HomePage_Banner
HomePage_Banner

ಅಪಾಯದ ಸೂಚನೆ ನೀಡಿದೆ ಕ್ರೀಡಾಂಗಣದ ವೇದಿಕೆ – ಕಂಬ ತುಕ್ಕು ಹಿಡಿದು ಬೀಳಲು ಸಿದ್ಧವಾಗಿದೆ…!

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇದು ಕುಂಬ್ರ ಕೆಪಿಎಸ್ ಸ್ಕೂಲ್‌ನ ಆಟದ ಮೈದಾನದ ಬಳಿ ಇರುವ ಕ್ರೀಡಾಂಗಣ ಸ್ಟೇಜ್. ಈ ಸ್ಟೇಜಿಗೆ ಆರು ಕಬ್ಬಿಣದ ಕಂಬ ಹಾಕಿ ಸಿಮೆಂಟ್ ಶೀಟಿನ ಛಾವಣಿ ನಿರ್ಮಿಸಲಾಗಿದೆ. ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ವೇದಿಕೆಯ ಕಂಬ ತುಕ್ಕು ಹಿಡಿದಿದೆ. ಕಂಬ ಸಂಪೂರ್ಣ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಚಿಕ್ಕ ಗಾಳಿ ಬಂದರೂ ಈ ವೇದಿಕೆ ಕಂಬ ತುಂಡಾಗಿ ಕೆಳಗೆ ಬೀಳುವುದು ನಿಶ್ಚಿತ. ನಾಲಕೈದು ವರ್ಷಗಳಿಂದ ಕಂಬದ ದುಸ್ಥಿತಿಯ ಬಗ್ಗೆ ಶಿಕ್ಷಕರಿಗೆ ಗೊತ್ತಿಗೆದೆಯೋ ಎಂಬುದು ಜನರಿಗೆ ಗೊತ್ತಿಲ್ಲ. ಇಲ್ಲಿ ಆಟವಾಡಲು ಬರುತ್ತಿದ್ದ ಸಾರ್ವಜನಿಕರು ಶಾಲೆಯ ಶಿಕ್ಷಕರ ಗಮನಕ್ಕೆ ತಂದಿದ್ದರು. ಆದರೆ ಕಂಬವನ್ನು ದುರಸ್ಥಿ ಮಾಡುವ ಗೋಜಿಗೆ ಯಾರೂ ಮುಂದಾಗಿಲ್ಲ.

ಈ ಬಾರಿ ಇದೇ ಕ್ರೀಡಾಂಗಣದಲ್ಲಿ ಭತ್ತದ ಗದ್ದೆಯನ್ನು ಮಾಡಲಾಗಿದೆ. ಗದ್ದೆ ಮಾಡಿರುವ ಕಾರಣ ಆಟವಾಡಲು ಸಾರ್ವಜನಿಕರು ಕ್ರೀಡಾಂಗಣಕ್ಕೆ ಬರುತ್ತಿಲ್ಲ ಈ ಕಾರಣಕ್ಕೆ ಅಪಾಯದ ಭಯ ಸ್ವಲ್ಪಮಟ್ಟಿಗೆ ದೂರವಾಗಿದೆ. ಕೊರೊನಾ ಬಳಿಕ ಶಾಲೆ ಆರಂಭವಾಗಲಿದೆ. ಆ ವೇಳೆಗಾದರೂ ಇಲ್ಲಿನ ಅಪಾಯಕಾರಿ ಕಂಬವನ್ನು ತೆರವುಗೊಳಿಸಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕಂಬ ಅಪಾಯವಾಗಿರುವ ವಿಚಾರ ಗಮನಕ್ಕೆ ಬಂದಿದೆ. ಶಾಲಾ ಕ್ರೀಡಾಂಗಣದಲ್ಲಿ ಈಗ ಕ್ರೀಡಾ ಚಟುವಟಿಕೆ ಇಲ್ಲದ ಕಾರಣ ಸಾರ್ವಜನಿಕರು ಸೇರುತ್ತಿಲ್ಲ. ಶಾಲೆ ಆರಂಭವಾಗುವ ಮೊದಲೇ ಅಲ್ಲಿರುವ ವೇದಿಕೆಯನ್ನು ತೆರವು ಮಾಡಿ ಹೊಸ ವೇದಿಕೆಯನ್ನು ನಿರ್ಮಾಣ ಮಾಡಲಾಗುತ್ತದೆ. ಅಪಾಯ ಸಂಭವಿಸದಂತೆ ಕ್ರಮಕೈಗೊಳ್ಳಲಾಗುವುದು ನಿತೀಶ್‌ಕುಮಾರ್ ಶಾಂತಿವನ, ಕಾರ್ಯಾಧ್ಯಕ್ಷರು ಕೆಪಿಎಸ್ ಸ್ಕೂಲ್, ಕುಂಬ್ರ

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.