HomePage_Banner
HomePage_Banner

ಆತೂರು: ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ರಕ್ತದಾನ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ರಾಮಕುಂಜ: ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ 95ನೇ ವರ್ಷಾಚಣೆಯ ಪ್ರಯುಕ್ತ ಎಸ್‌ಕೆಎಸ್‌ಎಸ್‌ಎಫ್ ಆತೂರು ಕ್ಲಸ್ಟರ್ ಸಮಿತಿ ವತಿಯಿಂದ ಆತೂರು ಬದ್ರಿಯಾ ಜುಮಾ ಮಸೀದಿ ಸಹಕಾರದೊಂದಿಗೆ ಎಸ್‌ಕೆಎಸ್‌ಎಸ್‌ಎಫ್ ವಿಖಾಯ ರಕ್ತದಾನಿ ಬಳಗ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಆತೂರು ಬದ್ರಿಯಾ ಹಾಲ್‌ನಲ್ಲಿ ಜೂ.೨೭ರಂದು ನಡೆಯಿತು.

ಎಸ್‌ಕೆಎಸ್‌ಎಸ್‌ಎಫ್ ಆತೂರು ರೇಂಜ್ ಕಾರ್ಯದರ್ಶಿ ಕೆ.ಎಂ.ಸಿದ್ದಿಕ್ ಫೈಝಿ ಕರಾಯ ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಮಕುಂಜ ಗ್ರಾ.ಪಂ.ಪಿಡಿಒ ಜೆರಾಲ್ಡ್ ಮಸ್ಕರೇನಸ್‌ರವರು ಶಿಬಿರ ಉದ್ಘಾಟಿಸಿ ಶುಭಹಾರೈಸಿದರು. ಎಸ್‌ಕೆಎಸ್‌ಎಸ್‌ಎಫ್ ಆತೂರು ಕ್ಲಸ್ಟರ್ ಅಧ್ಯಕ್ಷ ಸಿದ್ದಿಕ್ ಎಸ್.ಕೆ. ಅಧ್ಯಕ್ಷತೆ ವಹಿಸಿದರು. ಕೆಪಿಸಿಸಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಕೃಷ್ಣಪ್ಪ, ಕೆಪಿಸಿಸಿ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ, ರಾಮಕುಂಜ ಗ್ರಾ.ಪಂ.ಸದಸ್ಯ ಯತೀಶ್ ಕುಮಾರ್ ಬಾಣಡ್ಕ, ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಆತೂರು ಬದ್ರಿಯಾ ಜುಮಾ ಮಸೀದಿ ಮಾಜಿ ಅಧ್ಯಕ್ಷ ಆದಂ, ಇಂಡಿಯನ್ ರೆಡ್‌ಕ್ರಾಸ್‌ನ ಡಾ.ಜೆ.ಎನ್ ಭಟ್, ಪ್ರವೀಣ್ ಕುಮಾರ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು.

ಬದ್ರಿಯಾ ಜುಮಾ ಮಸೀದಿ ಆತೂರು ಇದರ ಅಧ್ಯಕ್ಷ ಬಿ.ಕೆ ಅಬ್ದುಲ್ ರಝಾಕ್, ಕೊಯಿಲ ಗ್ರಾ.ಪಂ.ಅಧ್ಯಕ್ಷ ಹರ್ಷಿತ್ ಕುಮಾರ್, ಸದಸ್ಯ ನಜೀರ್ ಕೊಯಿಲ, ಮಾಜಿ ಸದಸ್ಯ ಕೆ.ಎ.ಸುಲೈಮಾನ್, ರಾಮಕುಂಜ ಗ್ರಾ.ಪಂ.ಸದಸ್ಯ ಎಚ್. ಅಬ್ದುಲ್ ರಹಿಮಾನ್, ಗ್ರಾಮಕರಣಿಕ ಎನ್.ಶೇಷಾದ್ರಿ, ಎಸ್‌ಕೆಎಸ್‌ಎಸ್‌ಎಫ್ ವಿಖಾಯ ದಕ್ಷಿಣ ಕನ್ನಡ ಜಿಲ್ಲಾ ಚೆಯರ್‌ಮ್ಯಾನ್ ಇಸ್ಮಾಯಿಲ್ ತಂಙಳ್, ಪತ್ರಕರ್ತ ನಝೀರ್ ಕೊಯಿಲ, ಕುಂಡಾಜೆ ಜುಮಾ ಮಸೀದಿಯ ಖತೀಬ್ ಮುನೀರ್ ಅನ್ವರಿ, ಆತೂರು ರೇಂಜ್‌ನ ಕೋಶಾಧಿಕಾರಿ ಬಿ.ಕೆ.ಅಬ್ದುಲ್ ಅಝೀಜ್, ಕುದ್ಲೂರು ಜುಮಾ ಮಸೀದಿ ಅಧ್ಯಕ್ಷ ಕೆ.ವೈ.ಇಸ್ಮಾಯಿಲ್, ಆತೂರು ಮದರಸ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಕಾರ್ಯದರ್ಶಿ ರಫೀಕ್ ಗಂಡಿಬಾಗಿಲು, ಉದ್ಯಮಿ ರಝಾಕ್ ಮುಬಾರಕ್, ಎಸ್‌ಕೆಎಸ್‌ಎಸ್‌ಎಫ್ ಶಾಖೆ ಅಧ್ಯಕ್ಷ ಬಿ.ಆರ್.ಅಬ್ದುಲ್ ಖಾದರ್, ಬಶೀರ್ ಮುಸ್ಲಿಯಾರ್, ಪೊಡಿಕುಂಞಿ ನೀರಾಜೆ, ಹಮೀದ್ ಕುಂಡಾಜೆ, ಅಶ್ರಫ್ ಕೊರೆಪದವು, ಇಸ್ಮಾಯಿಲ್ ಆತೂರುಬೈಲ್, ಇಸ್ಮಾಯಿಲ್ ಪಾಲ್ತಾಡಿ, ಆಸೀಫ್ ಗಂಡಿಬಾಗಿಲು ಉಪಸ್ಥಿತರಿದ್ದರು.

ಅಝೀಜ್ ಪಲ್ತಾಡಿ, ಜೈನುದ್ದೀನ್ ಆತೂರು, ಉಮರುಲ್ ಫಾರೂಕ್ ಬಿ, ಅನ್ಸರ್ ನೀರಾಜೆ, ಮುನೀರ್ ಆತೂರು ಹಾಗೂ ಎಸ್‌ಕೆಎಸ್‌ಎಸ್‌ಎಫ್ ನ ಕಾರ್ಯಕರ್ತರು ಸಹಕರಿಸಿದರು.

ರಾಝಿಕ್ ಆತೂರು ಸ್ವಾಗತಿಸಿ, ಝಕರಿಯಾ ಮುಸ್ಲಿಯಾರ್ ವಂದಿಸಿದರು. ರಫೀಕ್ ಜಿ ನಿರೂಪಿಸಿದರು.

109 ಮಂದಿಯಿಂದ ರಕ್ತದಾನ:
ರಾಮಕುಂಜ ಗ್ರಾಮಕರಣಿಕ ಎನ್.ಶೇಷಾದ್ರಿ, ಪಿಡಿಒ ಜೆರಾಲ್ಡ್ ಮಸ್ಕರೇನಸ್, ಕೆಪಿಸಿಸಿ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್ ಬಾಣಡ್ಕ ಸಹಿತ ಶಿಬಿರದಲ್ಲಿ ೧೦೯ ಮಂದಿ ರಕ್ತದಾನ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.