HomePage_Banner
HomePage_Banner

ಕೋಡಿಂಬಾಳದಲ್ಲಿ ತೆರೆದ ಕೋಳಿ ಮಾಂಸದ ಅಂಗಡಿ

Puttur_Advt_NewsUnder_1
Puttur_Advt_NewsUnder_1

  • ತಹಶಿಲ್ದಾರ್ ದಾಳಿ -ದಂಡ

ಕಡಬ: ವೀಕೆ0ಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಕಾರ್ಯಾಚರಣೆಗಿಳಿದ ಕಡಬ ತಹಸೀಲ್ದಾರ್ ಅನಂತಶಂಕರ ಬಿ. ಅವರು ಕಡಬ, ಕೋಡಿ0ಬಾಳ, ಮರ್ದಾಳ ಮುಂತಾದೆಡೆಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು. ಕಾರ್ಯಾಚರಣೆ ಸಂದರ್ಭದಲ್ಲಿ ಕೋಡಿ0ಬಾಳ ಪೇಟೆಯಲ್ಲಿ 2 ಚಿಕನ್ ಸೆಂಟರ್ ಗಳು ತೆರೆದುಕೊಂಡು ವ್ಯಾಪಾರ ನಡೆಸುತ್ತಿರುವುದು ಪತ್ತೆಯಾಗಿದೆ. ಒಂದು ಅಂಗಡಿ ಮಾಲಕನಿಗೆ 2 ಸಾವಿರ ರೂ. ದಂಡ ವಿಧಿಸಿ ಅಂಗಡಿಗೆ ಬೀಗ ಜಡಿಯಲಾಯಿತು. ಅಷ್ಟರಲ್ಲಿ ಇನ್ನೊಂದು ಅಂಗಡಿಯಾತ ಶಟರ್ ಎಳೆದು ಬೀಗ ಹಾಕದೆ ಪರಾರಿಯಾಗಿದ್ದ. ಆ ಅಂಗಡಿಗೆ ತಹಸೀಲ್ದಾರರ ಆದೇಶದಂತೆ ಬೀಗ ಜಡಿಯಲಾಗಿದೆ. ಕಾರ್ಯಾಚರಣೆ ವೇಳೆ ಕಡಬ ಕೋವಿಡ್ ನೋಡಲ್ ಅಧಿಕಾರಿ ಹರೀಶ್ ಬೆದ್ರಾಜೆ ಜತೆಗಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.