HomePage_Banner
HomePage_Banner

ಚಿಕ್ಕಮುಡ್ನೂರು: ಮನೆ ಕುಸಿದು ಬಿದ್ದ ವಿದ್ಯಾರ್ಥಿನಿಯ ಮನೆಗೆ ಬಿಇಒ ಭೇಟಿ – ಮಂಗಳೂರು ದಕ್ಷಿಣ ವಲಯದ ಬಿಬಿಒ ಜೊತೆ ಸಂಪರ್ಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮನೆ ಕುಸಿದು ಬಿದ್ದು ಗ್ರಾ.ಪಂ ಕಟ್ಟಡದಲ್ಲಿ ತಾತ್ಕಾಲಿಕ ನೆಲೆಯಲ್ಲಿ ಆಶ್ರಯ ಪಡೆದಿರುವ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಮನೆ ಮಂದಿಯನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರು ಸಂಪರ್ಕಿಸಿ ಸಮಸ್ಯೆಯನ್ನು ಆಲಿಸಿ, ವಿದ್ಯಾರ್ಥಿನಿಗೆ ಧೈರ್ಯ ತುಂಬಿದಲ್ಲದೆ ಆಕೆ ಓದುತ್ತಿರುವ ಮಂಗಳೂರು ದಕ್ಷಿಣ ವಲಯದ ಬಿಇಒಗೆ ಮಾಹಿತಿ ನೀಡಿದ್ದಾರೆ.

ಮಂಗಳೂರು ದಕ್ಷಿಣದ ಕುಪ್ಪೆಪದವಿನಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿರುವ ವಿದ್ಯಾರ್ಥಿನಿ ದೀಕ್ಷಾ ರೈ ಅವರ ಚಿಕ್ಕಮುಡ್ನೂರು ಗ್ರಾಮದ ಕುಂಬುರ್ಗದಲ್ಲಿರುವ ಮನೆ ಕುಸಿದ ಪರಿಣಾಮ ಜೂ. 28ರಂದು ಸಂಜೆ ವೇಳೆ ತಾತ್ಕಾಲಿಕವಾಗಿ ಅವರನ್ನು ಬನ್ನೂರು ಗ್ರಾ.ಪಂ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾ.ಪಂ ಕಟ್ಟಡಕ್ಕೆ ಸ್ಥಳಾಂತರಿಸಿ ರಕ್ಷಣೆ ಮಾಡಲಾಗಿತ್ತು.

ಈ ವಿಷಯ ಅರಿತ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ವಿದ್ಯಾರ್ಥಿನಿ ಮಂಗಳೂರಿನಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದರೂ ಆಕೆಯ ಮನೆಯ ಪರಿಸ್ಥಿತಿಯನ್ನು ನೋಡಿ ಗ್ರಾ.ಪಂ ಕಟ್ಟಡದಲ್ಲಿ ಆಶ್ರಯ ಪಡೆದಿರುವ ಆಕೆಯ ಮನೆ ಮಂದಿಯನ್ನು ಸಂಪರ್ಕಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ. ಈ ನಡುವೆ ಆಕೆ ಓದುತ್ತಿರುವ ಮಂಗಳೂರಿನ ದಕ್ಷಿಣ ವಲಯದ ಬಿಇಒ ರಾಜಲಕ್ಷ್ಮೀ ಅವರನ್ನು ಸಂಪರ್ಕಿಸಿದ್ಧಾರೆ. ಇದರ ಜೊತೆಗೆ ಆಕೆಯ ಸಹೋದರ ವಿಕಾಸ್ ಅವರನ್ನು ಪುತ್ತೂರು ಕೊಂಬೆಟ್ಟು ಸರಕಾರಿ ಪ್ರೌಢಶಾಲೆಗೆ ದಾಖಲಿಸುವಂತೆ ಸಿಆರ್‌ಪಿಗೆ ತಿಳಿಸಿದಲ್ಲದೆ, ನಾಳೆಯೇ ದಾಖಲಾತಿ ಆಗಲಿದೆ.

Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.