HomePage_Banner
HomePage_Banner

ಜಿ.ಪಂ., ತಾ.ಪಂ. ಚುನಾವಣೆ ಹಿನ್ನೆಲೆ: ಮತದಾರರ ಪಟ್ಟಿ ಪ್ರಕಟ-ತಿದ್ದುಪಡಿಗೆ ಅವಕಾಶ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿ ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ ಪ್ರಕಟಗೊಳಿಸಿದೆ.

ಎಪ್ರಿಲ್‌10ಕ್ಕೆ ಅಂತಿಮಗೊಳಿಸಲಾಗಿರುವ ಮತದಾರರ ಪಟ್ಟಿಯನ್ನು ಇದೀಗ ಪುತ್ತೂರು ಮತ್ತು ಕಡಬ ತಾಲೂಕಿನ‌ ತಾಲೂಕು ಕಛೇರಿ, ಗ್ರಾಮ ಪಂಚಾಯತ್ ಕಛೇರಿ ಮತ್ತು ಗ್ರಾಮಕರಣಿಕರ ಕಛೇರಿಯಲ್ಲಿ ಮತದಾರರು ವೀಕ್ಷಿಸಬಹುದಾಗಿದೆ. ಹೆಸರು, ವಿಳಾಸ ತಿದ್ದುಪಡಿಗಳಿದ್ದಲ್ಲಿ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳ ಆಡಳಿತ ಅವಧಿ ಮುಕ್ತಾಯಗೊಂಡಿದ್ದು ಈಗಾಗಲೇ ಚುನಾವಣೆ ನಡೆಯಬೇಕಿತ್ತು. ಆದರೆ, ಕೊರೊನಾದ ಕಾರಣದಿಂದಾಗಿ ಚುನಾವಣೆ ಅನಿರ್ದಿಷ್ಟಾವಧಿ ಮುಂದೂಡಿಕೆಯಾಗಿದ್ದು ಜಿಲ್ಲಾ ಪಂಚಾಯತ್ ಮತ್ತು ತಾಲೂಕು‌ ಪಂಚಾಯತ್ ಗೆ ಆಡಳಿತಾಧಿಕಾರಿಯವರ ನೇಮಕವಾಗಿದೆ. ಡಿಸೆಂಬರ್ ತಿಂಗಳಿನಲ್ಲಿ ಜಿ.ಪಂ.‌, ತಾ.ಪಂ. ಚುನಾವಣೆ ನಡೆಯುವ ನಿರೀಕ್ಷೆ ಇದೆ. ಚುನಾವಣೆ ದಿನಾಂಕದವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶ ಇರಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.