HomePage_Banner
HomePage_Banner

ಬಿಸಿಯೂಟ ನೌಕರರಿಗೆ ಕನಿಷ್ಟ ರೂ.15ಸಾವಿರ ವೇತನ ನೀಡಿ – ಬಿ.ಎಂ.ಭಟ್ ಆಗ್ರಹ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಿಸಿಯೂಟ ನೌಕರರಿಗೆ ಮಾಸಿಕ ರೂ. 15,000 ನೀಡಬೇಕು, ತಲಾ 10,000 ಕೊರೋನಾ ಪ್ಯಾಕೇಜು ನೀಡಬೇಕು, ಉಚಿತ ಕೊರೋನಾ ಚಿಕಿತ್ಸೆ, ಲಸಿಕೆ ಒದಗಿಸಬೇಕು, ಕೆಲಸದ ಭದ್ರತೆ, ಪಿಂಚಿಣಿ ಸೇವಾ ನಿಯಾಮಾವಳಿ ಜಾರಿಗೊಳಿಸಬೇಕು ಎಂದು ಕಾರ್ಮಿಕ ಮುಖಂಡ ನ್ಯಾಯವಾದಿ ಬಿ.ಎಂ.ಭಟ್ ಹೇಳಿದ್ದಾರೆ.

ಸರಕಾರ ಅಕ್ಷರದಾಸೋಹ ನೌಕರರನ್ನು ಜೀತದಾಳುಗಳಂತೆ ದುಡಿಸಿ ಅವರ ಬದುಕಿನ ಭದ್ರತೆ ಬಗ್ಗೆ ಗಮನ ನೀಡದೆ ಶೋಷಣೆ ಮಾಡಿ ಕಡೆಗಣಿಸುವುದು ಖಂಡನೀಯ ಎಂದು ತಾಲೂಕು ಅಕ್ಷರದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ತಾಲೂಕಿನ ಅಕ್ಷರ ದಾಸೋಹ ನೌಕರರು ಜೂ.೨೯ರಂದು ಪುತ್ತೂರು ಮಿನಿವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಿದರು. ಕೇವಲ ಮಾಸಿಕ ರೂ.೨,೫೦೦ಕ್ಕೆ ದುಡಿಯುವ ಇವರ ವೇತನವನ್ನು ಕಳೆದ ಎರಡು ತಿಂಗಳಿಂದ ಬಾಕಿ ಮಾಡಿದ ಸರಕಾರ ಕನಿಷ್ಟ ಕೊರೋನಾ ಪ್ಯಾಕೇಜು ಕೂಡಾ ನೀಡದಿರುವುದು ಖೇದಕರ. ಮಹಿಳಾಪರ ನಮ್ಮ ಸರಕಾರ, ಹಿಂದುಗಳ ಉದ್ದಾರಕರೆಂದು ಹೇಳುವ ಸರಕಾರಗಳಿಗೆ ಅಕ್ಷರದಾಸೋಹ ನೌಕರರು ಮಹಿಳೆಯರಾಗಿ ಕಾಣಲಿಲ್ಲವೇ? ಅವರಲ್ಲಿ ಹಿಂದುಗಳು ಯಾರು ಇಲ್ಲವೇ ?ಜರ್ಮನಿಯ ಗೋಬೆಲ್ಸ್ ನೀತಿಯಂತೆ ಸುಳ್ಳುಗಳನ್ನೇ ಹೇಳಿ ಆಡಳಿತ ನಡೆಸುವರಿಂದ ಇನ್ನೇನು ನಿರೀಕ್ಷಿಸಲು ಸಾದ್ಯ ಎಂದು ಅವರು ಟೀಕಿಸಿದರು. ಜನರ ನಂಬಿಕೆಯ ಮೇಲೆ ಆಟ ಆಡುವ ಬಿಜೆಪಿ ಸರಕಾರಕ್ಕೆ ಜನರ ಬದುಕಿನ ಕಾಳಜಿ ಇಲ್ಲದಾಗಿರುವುದಕ್ಕೆ ಅಕ್ಷರ ದಾಸೋಹ ನೌಕರರಿಗೆ ಕಳೆದ ೭ ವರ್ಷಗಳಿಂದ ಅಗತ್ಯ ವಸ್ತುಗಳ ಬೆಲೆ ಏರುತ್ತಿದ್ದರೂ ಸಂಬಳ ಏರಿಸದಿರುವುದೇ ಜೀವಂತ ಸಾಕ್ಷಿ ಎಂದರು. ಈ ಸಂದರ್ಭಕಾರ್ಮಿಕ ಮುಖಂಡರುಗಳಾದ ರಾಮಚಂದ್ರ, ಗಣೇಶ ಪ್ರಸಾದ್, ಕೇಶವ ಕುಮಾರ್ ಮೊದಲಾದವರಿದ್ದರು. ಸಂಘದ ಮುಖಂಡರಾದ ಜಯಂತಿ ಮುರ ಸ್ವಾಗತಿಸಿ, ಕೊನೆಗೆ ಕಾರ್ಯದರ್ಶಿ ಸವಿತಾ ಕುಂಜೂರು ಪಂಜ ವಂದಿಸಿದರು.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.