HomePage_Banner
HomePage_Banner

ಜೂ.30: ಉಪ್ಪಿನಂಗಡಿ ಸ. ಪ. ಪೂ. ಕಾಲೇಜಿನ ಹೈಸ್ಕೂಲ್ ವಿಭಾಗದ ಸಹ ಶಿಕ್ಷಕ ಗುಡ್ಡಪ್ಪ ಗೌಡ ಬಲ್ಯ ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಕಳೆದ ೧೨ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಗುಡ್ಡಪ್ಪ ಬಲ್ಯ ಇವರು ಜೂ. 30ರಂದು ತನ್ನ 30 ವರ್ಷಗಳ ಸುದೀರ್ಘ ಸೇವೆಯೊಂದಿಗೆ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ.

ಕಡಬ ತಾಲೂಕು ಬಲ್ಯ ಗ್ರಾಮದ ಹೊನ್ನಪ್ಪ ಗೌಡ ಮತ್ತು ದೇವಮ್ಮ ದಂಪತಿ ಪುತ್ರನಾಗಿ ಜನಿಸಿದ ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಲ್ಯ, ಪಡುಬೆಟ್ಟು, ಸರಕಾರಿ ಪ್ರೌಢ ಶಾಲೆ ಕಡಬ, ಕೆನರಾ ಪದವಿ ಪೂರ್ವ ಕಾಲೇಜು ಮಂಗಳೂರು ಮತ್ತು ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದಿರುತ್ತಾರೆ. ಕೊಡಿಯಾಲ್ ಬೈಲ್ ಸರಕಾರಿ ಶಿಕ್ಷಕರ ತರಬೇತಿ ಕೇಂದ್ರದಿಂದ ಟಿ.ಸಿ.ಎಚ್. ತರಬೇತಿ ಪಡೆದು 1991ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೆಲ್ಯಾಡಿ ಶಾಲೆಯಲ್ಲಿ ಕರ್ತವ್ಯಕ್ಕೆ ಸೇರ್ಪಡೆ. ಬಳಿಕ ಭಡ್ತಿ ಹೊಂದಿ ಉಪ್ಪಿನಂಗಡಿ ಪ್ರೌಢ ಶಾಲೆಗೆ ವರ್ಗಾವಣೆ ಹೊಂದಿರುತ್ತಾರೆ.

ಶಿಕ್ಷಕನಾಗಿರುವಾಗಲೇ ಬಿ.ಇಡಿ. ತರಬೇತಿ, ಕುವೆಂಪು ವಿ.ವಿ.ಯಿಂದ ಇಂಗ್ಲೀಷ್ ಮತ್ತು ಮೈಸೂರು ವಿ.ವಿ.ಯಿಂದ ರಾಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಎಂ.ಎ. ಪದವಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮದ್ರಾಸು ಇದರಿಂದ “ಹಿಂದಿ ಪ್ರವೀಣ” ಪದವಿ ಗಳಿಸಿದ್ದಾರೆ.
ಸಮೂಹ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ.) ಮತ್ತು ಶಾಲಾ ಸಂಕೀರ್ಣದ ಕಾರ್ಯಾದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ಇವರು ನೆಲ್ಯಾಡಿ ಗ್ರಾಮ ಪಂಚಾಯತ್‌ನಿಂದ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ರಾಷ್ಟ್ರೀಯ ಸೇವಾ ಯೋಜನೆ ಮತ್ತು ಜೆ.ಸಿ.ಐ.ನಲ್ಲಿ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿದೆ.

ನೆಲ್ಯಾಡಿ ಜೆ.ಸಿ.ಐ. ಕಾರ್ಯದರ್ಶಿ, ಅಧ್ಯಕ್ಷ, ವಲಯ ತರಬೇತುದಾರ, ಮಂಗಳೂರು ವಿ.ವಿ. ಸೆನೆಟ್‌ಗೆ ವಿದ್ಯಾರ್ಥಿ ಪ್ರತಿನಿಧಿ, ಬಲ್ಯದ ಶ್ರೀ ವಿನಾಯಕ ಯಕ್ಷಗಾನ ಸಂಘ ಮತ್ತು ಭಜನಾ ಮಂಡಳಿ ಸ್ಥಾಪಕ ಕಾರ್ಯದರ್ಶಿ, ನೆಲ್ಯಾಡಿ ಶ್ರೀ ಶಬರೀಶ ಯಕ್ಷಗಾನ ಸಂಘದ ಸ್ಥಾಪಕ ಅಧ್ಯಕ್ಷ, ಉಡುಪಿ ಯಕ್ಷಗಾನ ಕಲಾರಂಗದ ಅಜೀವ ಸದಸ್ಯರಾಗಿರುವ ಇವರು ಪ್ರಸ್ತುತ ಬೊಳುವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಕಾರ್ಯದರ್ಶಿಯಾಗಿದ್ದಾರೆ.

ಕಾರ್ಯಕ್ರಮ ನಿರೂಪಣೆ, ನಾಯಕತ್ವ ತರಬೇತಿ, ಧಾರ್ಮಿಕ ಉಪನ್ಯಾಸ, ಆಕಾಶವಾಣಿ ಚಿಂತನ-ತಾಳಮದ್ದಳೆಗಳಲ್ಲಿ ಭಾಗವಹಿಸುವುದು ಇವರ ಹವ್ಯಾಸ. ಪದವಿ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿರುವ ಪತ್ನಿ ಮೋತಿ ಬಾಯಿ, ಬಿ.ಎ.ಎಂ.ಎಸ್. ವೈದ್ಯಕೀಯ ಶಿಕ್ಷಣ ನಡೆಸುತ್ತಿರುವ ಮಗಳು ನೇಹಾ ಜಿ.ಎನ್. ಇವರೊಂದಿಗೆ ಪುತ್ತೂರಿನ ಕೃಷ್ಣನಗರದಲ್ಲಿ ವಾಸ್ತವ್ಯ ಹೊಂದಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.