HomePage_Banner
HomePage_Banner

ಒಬ್ಬ ಗೃಹರಕ್ಷಕ, ಒಂದು ಗಿಡ ಅಭಿಯಾನಕ್ಕೆ ಆರು ವರ್ಷ ಪುತ್ತೂರು ಘಟಕದಲ್ಲಿ ಗಿಡ ನೆಡುವ ಕಾರ್ಯಕ್ರಮ, ಗೃಹರಕ್ಷಕರಿಗೆ ಸೊಳ್ಳೆ ಪರದೆ ವಿತರಣೆ

Puttur_Advt_NewsUnder_1
Puttur_Advt_NewsUnder_1

  • ಮನೆಯಂಗಳದಲ್ಲೇ ಗಿಡ ನೆಟ್ಟು ಜಾಗೃತಿ – ಡಾ. ಮುರಲೀ ಮೋಹನ ಚೂಂತಾರು
  • ಶುದ್ದ ಗಾಳಿಗೆ ಗಿಡನೆಡಬೇಕು – ಕೇಶವಪ್ರಸಾದ್ ಮುಳಿಯ

ಪುತ್ತೂರು: ಗೃಹರಕ್ಷಕದಳದಿಂದ ಒಬ್ಬ ಗೃಹರಕ್ಷಕ, ಒಂದು ಗಿಡ ಅಭಿಯಾನ ಆರಂಭಗೊಂಡಿದ್ದು, ಪುತ್ತೂರು ಘಟಕದಲ್ಲಿ ವನಮಹೋತ್ಸವ ಮತ್ತು ಸೊಳ್ಳೆ ಪರದೆ ವಿತರಣಾಕಾರ್ಯಕ್ರಮ ಜೂ. 27ರಂದು ಘಟಕದ ಹಾರಾಡಿಯಲ್ಲಿರುವ ಕಾರ್ಯಾಲಯದಲ್ಲಿ ಜರುಗಿತು.

ಮನೆಯಂಗಳದಲ್ಲೇ ಗಿಡ ನೆಟ್ಟು ಜಾಗೃತಿ:
ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ವರಾದ ಡಾ| ಮುರಲೀ ಮೋಹನ ಚೂಂತಾರ್ ಅವರು ಮಾತನಾಡಿ ಮಳೆಗಾಲದ ಸಮಯದಲ್ಲಿ ಕಳೆದ 6 ವರ್ಷಗಳಿಂದ ನಿರಂತರವಾಗಿ ಪ್ರತಿ ಒಬ್ಬಗೃಹರಕ್ಷಕರಿಗೆ ಒಂದುಗಿಡದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವನಮಹೋತ್ಸವವನ್ನು ಆಚರಿಸುತ್ತಿದ್ದೇವೆ. ‘ಒಬ್ಬಗೃಹರಕ್ಷಕನಿಗೆಒಂದುಗಿಡ’ ಎಂಬ ಅಭಿಯಾನವನ್ನು ನಡೆಸುತ್ತಿದ್ದೇವೆ, ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಡುವುದರಿಂದ ಅದು ಬದುಕುವ ಸಾಧ್ಯತೆ ಕಡಿಮೆಯಾದ ಕಾರಣದಿಂದ ಮನೆಯಂಗಳದಲ್ಲೇ ಗಿಡ ನೆಟ್ಟು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಶುದ್ದ ಗಾಳಿಗೆ ಗಿಡನೆಡಬೇಕು :
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಅವರು ಮಾತನಾಡಿ, ವನಮಹೋತ್ಸವದ ಕಾರ್ಯಕ್ರಮದ ಜೊತೆಗೆ ನಾವೆಲ್ಲರೂ ವನ ದೇವತೆಗಳಿಗೆ ವೃಕ್ಷರಾಜನಿಗೆ ಆಬಾರಿಯಾಗಬೇಕು, ಗಿಡಗಳನ್ನು ನೆಡುವುದರಿಂದ ನಮಗೆ ಪರಿಸರದಲ್ಲಿ ಸಿಗುವ ಶುದ್ಧವಾದ ಗಾಳಿಯನ್ನು ಸೇವಿಸಬಹುದು. ಹೀಗೆ ಗಿಡಗಳನ್ನು ನೆಟ್ಟು ಬೆಳೆಸುವುದರ ಜೊತೆಗೆ ಅದನ್ನು ಪೋಷಿಸಿ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನುಡಿದರು.

ಸೊಳ್ಳೆ ಪರದೆ ವಿತರಣೆ:
ಸೊಳ್ಳೆಯಿಂದ ಸಾಂಕ್ರಾಮಿಕ ರೋಗ ಬರುವ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಆರೋಗ್ಯ ಇಲಾಖೆಯಿಂದ ಕೊಡಲಾದ ಸೊಳ್ಳೆ ಪರದೆಯನ್ನು ಪುತ್ತೂರು ಘಟಕದ ಗೃಹರಕ್ಷರಿಗೆ ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ಘಟಕದ ಘಟಕಾಧಿಕಾರಿ ಅಭಿಮಾನ್ಯು ರೈ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ರಾಮಚಂದ್ರ ಕಾಮತ್, ಹಿರಿಯ ಗೃಹರಕ್ಷಕರಾದ ಜಗನ್ನಾಥ್, ಗೃಹರಕ್ಷಕರಾದ ವಿಠಲ್ ನಾಯ್ಕ್, ಸತ್ಯನಾರಾಯಣ ಭಟ್ ಮತ್ತು ಜಗದೀಶ್ ಪೈ ಮುಂತಾದವರು ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.