HomePage_Banner
HomePage_Banner

ಉಪ್ಪಳಿಗೆ: ಸೌಹಾರ್ದ ಪ್ರಗತಿ ಬಂದು ತಂಡ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಗುಮ್ಮಟೆಗದ್ದೆ ಒಕ್ಕೂಟದಲ್ಲಿ ಸೌಹಾರ್ದ ಹೆಸರಿನ ನೂತನ ಪ್ರಗತಿ ಬಂದು ತಂಡ‌ ಜೂ.24 ರಂದು ಉಪ್ಪಳಿಗೆ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆ ಗೊಂಡಿತು.
ಗುಮ್ಮಟೆಗದ್ದೆ ಒಕ್ಕೂಟದ ಉಪಾಧ್ಯಕ್ಷೆ ಉಮಾವತಿ ಸುಬ್ಬಪ್ಪ ಮಣಿಯಾಣಿ  ದೀಪ ಬೆಳಗಿಸಿ ಉದ್ಘಾಟಿಸಿ ಶುಭ‌ ಹಾರೈಸಿದರು.ವಲಯ ಮೆಲ್ವೀಚಾರಕ ಶಿವಪ್ಪ,ಒಕ್ಕೂಟದ ಕಾರ್ಯದರ್ಶಿ ಅಶೋಕ, ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ರೈ ಬೈಲಾಡಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ನಿತ್ಯಾನಂದ ಬೈಲಾಡಿ ಉಪಸ್ಥಿತರಿದ್ದರು. ತಂಡದ ಪ್ರಬಂಧಕರಾದ ಫಾರೂಕ್ ಅಜ್ಜಿಕಲ್ಲು, ಸಂಯೋಜಕ ಪ್ರಮೋದ್ ರೈ, ಕೋಶಾಧಿಕಾರಿ ಮಹಮ್ಮದ್ ಸಾದಿಕ್, ಸದಸ್ಯರಾದ ಧನಂಜಯ ನಾಯ್ಕ ಉಪ್ಪಳಿಗೆ, ಮಹಮ್ಮದ್ ಫಹಲ್, ತಾಜುದ್ದೀನ್ ಭಾಗವಹಿಸಿದ್ದರು.ಒಕ್ಕೂಟದ ಕೋಶಾಧಿಕಾರಿ ವಿಜಯಲಕ್ಷ್ಮಿ ಎಸ್.ರೈ ಸ್ವಾಗತಿಸಿ ಸೇವಾ ಪ್ರತಿನಿಧಿ ಭಾರತಿ ಉಪ್ಪಳಿಗೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.