಘ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಗ್ರಾಮೀಣ ಭಾಗದಲ್ಲಿ ಪ್ರಕೃತಿ ಮಡಿಲಿಗೆ ಸವಾಲಾಗಿ ಪೇಟೆಯ ಮಧ್ಯೆಯೂ ನಿಸರ್ಗ ಸೌಂದರ್ಯದ ಮಡಿಲಿನಲ್ಲಿ ಸಾಂಸ್ಕೃತಿಕ ಮೆರುಗಿನೊಂದಿಗೆ ತನ್ನದೇ ಛಾಪನ್ನು ಮೂಡಿಸುತ್ತಿರುವ ಪುತ್ತೂರು ಪೇಟೆಯ ನೂರು ಮೀಟರ್ ಅಂತರದಲ್ಲಿರುವ ಚಿಕ್ಕಪುತ್ತೂರಿನ ಗದ್ದೆಯಲ್ಲಿ ಭತ್ತದ ಬೇಸಾಯಕ್ಕೆ ಬನ್ನೂರಿನ ಯುವಕ, ಯುವತಿ ಮತ್ತು ಮಹಿಳಾ ಮಂಡಲವೊಂದು ಸಾತ್ ನೀಡಿದೆ. ಕೇವಲ ವಾರ್ಷಿಕೋತ್ಸವ, ಮನರಂಜನೆಗೆ ಮಾತ್ರ ಸೀಮಿತವಾಗದೆ ಕೃಷಿ ಕಾರ್ಯದಲ್ಲೂ ಸಂಘಟನೆ ಸಹಿ ಎನಿಸಿಕೊಂಡಿದೆ.

ಪುತ್ತೂರು ಅಬಕಾರಿ ಇಲಾಖೆಯಲ್ಲಿ ಎಸ್.ಐ ಆಗಿರುವ ಅಂಗಾರ ಪಿ. ಅವರ ಗದ್ದೆಯಲ್ಲಿ ಬನ್ನೂರಿನ ನವೋದಯ ಸಂಘವೊಂದು ಸಾಮಾಜಿಕ, ದಾರ್ಮಿಕ ಕಾರ್ಯಗಳ ಸೇವೆಯೊಂದಿಗೆ ವಿಶಿಷ್ಟ ಸಂಘಟನೆಯಾಗಿ ತನ್ನದೇ ಆದ ಒಂದು ಹೊಸ ಮಾದರಿಯನ್ನೇ ಹುಟ್ಟು ಹಾಕಿದೆ ಎಂದರೇ ಅತಿಶಯೋಕ್ತಿಯಲ್ಲ. ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರಸಭೆ ಸದಸ್ಯೆ ಪ್ರೇಮಲತಾ ನಂದಿಲ, ನವೋದಯ ಯುವಕ ವೃಂದದ ಸಂಚಾಲಕ ಚಂದ್ರಾಕ್ಷ ಬಿ.ಎನ್, ಅಧ್ಯಕ್ಷ ಉಮೇಶ್ ಆನೆಮಜಲು, ಮಹಿಳಾ ಮಂಡಳಿ ಅಧ್ಯಕ್ಷೆ ಮಾಲತಿ, ಕಾರ್ಯದರ್ಶಿ ಸುಲೋಚನಾ, ಮಮತಾ, ದೀಪಿಕಾ, ಜಯಶ್ರೀ, ಸುರೇಖಾ, ಶೀಲಾವತಿ, ಶೋಭಾ ಸೇರಿದಂತೆ ಹಲವಾರು ಮಂದಿ ಹಲವಾರು ಮಂದಿ ಸದಸ್ಯರು ಸೇರಿಕೊಂಡು ಇತರ ನಿತ್ಯ ಕಾಯಕ ಮಾಡುವರೊಂದಿಗೆ ಭತ್ತದ ನಾಟಿ ಮಾಡಿದರು.

ವೃತ್ತಿಯಲ್ಲಿ ಅಧಿಕಾರಿ, ಪ್ರವೃತ್ತಿಯಲ್ಲಿ ಭತ್ತದ ಕೃಷಿಕ
ಪುತ್ತೂರು ಅಬಕಾರಿ ಇಲಾಖೆಯಲ್ಲಿ ಎಸ್.ಐ ಆಗಿ ಕರ್ತವ್ಯದಲ್ಲಿರುವ ಪಡೀಲು ನಿವಾಸಿ ಅಂಗಾರ ಪಿ. ಅವರು ತಮ್ಮ ಚಿಕ್ಕಪುತ್ತೂರಿನ ಭತ್ತದ ಗದ್ದೆಯಲ್ಲಿ ಸುಮಾರು 29 ವರ್ಷಗಳಿಂದ ಬೇಸಾಯ ಮಾಡುತ್ತಿದ್ದಾರೆ. ಎನೆಲು ಮತ್ತು ಸುಗ್ಗಿಯಲ್ಲಿ ಒಟ್ಟು 2 ಬೆಳೆ ಬೆಳೆಯುತ್ತಿರುವ ಅವರು ಕಳೆದ ವರ್ಷ ಒಟ್ಟು ರೂ. 1.5 ಲಕ್ಷ ಖರ್ಚು ಮಾಡಿ ಸುಮಾರು 5 ಎಕ್ರೆ ಜಮೀನಿನಲ್ಲಿ ಭತ್ತದ ಬೇಸಾಯ ಮಾಡಿದ್ದರು. ಪ್ರಥಮ ಬೆಳೆಯಲ್ಲಿ 35 ಕ್ವಿಂಟಾಲ್, 2ನೇ ಬೆಳೆಗೆ 50 ಕ್ವಿಂಟಾಲ್ ಭತ್ತ ಪಡೆದಿದ್ದು, ಸುಮಾರು ರೂ. 4ಲಕ್ಷ ಬೆಳೆ ಪಡೆದಿರುವುದಾಗಿ  ಅಂಗಾರ ರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.