HomePage_Banner
HomePage_Banner

ಸವಣೂರು: ಕೊರೋನಾ ವಾರಿಯರ್ಸ್ ಕರ್ತವ್ಯಕ್ಕೆ ಅಡ್ಡಿ | ಯುವಕನ ವಿರುದ್ಧ ಪ್ರಕರಣ ,ಯುವಕನನ್ನು ಬಂಧಿಸಿದ ಪೊಲೀಸರು

Puttur_Advt_NewsUnder_1
Puttur_Advt_NewsUnder_1

ಸವಣೂರು :ಸವಣೂರಿನಲ್ಲಿ ಕೊರೊನಾ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಯುವಕನೋರ್ವನ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾದ ಘಟನೆ ಜೂ.29 ರಂದು ನಡೆದಿದೆ.

ಕಡಬ ತಾಲೂಕಿನ ಸವಣೂರು ಗ್ರಾಮದ ಪಣೆಮಜಲು ಎಂಬಲ್ಲಿ ಕೋವಿಡ್ –19 ಕರ್ತವ್ಯದಲ್ಲಿದ್ದ ಆರೋಗ್ಯ ಇಲಾಖೆಯವರು ,ಪಂಚಾಯತ್ ಪಿಡಿಒ,ಆಶಾಕಾರ್ಯಕರ್ತೆರು,ಗ್ರಾಮ ಪಂಚಾಯತ್ ಸದಸ್ಯರಿಗೆ ಮೇಘರಾಜ ಎಂಬ ಯುವಕ ಬೈದು ,ಇಲ್ಲಿಯ ಜನರನ್ನು ಯಾಕೆ ಕ್ವಾರಂಟೈನ್ ಮಾಡುತ್ತೀರಿ. ನೀವು ಇಲ್ಲಿ ಬಂದು ರೋಗ ತಡೆಗಟ್ಟುವ ಅಗತ್ಯವಿಲ್ಲ ಎಂದು ಹೇಳಿರುವುದಾಗಿ ಆರೋಪಿಸಲಾಗಿದೆ.

ಈ ವಿಚಾರವಾಗಿ ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸವಣೂರು ಉಪಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ವಾಗೇಶ್ವರಿ ಅವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.