HomePage_Banner
HomePage_Banner

ಗಂಡಿಬಾಗಿಲು: ಶ್ರಮದಾನದ ಮೂಲಕ ಚರಂಡಿ ದುರಸ್ಥಿ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೊಯಿಲ ಗ್ರಾಮದ ಗಂಡಿಬಾಗಿಲುನಿಂದ ಬಡ್ಡಮೆ ಕಾಲೋನಿ ಸಂಪರ್ಕ ರಸ್ತೆ ಬದಿಯ ಚರಂಡಿಯನ್ನು ಸ್ಥಳೀಯ ಯುವಕರು ಶ್ರಮದಾನದ ಮೂಲಕ ದುರಸ್ಥಿ ಮಾಡಿ ತಮ್ಮ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದರು.

ರಸ್ತೆ ಬದಿಯ ಚರಂಡಿ ಕಳೆದ ಹಲವಾರು ಸಮಯದಿಂದ ಹೂಳು ಮತ್ತು ಹುಲ್ಲುಕಡ್ಡಿ ಬೆಳೆದುನಿಂತು ಚರಂಡಿ ಸಂಪೂರ್ಣ ಮುಚ್ಚಲ್ಪಟ್ಟು ಮಳೆ ನೀರು ಚರಂಡಿಯಲ್ಲಿ ಹರಿಯಲಾಗದೆ ರಸ್ತೆ ಮೇಲೆ ಹರಿದಾಡಲಾರಂಭಿಸಿತ್ತು. ಇದನ್ನು ಮನಗಂಡ ಸ್ಥಳೀಯ ಯುವಕರು ಶ್ರಮದಾನದ ಮೂಲಕ ದುರಸ್ಥಿ ಮಾಡಿದರು. ಬಡ್ಡಮೆ ಕಾಲೋನಿಯ ಶಿವರಾಜ್, ಗುರು, ಮೋಹನ್, ಜೀತು, ಅಭಿಷೇಕ್, ಅಟೋ ರಿಕ್ಷಾ ಚಾಲಕ ಹಮೀದ್, ಪಿ.ಎಸ್. ಅಬೂಬಕ್ಕರ್, ಬಾಪಾಕುಂಞ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಸದಸ್ಯ ನಝೀರ್ ಪೂರಿಂಗ ಪೂರಕ ಸಹಕಾರ ನೀಡಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.