HomePage_Banner
HomePage_Banner

ಇಂದಿರಾ ಕ್ಯಾಂಟೀನ್ ಊಟದ ಲೆಕ್ಕ ಇಶ್ಯು ಮಾಡಿದವರು ಅನ್ನ ಬೇಯಿಸುವವರ ಸಂಬಳ ಕೊಡಲಿ – ಬಿಜೆಪಿ ಸರಕಾರಕ್ಕೆ ಸವಾಲು ಹಾಕಿದ ಶಕುಂತಳಾ ಶೆಟ್ಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಂದಿರಾ ಕ್ಯಾಂಟೀನ್‌ನಲ್ಲಿ 8 ಊಟದ ಕುರಿತು ಬಹಳ ಇಶ್ಯು ಮಾಡಿದವರು ಅಲ್ಲಿನ ಅನ್ನ ಬೇಯಿಸುವವರಿಗೆ 4 ತಿಂಗಳಿನಿಂದ ಸಂಬಳ ಕೊಡಲಿಲ್ಲ ಎಂಬುದನ್ನು ಇಶ್ಯು ಯಾಕೆ ಮಾಡುತ್ತಿಲ್ಲ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಬಿಜೆಪಿ ಸರಕಾರಕ್ಕೆ ಸವಾಲು ಹಾಕಿದ್ದಾರೆ.

ಅವರು ಜೂ.29ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾ ಮಾಧ್ಯಮದ ವರದಿಗಾರರಿಗೆ ಆಹಾರದ ಕಿಟ್ ವಿತರಣೆ ಸಂದರ್ಭದಲ್ಲಿ ಮಾತನಾಡಿದರು. ಈ ಹಿಂದೆ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿದವರ ಲೆಕ್ಕಚಾರ ಕೇಳಿದ್ದಲ್ಲದೇ ಕೇವಲ 8 ಊಟಕ್ಕೆ ಸಂಬಂಧಿಸಿ ಕ್ಯಾಂಟೀನ್‌ನಲ್ಲಿ ಶಾಸಕರೇ ಮಾತನಾಡಿದರು. ಆದರೆ ಆ ಕ್ಯಾಂಟೀನ್‌ನಲ್ಲಿರುವ ಸಿಬ್ಬಂದಿಗಳಿಗೆ ಕಳೆದ 4 ತಿಂಗಳಿನಿಂದ ಸಂಬಳ ಸಿಗದೆ ಸಂಕಷ್ಟದಲ್ಲಿದ್ದಾರೆ. ಈ ಕುರಿತು ನನ್ನ ಗಮನಕ್ಕೆ ಬಂದ ತಕ್ಷಣ ನಾವು ಅಲ್ಲಿಗೆ ಸಿಬ್ಬಂದಿಗಳಿಗೆ ಆಹಾರದ ಕಿಟ್ ಕೊಟ್ಟು ಅವರ ನೋವಿಗೆ ಸ್ಪಂಧಿಸಿದ್ದೇವೆ. ಆದರೆ ಬಿಜೆಪಿ ಸರಕಾರ ಅವರ ನೋವಿಗೆ ಸ್ಪಂಧಿಸಿಲ್ಲ. ಇನ್ನಾದರೂ ಸರಕಾರ ತಕ್ಷಣ ಅವರಿಗೆ ಸಂಬಳ ಕೊಡಲಿ ಎಂದು ಆಗ್ರಹಿಸಿದ ಅವರು ಸುಳ್ಳು ಲೆಕ್ಕ ಕೊಟ್ಟು ಮೋಸ ಮಾಡುವುದನ್ನು ನಿಲ್ಲಿಸಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂಧಿಸಿ ಎಂದರು.

ಕೇರಳ, ತಮಿಳುನಾಡಿನ ಮಾದರಿಯಲ್ಲಿ ಪರಿಹಾರ ಒದಗಿಸಲಿ:
ಕೇರಳ ಮತ್ತು ತಮಿಳುನಾಡಿನಲ್ಲಿ ಸರಕಾರ ಮನೆ ಮನೆಗೆ ದಿನಸಿ ಸಾಮಾಗ್ರಿ ಕೊಡುವ ವ್ಯವಸ್ಥೆ ಮಾಡಿದೆ. ಕರ್ನಾಟದಲ್ಲೂ ಹಾಗೆ ಮಾಡಿದರೆ ಇವತ್ತು ಯಾರಿಗೂ ಆಹಾರದ ಕಿಟ್ ಕೊಡುವ ಅಗತ್ಯತೆ ಇರಲಿಲ್ಲ ಎಂದು ಶಕುಂತಳಾ ಶೆಟ್ಟಿ ಹೇಳಿದರು.

ಗುರುತಿಸುವ ಕೆಲಸ ಮಾಡಿದ್ದೇವೆ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಮಾತನಾಡಿ ಕೊರೋನಾ ಸಂದರ್ಭದಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ಪತ್ರಕರ್ತರನ್ನು ಗುರುತಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

ವಸ್ತು ನಿಷ್ಠ ಸುದ್ದಿ ಬಿತ್ತರಿಸುವಾಗ ಆರೋಗ್ಯ ಕಾಪಾಡಿ:
ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ.ರಾಜಾರಾಮ್ ಅವರು ಮಾತನಾಡಿ ಪರಸ್ಪರ ಸಂಕಷ್ಟದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಪತ್ರಕರ್ತರು ಫ್ರಂಟ್ ಲೈನ್ ವಾರಿಯರ್ಸ್. ಪರಸ್ಪರ ಸಮಾಜಮುಖಿ ವಸ್ತುನಿಷ್ಠ ಸುದ್ದಿ ಬಿತ್ತರಿಸುವ ವೇಳೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳಿದರು.

ಪತ್ರಿಕಾ ಮಾದ್ಯಮದವರ ನೋವಿಗೆ ಶಕುಂತಳಾ ಶೆಟ್ಟಿ ಸ್ಪಂಧಿಸಿದ್ದಾರೆ:
ಬ್ಲಾಕ್ ಕಾಂಗ್ರೆಸ್ ನಿಟಕಪೂರ್ವ ಅಧ್ಯಕ್ಷರಾದ ಜಿಲ್ಲಾ ವಕ್ತಾರ ಮಹಮ್ಮದ್ ಬಡಗನ್ನೂರು ಅವರು ಮಾತನಾಡಿ ಹಸಿವಿನ ವೇಧನೆ ತಾಯಿಗೆ ಮಾತ್ರ ಗೊತ್ತಾಗುತ್ತದೆ. ಆ ಕೆಲಸವನ್ನು ತಾಯಿ ಸ್ವರೂಪವಾಗಿ ಶಕುಂತಳಾ ಶೆಟ್ಟಿಯವರು ಮಾಡಿದ್ದಾರೆ. ಪೊಲೀಸರನ್ನು, ಆಸ್ಪತ್ರೆಯನ್ನು, ಆಶಾ, ಅಂಗನವಾಡಿ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಮಾಡಿದ್ದೇವೆ. ಇದೀಗ ಎಲ್ಲಾ ಸಂದರ್ಭದಲ್ಲೂ ಎಲ್ಲವನ್ನೂ ಎದುರಿಸಿ ವರದಿ ಮಾಡುವ ಪತ್ರಕರ್ತರನ್ನು ಗುರುತಿಸಿದ್ದೇವೆ. ಸಮಾಜದ ನೋವುಗಳನ್ನು ಬರೆಯುವ ನಿಮ್ಮ ನೋವಿಗೆ ಶಕುಂತಳಾ ಶೆಟ್ಟಿಯವರು ಸ್ಪಂಧಿಸಿದ್ದಾರೆ ಎಂದರು. ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ ಸೋಜ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಎಪಿಎಂಸಿ ನಿರ್ದೇಶಕ ಆಗಿರುವ ಅಬ್ದುಲ್ ಶಕೂರು ಹಾಜಿ, ಜಿಲ್ಲಾ ಕಾಂಗ್ರೆಸ್‌ನ ಯಾಕೂಬ್ ಹಾಜಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂತೋಷ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಸಾಮಾಜಿಕ ಜಾಲತಾಣದ ಪೂರ್ಣೇಶ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಗುರುತಿಸುವುದು ಮುಖ್ಯ
ಹೊಟ್ಟೆಗಿಲ್ಲ ಅಥವಾ ಬಡತನ ಎಂದು ಆಹಾರದ ಕಿಟ್ ನೀಡುವುದಲ್ಲ. ಆದರೆ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಪಕ್ಷದ ಕಡೆಯಿಂದ ಪ್ರಥಮವಾಗಿ ಆಂಬುಲೆನ್ಸ್ ನೀಡಿದಿದ್ದೇವೆ. ಅಕ್ಸಿಜನ್ ಕೊರತೆ ಆಗಬಾರದು ಎಂದು ಸಿಲಿಂಡರ್ ಕೊಡುವ ಕೆಲಸ ಮಾಡಿದ್ದೇವೆ. ಈ ಮಧ್ಯೆ ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರದ ಕಿಟ್ ವಿತರಣೆ ಮಾಡಿದ್ದೇವೆ. ಪೊಲೀಸ್, ಆಸ್ಪತ್ರೆಗೆಳಿಗೆ ಅಗತ್ಯ ಪರಿಕರಗಳನ್ನು ಒದಗಿಸಿದ್ದೇವೆ. ಇವೆಲ್ಲ ಕೊರೋನಾ ವಾರಿಯರ್ಸ್‌ಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಎಂದ ಅವರು ಕಳೆದ ವರ್ಷ ಹಲವು ಕಡೆ ಆಹಾರದ ಕಿಟ್ ವಿತರಣೆ ಮಾಡಿದ್ದೇವೆ. ಕಿಟ್ ಕೊಟ್ಟು ಸಣ್ಣದು ಮಾಡಬಾರದು. ಈ ನಿಟ್ಟಿನಲ್ಲಿ ಪತ್ರಕರ್ತರನ್ನು ಕೊರೋನಾ ಮಧ್ಯೆ ವಾರಿಯರ್ಸ್‌ಗಳಾಗಿ ಸೇವೆ ಮಾಡುವವರೆಂದು ಗುರುತಿಸುವ ಕೆಲಸ ಮಾಡುತ್ತಿದ್ದೇವೆ – ಶಕುಂತಳಾ ಶೆಟ್ಟಿ, ಮಾಜಿ ಶಾಸಕರು ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.