HomePage_Banner
HomePage_Banner

ಬನ್ನೂರು: ನಿವೃತ್ತ ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬನ್ನೂರು ನಂದಿಲ ಮೆಸ್ಕಾಂ ಬಳಿಯ ದಿ.ಕೃಷ್ಣಪ್ಪ ಪೂಜಾರಿ ಎನ್. ಹಾಗೂ ಪೂವಕ್ಕ ದಂಪತಿ ಪುತ್ರ, ನಿವೃತ್ತ ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿ(65ವ.)ರವರು ಅಸೌಖ್ಯದಿಂದ ಜೂ. ೨೬ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಮೂಲತಹ ನೆಟ್ಟಣಿಗೆ ಮುಡ್ನೂರು ಗ್ರಾಮದ ನೆಲ್ಲಿಪುಣಿ ನಿವಾಸಿಯಾಗಿದ್ದ ಮೃತ ನಾರಾಯಣ ಪೂಜಾರಿಯವರು ಪದವಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಐದು ವರ್ಷ ಸುಳ್ಯಪದವು ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಕಂದಾಯ ಇಲಾಖೆಯಲ್ಲಿ ಗ್ರಾಮಕರಣಿಕರಾಗಿ ನೇಮಕಗೊಂಡು ಪುತ್ತೂರು ತಾಲೂಕಿನ ಬಲ್ನಾಡು, ನೆಟ್ಟಣಿಗೆ-ಮುಡ್ನೂರು, ಪಡುವನ್ನೂರು ಗ್ರಾಮಗಳಲ್ಲಿ ಸೇವೆಯನ್ನು ನೀಡಿರುತ್ತಾರೆ. ಬಳಿಕ ಕಂದಾಯ ನಿರೀಕ್ಷಕರಾಗಿ ಭಡ್ತಿ ಹೊಂದಿ ಕಡಬ ನಾಡಕಚೇರಿಗೆ ವರ್ಗಾವಣೆಗೊಂಡಿದ್ದರು. 2005ರಲ್ಲಿ ನಿವೃತ್ತಿ ಹೊಂದಿರುತ್ತಾರೆ. ನಿವೃತ್ತಿಯ ಬಳಿಕ ಕೋರ್ಟ್‌ರಸ್ತೆಯ ಬಿಇಒ ಕಛೇರಿಯ ಬಳಿಯಿರುವ ಸಾರಥಿ ಭವನ ಕಟ್ಟಡದಲ್ಲಿ ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸಿಗಬಹುದಾದ ಸೇವೆಯ ಮಾಹಿತಿಯನ್ನು ನೀಡುವ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮೃತ ನಾರಾಯಣ ಪೂಜಾರಿಯವರು ನೆಹರುನಗರದಲ್ಲಿರುವ ಶಶಿಮಂಗಳ ಸೌಹಾರ್ದ ಸಹಕಾರಿಯ ಆಡಳಿತ ನಿರ್ದೇಶಕರಾಗಿ ಸೇವೆಯನ್ನು ನೀಡುತ್ತಿದ್ದು, ತಾಯಿ ಪೂವಕ್ಕ, ಪತ್ನಿ ಪುತ್ತೂರು ಮಹಿಳಾ ಗ್ರಾಮೀಣ ಅಭಿವೃದ್ಧಿ ಸಹಕಾರಿ ಸಂಘದಲ್ಲಿ ನಿರ್ದೇಶಕಿಯಾಗಿರುವ ವಿಮಲ ಎನ್, ಪುತ್ರರಾದ ಸಾಫ್ಟ್‌ವೇರ್ ಇಂಜಿನಿಯರ್‌ಗಳಾದ ನಿತೀಶ್ ಎನ್.ಅಮೀನ್. ಮನೀಶ್ ಎನ್.ಅಮೀನ್, ಸೊಸೆ ಪ್ರೀತಿ ಮತ್ತು ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

ನಿವೃತ್ತ ಕಂದಾಯ ನಿರೀಕ್ಷಕ ನಾರಾಯಣ ಪೂಜಾರಿಯವರಿಗೆ ಶ್ರದ್ಧಾಂಜಲಿ ಸಭೆ

 

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.