HomePage_Banner
HomePage_Banner

ಜುಲೈಗೆ ಇನ್ನೇನೂ ಪರೀಕ್ಷೆ ಆರಂಭ – ಸಿದ್ಧತೆ ಮಾಡುವುದು ಬಿಡಿ, ಬದುಕು ಕಟ್ಟಿಕೊಳ್ಳುವುದೇ ಕಷ್ಟ…! !

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಚಿಕ್ಕಮುಡ್ನೂರಿನ ಕುಂಬುರ್ಗದ ವಿದ್ಯಾರ್ಥಿನಿ ಅಳಲು
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

ಪುತ್ತೂರು: ಜುಲೈ ತಿಂಗಳ 19 ಮತ್ತು 22 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಇನ್ನೆನು ಆರಂಭಗೊಳ್ಳಲಿದೆ. ಆದರೆ ಪರೀಕ್ಷೆ ಸಿದ್ದತೆ ಮಾಡುವುದು ಬಿಡಿ ಜೀವನ ಸಾಗಿಸುವುದೇ ಕಷ್ಟ ಎಂದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯೊಬ್ಬರು ತನ್ನ ಅಳಲನ್ನು ತೋಡಿಕೊಂಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನೆಯಾಗಿದೆ.


ಬಡತನದ ಜೀವನದಲ್ಲಿ ಕೂಲಿ ಕೆಲಸ ಮಾಡಿ ಬದುಕು ಸಾಗಿಸುತ್ತಿರುವ ಬನ್ನೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಗೋಪಾಲ್ ಶೆಟ್ಟಿ ದಂಪತಿ ಮನೆ ಶಿಥಿಲ ಗೊಂಡು ಬಿದ್ದು ಹೋಗಿದೆ. ತಾತ್ಕಾಲಿಕ ದುರಸ್ಥಿ ಮಾಡುವ ಎಂದರೂ ಟಾರ್ಪಾಲು ಹೊದೆಸಲು ಕೂಡಾ ಆಧಾರ ಇಲ್ಲದ ಪರಿಸ್ಥಿತಿ. ಇವರ ಪುತ್ರಿ ದೀಕ್ಷಾ ಶೆಟ್ಟಿ  ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ. ಇವರ ಪುತ್ರ ಅದೇ ಶಾಲೆಯಲ್ಲಿ 8 ನೇ ತರಗತಿ. ಆದರೆ ಇದೀಗ ಗೋಪಾಲ ಶೆಟ್ಟಿ ಅವರಿಗೆ ಕಾಲು ನೋವಿನಿಂದ ಕೆಲಸಕ್ಕೆ ಹೋಗದ ಪರಿಸ್ಥಿತಿ. ಅವರ ಪತ್ನಿ ಬೀಡಿ ಕಟ್ಟಿ, ಕೂಲಿ ಕೆಲಸದಿಂದಲೇ ಜೀವನ ಸಾಗಿಸಬೇಕಾದ ಪರಿಸ್ಥಿತಿ. ಇದೀಗ ಮಳೆಗೆ ಬಿದ್ದು ಹೋದ ಮನೆಯ ಮುಂದೆ ನಿಂತು ನಮಗೆ ಸಹಾಯ ಮಾಡಿ ಎಂದು ಅವರ ಪುತ್ರಿ ಅಲವತ್ತುಗೊಂಡಿದ್ದಾರೆ.

ನೆರವಿಗಾಗಿ ಸ್ಪಂಧಿಸಿ :
ಖಾತೆದಾರನ ಹೆಸರು: ವಿಕಾಸ್ ಶೆಟ್ಟಿ (ಗೋಪಾಲ್ ಶೆಟ್ಟಿಯವರ ಪುತ್ರ)
ಖಾತೆ ಸಂಖ್ಯೆ : 83740100012736
ಬ್ಯಾಂಕ್ ಬರೋಡಾ, ಪುತ್ತೂರು ಮೈನ್
IFSC BARB0 Bank of Baroda

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.