HomePage_Banner
HomePage_Banner

ಪುತ್ತೂರು ನಗರಸಭೆ ಆಡಳಿತ ಕಚೇರಿಯಲ್ಲಿ ಮಳೆಕೊಯ್ಲು ಕಾಮಗಾರಿಗೆ ಶಿಲಾನ್ಯಾಸ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಭವಿಷ್ಯದ ದೃಷ್ಟಿಯಿಂದ ಎಲ್ಲಾ ಮನೆಗಳಲ್ಲೂ ಮಳೆ ಕೊಯ್ಲು ಅಗತ್ಯ- ಸಂಜೀವ ಮಠಂದೂರು

ಪುತ್ತೂರು: ಪುತ್ತೂರು ನಗರಸಭೆಯ ಕಚೇರಿ ಕಟ್ಟಡಕ್ಕೆ ರೂ. ೯ ಲಕ್ಷ ವೆಚ್ಚದಲ್ಲಿ ಮಳೆನೀರು ಕೊಯ್ಲು ಅಳವಡಿಕೆ ಕಾರ್ಯಕ್ಕೆ ಶಾಸಕ ಸಂಜೀವ ಮಠಂದೂರು ಅವರು ಜೂ. ೨೮ರಂದು ಶಿಲಾನ್ಯಾಸ ನೆರವೇರಿಸಿದರು.

ಶಿಲಾನ್ಯಾಸ ನೆರವೇರಿಸಿದ ಶಾಸಕರು ಮಾತನಾಡಿ ನೀರಿನ ಬಗ್ಗೆ ಸಾವಿರಾರು ಕೋಟಿ ಖರ್ಚು ಮಾಡಿ ನಗರವಾಸಿಗಳಿಗೆ ಕುಡಿಯುವ ನೀರನ್ನು ಪೂರೈಸುತ್ತೇವೆ. ಇದ ಜೊತೆಗೆ ಪ್ರಕೃತಿದತ್ತವಾಗಿ ಸಿಗುವ ಮಳೆಯ ನೀರನ್ನು ಸಂಗ್ರಹಿಸಿ ಇಂಗಿಸಿ ಅಂತರಜಲ ಕಾಪಾಡಬೇಕು. ಇದಕ್ಕಾಗಿ ಮಳೆಕೊಯ್ಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಿವಾರ್ಯವಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ೭೦ ಸಾವಿರ ಜನಸಂಖ್ಯೆಯಿದ್ದು, ೧೭ ಸಾವಿರ ಮನೆಗಳಿವೆ. ಭವಿಷ್ಯದಲ್ಲಿ ಈ ಎಲ್ಲ ಮನೆಗಳೂ ಸಣ್ಣ ಸಣ್ಣ ಪ್ರಮಾಣದಲ್ಲಾದರೂ ಮಳೆ ಕೊಯ್ಲು ಮಾಡಿದರೆ ಉತ್ತಮ. ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ ೧೩೫ ಲೀಟರ್ ನೀರು ಕೊಡಬೇಕೆಂಬುದು ನಗರಸಭೆ ಆಡಳಿತದ ಧ್ಯೇಯ. ಇದಕ್ಕಾಗಿಯೇ ಇದೀಗ ಸಮಗ್ರ ಕುಡಿಯುವ ನೀರಿನ ಯೋಜನೆ ಜಲಸಿರಿ ಅನುಷ್ಠಾನಗೊಳ್ಳುತ್ತಿದೆ. ಇದರೊಂದಿಗೆ ಮಳೆ ಕೊಯ್ಲು ಕೂಡ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ನೀರಿನ ಸಮಸ್ಯೆ ನೀಗುತ್ತದೆ ಎಂದರು.

ಹೊಸ ಮನೆಗಳಿಗೆ ಮಳೆ ಕೊಯ್ಲು ಘಟಕ:
ನಗಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ನಗರ ಸಭಾ ಕಟ್ಟಡದಿಂದಲೇ ಮಳೆಕೊಯ್ಲು ಆರಂಭಿಸಿದ್ದು, ಮುಂದೆ ಈಗಾಗಲೆ ಕಟ್ಟಡ ನಿರ್ಮಾಣದ ಬೈಲಾ ತಿದ್ದುಪಡಿಯ ಯೋಜನೆ ಆಗುತ್ತಿದೆ. ಹೊಸ ಮನೆಗಳಿಗೆ ಪರವಾನಗಿ ನೀಡುವಾಗ ಪ್ರತೀ ಮನೆಯಲ್ಲೂ ಮಳೆ ಕೊಯ್ಲು ಘಟಕ ಸ್ಥಾಪಿಸಲು ಸೂಚಿಸಲಾಗುತ್ತದೆ ಎಂದರು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಭಾಮಿ ಅಶೋಕ್ ಶೆಣೈ, ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ವೇತಾಕಿರಣ್, ರಾಮಚಂದ್ರ, ನಗರಸಭೆ ಸದಸ್ಯರಾದ ಪಿ.ಜಿ. ಜಗನ್ನಿವಾಸ ರಾವ್, ಪ್ರೇಮಲತಾ ನಂದಿಲ, ಯಶೋಧಾ ಹರೀಶ್ ಪೂಜಾರಿ, ಮಮತಾ ರಂಜನ್, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.

ಕಚೇರಿ ಬಳಕೆಗೆ ಮಳೆ ನೀರು
೧೪೦೦ ಚದರ ಅಡಿಯ ಕಟ್ಟಡದಲ್ಲಿ ಸಂಗ್ರಹವಾಗುವ ಮಳೆ ನೀರು ನಗರಸಭಾ ಕಟ್ಟಡದ ಬಳಿ ೧೦ ಸಾವಿರ ಲೀಟರ್ ಸಾಮರ್ಥ್ಯದ ಸಂಪ್ ಮಾದರಿಯ ಟ್ಯಾಂಕ್ ನಿರ್ಮಾಣವಾಗಲಿದ್ದು, ಕಟ್ಟಡದ ಮಹಡಿ ಮೇಲೆ ಬಿದ್ದ ಮಳೆ ನೀರು ಈ ಟ್ಯಾಂಕ್‌ಗೆ ಬಂದು ಸೇರುವಂತೆ ಪೈಪ್‌ಲೈನ್ ನಿರ್ಮಿಸಲಾಗುತ್ತದೆ. ಟ್ಯಾಂಕ್‌ನಲ್ಲಿ ಸಂಗ್ರಹವಾಗುವ ನೀರನ್ನು ಶೌಚಾಲಯ ಬಳಕೆಗಾಗಿ ಉಪಯೋಗಿಸಲಾಗುತ್ತದೆ. ಹೆಚ್ಚುವರಿ ನೀರನ್ನು ಕಟ್ಟಡದ ವಠಾರದಲ್ಲಿರುವ ಕೊಳವೆ ಬಾವಿಗೆ ಮರುಪೂರಣ ಮಾಡಲಾಗುತ್ತದೆ. ಮಳೆಗಾಲ ಮುಗಿದ ಮೇಲೂ ಟ್ಯಾಂಕ್‌ನ ನೀರನ್ನು ಒಂದಷ್ಟು ಕಾಲ ಶೌಚಾಲಯದಲ್ಲಿ ಬಳಸಲಾಗುತ್ತದೆ. ಈ ಮೂಲಕ ಮಳೆ ನೀರಿನ ಸದ್ಬಳಕೆ – ಮಧು ಎಸ್ ಮನೋಹರ್, ಪೌರಾಯುಕ್ತರು ನಗರಸಭೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.