HomePage_Banner
HomePage_Banner

ಪಾಲ್ತಾಡಿ ಗ್ರಾಮದ ಕಮಲ‌ ಅಂಬೋಡಿ ಕೋವಿಡ್ ಗೆ ಬಲಿ – ಹಿಂಜಾವೇ ಕಾರ್ಯಕರ್ತರಿಂದ ಅಂತ್ಯ ಸಂಸ್ಕಾರ

Puttur_Advt_NewsUnder_1
Puttur_Advt_NewsUnder_1

ಮೃತ ಕಮಲ ಅವರ ಮಗನ ಜೊತೆ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಸಂಪ್ಯ ಪೊಲೀಸ್ ಠಾಣೆಯ ಮುಖ್ಯಮಂತ್ರಿ ಪದಕ ವಿಜೇತ ಹೆಡ್ ಕಾನ್ಸ್ಟೇಬಲ್ ಪ್ರವೀಣ್ ರೈ 


ಪುತ್ತೂರು: ಕೋವಿಡ್ -19 ಸೋಂಕಿಗೆ ತುತ್ತಾದ ಪಾಲ್ತಾಡಿ ಗ್ರಾಮದ ಮಹಿಳೆಯೊಬ್ಬರು ಜೂ.28 ರಂದು ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಅವರ ಮೃತದೇಹವನ್ನು ಹಿಂದು ಜಾಗರಣ ವೇದಿಕೆ ಕಾರ್ಯಕ್ರರ್ತರು ಅಂತ್ಯ ಸಂಸ್ಕಾರ ನಡೆಸಿದರು. ಮೃತ ಕಮಲ ಅವರ ಮಗನ ಜೊತೆ ಚಿತೆಗೆ ಅಗ್ನಿ ಸ್ಪರ್ಶವನ್ನು ಸಂಪ್ಯ ಪೊಲೀಸ್ ಠಾಣೆಯ ಮುಖ್ಯಮಂತ್ರಿ ಪದಕ ವಿಜೇತ ಹೆಡ್ ಕಾನ್ಸ್ಟೇಬಲ್ ಪ್ರವೀಣ್ ರೈ  ಅವರು ಮಾಡಿದರು.

ಪಾಲ್ತಾಡಿ ಗ್ರಾಮದ ಕಮಲ ಅಂಬೋಡಿ ಮೃತಪಟ್ಟವರು. ಅವರು ಅನಾರೋಗ್ಯದಿಂದಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಹಿಂಜಾವೇಯಿಂದ ಅಂತ್ಯ ಸಂಸ್ಕಾರ:
ಕಮಲ ಅಂಬೊಡಿ ಎಂಬವರ ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ಯಿಂದ ಇಡ್ಕಿದು ಗ್ರಾಮದ ಹಿಂದು ರುದ್ರಭೂಮಿ ಗೆ ಹಿಂದು ಜಾಗರಣ ವೇದಿಕೆ ಯ ಆಂಬುಲೆನ್ಸ್ ನಲ್ಲಿ ತಂದು ಹಿಂದು ಜಾಗರಣ ವೇದಿಕೆ ಪುತ್ತೂರಿನ ಕಾರ್ಯಕರ್ತರು ಕೋವಿಡ್ ನಿಯಮಾನುಸಾರ ವಾಗಿ ಹಿಂದು ಸಂಸ್ಕೃತಿಯಂತೆ ಅಂತ್ಯಸಂಸ್ಕಾರ ನೆರವೇರಿಸಿದರು. ಪಾಲ್ತಾಡು ಉಳ್ಳಾಕ್ಲು ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಗುರುಕಿರಣ್, ಕಾರ್ಯದರ್ಶಿ ಅಜಿತ್ ಶೆಟ್ಟಿ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕಿಟಣ್ಣ ರೈ ಪಾಲ್ತಾಡಿ, ಸದಸ್ಯ ತಾರಾನಾಥ, ಹರೀಶ್, ಜಯರಾಮ ರೈ, ಜಯರಾಮ ಗೌಡ, ಹರೀಶ್ ರೈ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.