HomePage_Banner
HomePage_Banner

ಕುರಿಯ:ಉಳ್ಳಾಲ ಮಹಾವಿಷ್ಣುಮೂರ್ತಿ ದೇವಸ್ಥಾನದಿಂದ `ಭತ್ತ ಬೆಳೆಸಿ – ನಾಡು ಕಟ್ಟೋಣ’ ಗದ್ದೆ ಬೇಸಾಯಕ್ಕೆ ಭೂಮಿಪೂಜೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವತಿಯಿಂದ ಭತ್ತ ಬೆಳೆಸಿ ನಾಡು ಕಟ್ಟೋಣ ಕಾರ್ಯಕ್ರಮದ ಅಂಗವಾಗಿ ಗದ್ದೆ ಬೇಸಾಯದ ಭೂಮಿ ಪೂಜೆಯು ಜೂ.29ರಂದು ಕುರಿಯ ಗ್ರಾಮದ ಕೊಡ್ಲಾರು ಪೆರ್ಗಡೆಮಾರು ಎಂಬಲ್ಲಿರುವ ಸುಮಾರು ಎರಡು ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಹಡೀಲು ಗದ್ದೆಯಲ್ಲಿ ಬೇಸಾಯದ ಮೂಲಕ ಜಿಲ್ಲೆಯ ಯುವ ಜನತೆ ಮತ್ತೆ ಬೇಸಾಯದ ಕೆಲಸಕ್ಕೆ ಇಳಿದಿದ್ದಾರೆ. ಯುವ ಜನತೆ ಅನ್ನದಾತನನ್ನು ಮತ್ತೆ ನೆನಪಿಸುವ ಕಾರ್ಯ ಮಾಡುತ್ತಿದ್ದಾರೆ. ಆ ಮೂಲಕ ಯುವ ಜನತೆ ಗದ್ದೆ ಬೇಸಾಯ ಪರಂಪರೆಯನ್ನು ನೆನಪಿಸಿಕೊಳ್ಳುವ ಕಾರ್ಯ ಮಾಡುತ್ತಿದ್ದಾರೆ. ಉಳ್ಳಾಲ ಮಹಾವಿಷ್ಣು ಮೂರ್ತಿ ದೇವಸ್ಥಾನ ಮೂಲಕ ನಡೆಯುವ ಗದ್ದೆ ಬೇಸಾಯದ ಇಳುವರಿಯು ಜನರ ಹಸಿವು ನೀಗುವುದುರ ಜೊತೆಗೆ ದೇವರಿಗೆ ನೈವೇದ್ಯಕ್ಕೆ ಅಗತ್ಯವಾದ ಅಕ್ಕಿಯನ್ನು ಬಳಸಿಕೊಳ್ಳಬಹುದಾಗಿದೆ ಎಂದರು.

ಗೌರವ ಉಪಸ್ಥಿತಿಯಿದ್ದ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಹಡೀಲು ಗದ್ದೆಯಲ್ಲಿ ಬೇಸಾಯ ಪ್ರಾರಂಭಿಸುವ ಮೂಲಕ ಅಳಿವಿನಂಚಿನಲ್ಲಿದ್ದ ಗದ್ದೆ ಬೇಸಾಯವನ್ನು ಉಳಿಸಲು ಜಿಲ್ಲಾ ಉಸ್ತಿವಾರಿ ಸಚಿವರು ಹಾಗೂ ಶಾಸಕರು ಪ್ರೇರಣೆ ನೀಡುತ್ತಿದ್ದಾರೆ. ಶ್ರೀಕೃಷ್ಣ ಅಕ್ಕಿಯಿಂದ ಅಕ್ಷಯ ಪಾತ್ರೆ ಮಾಡಿದಂತೆ ಈ ಯೋಜನೆಯ ಮೂಲಕ ತಾಲೂಕಿನೆಲ್ಲೆಡೆ ಗದ್ದೆ ಬೇಸಾಯ ಮಾಡಲಾಗುತ್ತಿದೆ. ತಾಲೂಕಿನಲ್ಲಿ ಸುಮಾರು ೫೦ಎಕರೆಗೂ ಅಧಿಕ ಗದ್ದೆಯಲ್ಲಿ ಬೇಸಾಯ ನಡೆಯಲಿದೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ, ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲುಗುತ್ತು, ಧನರಾಜ್ ಅಲೇಕಿ, ಜೈರಾಜ್ ಭಂಡಾರಿ ನೊಣಾಲು ಡಿಂಬ್ರಿ, ಗುಣಶೀಲ ರೈ ಕುರಿಯ ಏಳ್ನಾಡುಗುತ್ತು, ಮಾಜಿ ಸದಸ್ಯ ಸನತ್ ಕುಮಾರ್ ರೈ ಕುರಿಯ ಏಳ್ನಾಡುಗುತ್ತು, ದೇವಾಲಯದ ಪವಿತ್ರಪಾಣಿ ವೆಂಕಟ್ರಮಣ ನಕ್ಷತ್ರಿತ್ತಾಯ, ಅರ್ಚಕ ಗುರುರಾಜ ಮಡಕುಳ್ಳಾಯ, ಊರವರಾದ ಪುರಂದರ ಪೂಜಾರಿ ಶಿಬರಾಡಿ, ಸುಬ್ರಾಯ ಮಡಕ್ಕುಳ್ಳಾಯ, ಜಾಗದ ಮಾಲಕ ಮೋಹನ್ ರಾವ್ ಕೊಡ್ಲಾರು, ವಸಂತ ಗೌಡ ಕೊಡ್ಲಾರು, ಶ್ರೀಕೃಷ್ಣ ಬೊಳಂತಿಮಾರು, ಉಮೇಶ್ ಕರ್ಕೇರಾ ಕೈಪಂಗಳ, ಚಂದ್ರಹಾಸ ರೈ ಡಿಂಬ್ರಿ, ಗಣೇಶ್ ರೈ ಬೂಡಿಯಾರ್, ಸೀತಾರಾಮ ಶೆಟ್ಟಿ ಬಳ್ಳಮಜಲು, ಸುಂದರ ಪೂಜಾರಿ ಬೊಳಂತಿಮಾರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಕುರಿಯ ಉಳ್ಳಾಲ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಧು ನರಿಯೂರು ಸ್ವಾಗತಿಸಿ, ಸದಸ್ಯ ಶಶಿಧರ್ ಕಿನ್ನಿಮಜಲು, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.