HomePage_Banner
HomePage_Banner

ರಸ್ತೆಗಳ ಹೆಸರು, ಪ್ರತಿಮೆ ಸ್ಥಾಪನೆಗೆ ಮಾನದಂಡ ಕಡ್ಡಾಯ – ಪೌರಾಯುಕ್ತ ಮಧು ಎಸ್ ಮನೋಹರ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ನಗರಸಭೆ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಸರಕಾರಿ ಅಥವಾ ಖಾಸಗಿ ಜಮೀನಿನಲ್ಲಿ ಯಾವುದೇ ಗಣ್ಯ ವ್ಯಕ್ತಿಗಳ ಪ್ರತಿಮೆ ಸ್ಥಾಪನೆ, ಅಡ್ಡರಸ್ತೆ/ ರಸ್ತೆಗಳು/ ವೃತ್ತಗಳಿಗೆ ಹೊಸದಾಗಿ ಹೆಸರಿಟ್ಟು ನಾಮಕರಣ ಮಾಡುವ ಯಾ ಈಗಾಗಲೇ ಹೆಸರಿಸಿದ ರಸ್ತೆ/ವೃತ್ತ/ ಅಡ್ಡರಸ್ತೆ ಇತ್ಯಾದಿಗಳಿಗೆ ಹೆಸರನ್ನು ಬದಲಾಯಿಸಿ ಹೊಸ ಹೆಸರು ಇಡುವ ಸಂದರ್ಭ ಸಾರ್ವನಿಕರು ಕರ್ನಾಟಕ ಪುರಸಭೆಗಳ ಕಾಯ್ದೆ, ಕಾನೂನು, ಮಾನದಂಡಗಳನ್ನು ಪಾಲಿಸಬೇಕಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ತಿಳಿಸಿದ್ದಾರೆ.

ಸರಕಾರದ ಸಾರ್ವಜನಿಕ ಜಾಗದಲ್ಲಿ ಯಾವುದೇ ಸಂತರ/ಶರಣರ, ಜನ ನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಅಥವಾ ಗಣ್ಯ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸುವುದನ್ನು ನಿರ್ಬಂಧಿಸಲಾಗಿದೆ. ಪ್ರತಿಮೆ ಸ್ಥಾಪಿಸಲು ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ ಪ್ರಾಥಮಿಕವಾಗಿ ಅಂತಹ ಸಂಘ ಸಂಸ್ಥೆಗಳು ತಮಗೆ ಸೇರಿದ ನಿವೇಶನದಲ್ಲಿ ಪ್ರತಿಮೆಯನ್ನು ನಿರ್ಮಿಸುವುದು ಹಾಗೂ ಅವುಗಳ ಭದ್ರತೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಮುಚ್ಚಳಿಕೆ ನೀಡಬೇಕು. ಇದರ ಜೊತೆಗೆ ಮಂಜೂರಾತಿ ಪಡೆದು ಸ್ಥಾಪಿಸಿದ ಪ್ರತಿಮೆಗಳ ನಿರ್ವಹಣೆಯನ್ನು ಆಯಾ ಸಂಘ ಸಂಸ್ಥೆಗಳೇ ನಿರ್ವಹಿಸಬೇಕು. ನಗರ ಸ್ಥಳೀಯ ಸಂಸ್ಥೆಗಳು ಕೌನ್ಸಿಲ್ ಅಧಿವೇಶನದಲ್ಲಿ ನಿರ್ಣಯ ಮಾಡಿದ ಪ್ರಸ್ತಾವನೆಯನ್ನು ಸಾರ್ವಜನಿಕರ ಗಮನಕ್ಕೆ ಪತ್ರಿಕೆಯಲ್ಲಿ ಪ್ರಚುರ ಪಡಿಸಿ ತಾಲೂಕು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲೂ ಪ್ರಚುರ ಪಡಿಸಿ, ಪಂಚನಾಮೆ ಮಾಡಿಸಿ, ಸಾರ್ವಜನಿಕರ ಸಲಹೆ/ ಆಕ್ಷೇಪಣೆಯನ್ನು 30 ದಿನಗಳ ಕಾಲಾವಕಾಶಕ್ಕೆ ನೀಡಿ ಆಕ್ಷೇಪಣೆಯನ್ನು ನಗರಸಭೆ ನಿರ್ಣಯಕ್ಕಾಗಿ ಮಂಡಿಸಬೇಕು. ಹೀಗೆ ಠರಾವು ಮಾಡಿದ ವಿಷಯದ ಬಗ್ಗೆ ರಸ್ತೆಗೆ ಹೆಸರು ಇಟ್ಟರೆ ಅಥವಾ ಯಾವುದಾರೂ ಪ್ರತಿಮೆ ಸ್ಥಾಪಿಸಿದರೆ ಅದರಿಂದ ಯಾವ ರೀತಿಯ ಗಲಭೆ ಆಗುವ ಸಾಧ್ಯತೆ ಇಲ್ಲ ಎಂದು ಜಿಲ್ಲಾಧಿಕಾರಿಗಳ ವರದಿ ಪಡೆದು ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಬಹುದು. ಈಗಿರುವ ಹೆಸರನ್ನು ಬದಲಾಯಿಸುವ ಯಾವ ಹೊಸ ಹೆಸರು ಇಡುವ ಪ್ರಸ್ತಾವನೆಯನ್ನು ಸರಕಾರದ ಪೂರ್ವಾನುಮತಿ ಪಡೆಯದೇ ಮಾಡಬಾರದು ಎಂದು ಅವರು ಪೌರಾಯುಕ್ತ ಮಧು ಎಸ್ ಮನೋಹರ್ ಮಾಹಿತಿ ನೀಡಿದ್ದಾರೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.