HomePage_Banner
HomePage_Banner

ಮಹಾಲಿಂಗೇಶ್ವರ ದೇವಸ್ಥಾನದಿಂದ ಮನೆಗೊಂದು ಬಿಲ್ವಪತ್ರೆ ಅಭಿಯಾನಕ್ಕೆ ಚಾಲನೆ

Puttur_Advt_NewsUnder_1
Puttur_Advt_NewsUnder_1
  • ನಗರಸಭೆ 16 ಸಾವಿರ ಮನೆಗಳಿಗೆ ಹಂಚಿಕೆ ಗುರಿ- ಸದಸ್ಯರಿಗೆ ಸಾಂಕೇತಿಕ ವಿತರಣೆ
  • ಭಕ್ತಿಯನ್ನು ಹೆಚ್ಚಿಸುವ ಕೆಲಸ – ಕೆ.ಜೀವಂಧರ್ ಜೈನ್
  • ಭಕ್ತರ ನಿಕಟ ಸಂರ್ಪಕ್ಕೆ ಬಿಲ್ವಪತ್ರೆಯೂ ಕಾರಣ – ಎನ್.ಕೆ.ಜಗನ್ನಿವಾಸ ರಾವ್
  • ಪ್ರಥಮ ಹಂತದಲ್ಲಿ 2ಸಾವಿರ ಗಿಡ ಹಂಚಿಕೆ – ಕೇಶವ ಪ್ರಸಾದ್ ಮುಳಿಯ

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಪುತ್ತೂರು ನಗರಸಭೆ ವ್ಯಾಪ್ತಿಯ 16 ಸಾವಿರ ಮನೆಗಳಿಗೆ ಬಿಲ್ವಪತ್ರೆ ನೀಡುವ ಅಭಿಯಾನಕ್ಕೆ ಜೂ.28ರಂದು ಚಾಲನೆ ನೀಡಲಾಯಿತು.

ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಮಾಜಿ ಆಡಳಿತ ಮೊಕ್ತೇಸರ ಎನ್ ಕೆ ಜಗನ್ನಿವಾಸ ರಾವ್ ನಗರಸಭೆ ವಾರ್ಡ್ ಸದಸ್ಯರಿಗೆ ಬಿಲ್ವಪತ್ರೆ ಗಿಡಗಳನ್ನು ವಿತರಿಸಿದರು.

ಭಕ್ತಿಯನ್ನು ಹೆಚ್ಚಿಸುವ ಕೆಲಸ:
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಯಾವುದೇ ವ್ಯವಹಾರ ಪ್ರಾರಂಭಿಸಿದರು ಮಹಾಲಿಂಗೇಶ್ವರ ದೇವರ ನೆನೆಯುವುದು ಪುತ್ತೂರಿನ ಭಕ್ತರ ಪ್ರಥಮ ಕೆಲಸ. ಅಧೆ ರೀತಿ ಪ್ರಸ್ತುತ ದಿನಗಳಲ್ಲಿ ಆಮ್ಲಜನಕ ಉತ್ಪತಿಗಾಗಿ ಗಿಡಗಳನ್ನು ನೆಡುವಂತೆ ಶ್ರೀ ಮಹಾಲಿಂಗೇಶ್ವರನ ಭಕ್ತಿಯನ್ನು ಹೆಚ್ಚಿಸುವ ಕೆಲಸವು ಬಿಲ್ವಪತ್ರೆ ಗಿಡ ನೀಡುವ ಮೂಲಕ ಆಗಲಿದೆ ಎಂದು ಹೇಳಿದರು.

ಭಕ್ತರ ನಿಕಟ ಸಂರ್ಪಕ್ಕೆ ಬಿಲ್ವಪತ್ರೆಯೂ ಕಾರಣ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್ ಅವರು ಮಾತನಾಡಿ ದೇವಸ್ಥಾನ ಅಭಿವೃದ್ಧಿ ಆಗಬೇಕಾದರೆ ತಂತ್ರವರ್ಗ, ವ್ಯವಸ್ಥಾಪನಾ ಸಮಿತಿ ಸದಸ್ಯರ ಉತ್ತಮ ಸೇವೆ ಇರಬೇಕು. ಎಲ್ಲಾ ಕೆಲಸ ಮಾಡಲು ವ್ಯವಸ್ಥಾಪನಾ ಸಮಿತಿ ಸಿದ್ದರಾಗಿರುವ ಮೂಲಕ ತಮ್ಮನ್ನು ನಾವು ಸಮರ್ಪಣೆ ಮಾಡಿಕೊಳ್ಳಬೇಕು. ನಾನು ಸುಮಾರು 16 ವರ್ಷದ ಅವಧಿಯಲ್ಲಿ ಮಾಡಿದ ಸೇವೆಗೆ ಮಹಾಲಿಂಗೇಶ್ವರ ಪೂರ್ಣ ಅನುಗ್ರಹ ಕೊಟ್ಟಿದ್ದಾರೆ. ಕಟೀಲು, ಕೊಲ್ಲೂರು, ಸುಬ್ರಹ್ಮಣ್ಯ ಸೇರಿದಂತೆ ಹಲವು ದೇವಸ್ಥಾನಗಳಿಗೆ ಹೊರಗಿನ ಭಕ್ತರು ಹೆಚ್ಚಾಗಿ ಬರುತ್ತಾರೆ. ಆದರೆ ಪುತ್ತೂರಿನಲ್ಲಿ ಮಾತ್ರ ನಮ್ಮೂರಿನ ಜನರೇ ಬಂದು ಮಹಾಲಿಂಗೇಶ್ವರ ಆರಾಧನೆ ಮಾಡುವ ಏಕೈಕ ದೇವಸ್ಥಾನ ಎಂದ ಅವರು ಜಾತ್ರೆ ಸಂದರ್ಭದಲ್ಲಿನ ಕಟ್ಟೆಪೂಜೆಯಿಂದಾಗಿ ಇಲ್ಲಿ ಭಕ್ತರ ನಿಕಟ ಸಂಪರ್ಕವಿದೆ. ಇದೀಗ ಮನೆ ಮನೆ ಬಿಲ್ವಪತ್ರೆ ಮೂಲಕ ಇನ್ನೂ ಹೆಚ್ಚಿನ ಭಕ್ತರು ನಿಕಟ ಸಂಪರ್ಕ ಬೆಳಸಲು ಇನ್ನೊಂದು ಕಾರಣ ಆಗಲಿದೆ ಎಂದು ಅವರು ಹೇಳಿದರು.

ಪ್ರಥಮ ಹಂತದಲ್ಲಿ 2 ಸಾವಿರ ಗಿಡ ಹಂಚಿಕೆ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಶಿವನಿಗೆ ಪ್ರಿಯವಾದ ಬಿಲ್ವಪತ್ರೆಗೆ ಬಹಳ ಮಹತ್ವವಿದೆ. ಪುತ್ತೂರಿನ ಪ್ರತಿ ಮನೆಯಲ್ಲೂ ಬಿಲ್ವಪತ್ರೆ ಗಿಡ ಬೆಳೆಸುವ ಗುರಿ ಇದೆ. ಈ ನಿಟ್ಟಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿರುವ 16ಸಾವಿರ ಮನೆಗಳಿಗೂ ಬಿಲ್ವಪತ್ರೆ ಗಿಡ ವಿತರಣೆ ಮಾಡುವ ಯೋಜನೆಗೆ ಸಂಬಂಧಿಸಿ ಪ್ರಥಮ ಹಂತದಲ್ಲಿ 2ಸಾವಿರ ಗಿಡಗಳನ್ನು ವಿತರಣೆ ಮಾಡಲಿದ್ದೇವೆ. ಅದನ್ನು ಆಯಾ ವಾರ್ಡ್‌ನ ನಗರಸಭಾ ಸದಸ್ಯರು ನಾಗರಿಕಗೆ ವಿತರಣೆ ಮಾಡಲಿದ್ದಾರೆ ಎಂದರು. ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಧಾನ ಅರ್ಚಕ ವಿ.ಎಸ್ ಭಟ್ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ ಗೌಡ ಸ್ವಾಗತಿಸಿದರು. ಡಾ.ಸುಧಾ ಎಸ್ ರಾವ್ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ ಐತ್ತಪ್ಪ ನಾಯ್ಕ್ ವಂದಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರಾಮ್ ದಾಸ್ ಗೌಡ, ವೀಣಾ ಬಿ ಕೆ, ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್‌ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು ಮತ್ತು ನಗರಸಭೆ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.