HomePage_Banner
HomePage_Banner

ಅಕ್ಷರ ದಾಸೋಹ ನೌಕರರಿಂದ ಕಡಬದಲ್ಲಿ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1

ಕಡಬ: ಕಡಬ ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕಡಬ ತಾಲೂಕು ಕಛೇರಿ ಎದುರು ಹಕ್ಕೊತ್ತಾಯ ಮಂಡಿಸಿ ಸೋಮವಾರ ಪ್ರತಿಭಟನೆ ನಡೆಯಿತು.

ಅಕ್ಷರ ದಾಸೋಹ ನೌಕರರ ವೇತನವನ್ನು ರೂ 2,500 ದಿಂದ 15,000ಕ್ಕೇ ಏರಿಸಬೇಕು, ಹತ್ತು ಸಾವಿರ ರೂನ ಉಚಿತ ಕೊರೊನಾ ಪ್ಯಾಕೇಜ್ ಘೋಷಿಸಬೇಕು, ಬಾಕಿ ಇರುವ ವೇತನವನ್ನು ತಕ್ಷಣ ನೀಡಬೇಕು, ಉಚಿತ ಕೋವಿಡ್ ಲಸಿಕೆ ನೀಡಬೇಕು, ನೌಕರರಿಗೆ ಸೇವಾ ನಿಯಮಾವಳಿಗಳು, ಸಾಮಾಜಿಕ ಭದ್ರತೆ, ಇಪಿಎಫ್, ನಿವೃತ್ತಿ ವೇತನ ಒದಗಿಸಬೇಕು, ನೌಕರರು ಕೊರೊನ ಬಾಧಿತರಾದರೆ ಅವರಿಗೆ ಉಚಿತ ಚಿಕಿತ್ಸೆ ನೀಡಬೇಕು, ಮಾತ್ರವಲ್ಲ ಮರಣ ಹೊಂದಿದಲ್ಲಿ ಅವರ ಕುಟುಂಬಕ್ಕ೩ಎ ಹತ್ತು ಲಕ್ಷ ರೂ ಪರಿಹಾರ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಕಾರ್ಮಿಕ ಮುಖಂಡ ಬಿ.ಎಂ.ಭಟ್ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕರಾಗಳು ದೇಶದ ಜನರ ಜೀವನದಲ್ಲಿ ಚೆಲ್ಲಾಟವಾಡುತ್ತಿವೆ, ನಾವು ಮಾತೆಯರ ಪರ ಎಂದು ಬಡಾಯಿಕೊಚ್ಚಿಕೊಳ್ಳುತ್ತಿರುವ ಬಿಜೆಪಿ ಸರಕಾರ ಮಹಿಳೆಯರೇ ಆದ ಬಿಸಿಯೂಟ ನೌಕರರಿಗೆ ಕನಿಷ್ಟ ವೇತನ ನೀಡಿ ಅನ್ಯಾಯವೆಸಗುತ್ತಿದೆ. ಇದು ಖಂಡನೀಯ, ಹಾಗೂ ಕಾರ್ಮಿಕ ವಿರೋಧಿ ಧೋರಣಯಾಗಿದೆ, ಕೇಂದ್ರ ಸರಕಾರ ಕಾರ್ಮಿಕ ಕಾನೂನುಗಳನ್ನು ಮಾಲಕರ ಪರವಾಗಿ ತಿದ್ದುಪಡಿ ಮಾಡುತ್ತಾ ಭೂಮಿಯನ್ನು ಕಾರ್ಪೋರೇಟ್ ಸಣಸ್ಥೆಗಳಿಗೆ ನೀಡಲು ಕಾನೂನು ತಿದ್ದುಪಡಿ ಮಾಡುತ್ತಿದೆ. ಸಾರ್ವಜನಿಕ ರಂಗಗಳನ್ನು ಖಾಸಗೀಕರಣ ಮಾಡುತ್ತಿರುವ ಬಿಜೆಪಿ ಸರಕಾರ ಬಿಸಿಯೂಟವನ್ನು ನಿಲ್ಲಿಸಲು ಹುನ್ನಾರ ನಡೆಸುತ್ತಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ಉಗ್ರ ಹೋರಾಟ ಮಾಡಿ ಅಕ್ಷರದಾಸೋಹ ನೌಕರರಿಗೆ ನ್ಯಾಯ ಒದಗಿಸಲಾಗುವುದು ಎಂದರು.

ಬಳಿಕ ಕಡಬ ತಹಶಿಲ್ದಾರ್ ಅನಂತಶಂಕರ ಅವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಮುಖಂಡರಾದ ರಾಮಚಂದ್ರ, ಗಣೇಶ್ ಪ್ರಸಾದ್, ವಿದ್ಯಾರ್ಥಿ ನಾಯಕ ವಿನುಶರಮಣ ಮತ್ತಿತರರು ಉಪಸ್ಥಿತರಿದ್ದರು. ಅಕ್ಷರದಾಸೋಹ ನೌಕರರ ಸಂಗದ ಅಧ್ಯಕ್ಷೆ ರೇವತಿ ಸ್ವಾಗತಿಸಿದರು. ಕಾರ್ಯದರ್ಶಿ ನಳಿನಿ ವಂದಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.