HomePage_Banner
HomePage_Banner

ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ಆರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

-ಸಂತೋಷ್ ಮೊಟ್ಟೆತ್ತಡ್ಕ

  • ಮಾಯಿದೆ ದೇವುಸ್ ಚರ್ಚ್ ಕ್ಯಾಂಪಸ್ | ಫಿಲೋಮಿನಾ ಕ್ಯಾಂಪಸ್

ಪುತ್ತೂರು: ಕುಗ್ರಾಮವಾಗಿದ್ದ ಪುತ್ತೂರಿನಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಉದಯಿಸಲು ಕಾರಣವಾಗಿದ್ದು ಶಿಕ್ಷಣ ಶಿಲ್ಪಿ ಮೊ|ಆಂಟನಿ ಪತ್ರಾವೋರವರು ಎಂಬುದು ಅಕ್ಷರಶಃ ಸತ್ಯ. ಅಂದಿನಿಂದ ಇಂದಿನವರೆಗೆ ಮೊ|ಪತ್ರಾವೋರವರಿಂದ ಸ್ಥಾಪಿತವಾದ ಪುತ್ತೂರಿನ ಹೃದಯಭಾಗದಲ್ಲಿರುವ ಮಾಯಿದೆ ದೇವುಸ್ ಚರ್ಚ್ ಕ್ಯಾಂಪಸ್ ಹಾಗೂ ದರ್ಬೆ ಫಿಲೋಮಿನಾ ಕ್ಯಾಂಪಸ್‌ನಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳು ಮೌಲ್ಯಯುತ ಗುಣಮಟ್ಟದ ಶಿಕ್ಷಣಕ್ಕೆ ಬಹಳ ಹೆಸರನ್ನು ಪಡೆದಿದೆ. ಇದೀಗ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ೨೦೨೧-೨೨ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಕ್ರಿಯೆಗಳು ಆರಂಭಗೊಂಡಿವೆ.

ಮಾಯಿದೆ ದೇವುಸ್ ಹಿ.ಪ್ರಾ ಶಾಲೆ:
ಮಾಯಿದೆ ದೇವುಸ್ ಹಿರಿಯ ಪ್ರಾಥಮಿಕ ಶಾಲೆಯು ೧೯೩೭ರಲ್ಲಿ ಪ್ರಥಮವಾಗಿ ಸ್ಥಾಪಿತಗೊಂಡಿದ್ದು, ಇಲ್ಲಿ ಒಂದರಿಂದ ಏಳರ ತರಗತಿವರೆಗೆ ವಿದ್ಯಾರ್ಥಿಗಳನ್ನು ದಾಖಲು ಮಾಡುವ ಅವಕಾಶ ಹೊಂದಿದೆ. ಮಾತ್ರವಲ್ಲದೆ ೬ ಮತ್ತು ೭ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮದ ತರಗತಿಯೂ ಲಭ್ಯವಿದೆ. ಪ್ರಸಕ್ತ ಶ್ರೀಮತಿ ಜಾನೆಟ್ ಡಿ’ಸೋಜರವರು ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ೦೨೫೧-೨೩೬೯೮೮ ನಂಬರಿಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಸಂತ ವಿಕ್ಟರ್ ಆ.ಮಾ ಶಾಲೆ:
ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯು ೧೯೭೦ರಲ್ಲಿ ಸ್ಥಾಪನೆಗೊಂಡಿದ್ದು, ಇಲ್ಲಿ ಕೂಡ ಒಂದರಿಂದ ಏಳರ ತರಗತಿವರೆಗೆ ವಿದ್ಯಾರ್ಥಿಗಳನ್ನು ದಾಖಲು ಮಾಡುವ ಅವಕಾಶವನ್ನು ಹೊಂದಿದೆ. ಪ್ರಸಕ್ತ ಹೆರಿ ಡಿ’ಸೋಜರವರು ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ೦೨೫೧-೨೩೧೨೭೦ನಂಬರಿಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

ವಿಕ್ಟರ್ ಬಾಲಿಕಾ ಪ್ರೌಢಶಾಲೆ:
ಪುತ್ತೂರಿನಲ್ಲಿನ ಮೊದಲ ಹೆಣ್ಮಕ್ಕಳ ಶಾಲೆ ಎಂದು ಪ್ರಸಿದ್ಧಿಯನ್ನು ಪಡೆದಿರುವ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ೮ ರಿಂದ ೧೦ರ ವರೆಗೆ ವಿದ್ಯಾರ್ಥಿನಿಯರನ್ನು ದಾಖಲು ಮಾಡುವ ಅವಕಾಶ ಹೊಂದಿದೆ. ೧೯೪೨ರಲ್ಲಿ ಸ್ಥಾಪಿತವಾದ ಈ ಪ್ರೌಢಶಾಲೆಯು ತಾಲೂಕಿನಲ್ಲಿ ಎಸೆಸ್ಸೆಲ್ಸಿ ಪರೀಕ್ಷೆಗೆ ಅತೀ ಹೆಚ್ಚು ವಿದ್ಯಾರ್ಥಿನಿಯರನ್ನು ಹೊಂದಿದ ಹೆಗ್ಗಳಿಕೆ ಈ ಪ್ರೌಢಶಾಲೆಗಿದೆ. ಅಲ್ಲದೆ ವಿದ್ಯಾರ್ಥಿನಿಯರ ಸಂಶೋಧನಾ ಜ್ಞಾನ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಅಟಲ್ ಟಿಂಕರಿಂಗ್ ಲ್ಯಾಬ್‌ನ್ನು ಇತ್ತೀಚೆಗೆ ಉದ್ಘಾಟನೆಗೊಂಡಿತ್ತು. ಪ್ರಸಕ್ತ ಶ್ರೀಮತಿ ರೋಸ್ಲಿನ್ ಲೋಬೋರವರು ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ ೦೮೨೫೧-೨೩೧೯೭೦ ನಂಬರಿಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು.

ಫಿಲೋಮಿನಾ ಕೆ.ಜಿ/ಆ.ಮಾ ಶಾಲೆ:
ದೂರದಿಂದ ಪುತ್ತೂರು ಪೇಟೆಗೆ ಸಣ್ಣ ಪ್ರಾಯದ ಪುಟಾಣಿಗಳನ್ನು ದಾಖಲು ಮಾಡಿಸಿಕೊಳ್ಳಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ದೂರದ ಊರುಗಳಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ದರ್ಬೆ ಫಿಲೋಮಿನಾ ಕ್ಯಾಂಪಸ್ಸಿನಲ್ಲಿ ೨೦೧೫ರಲ್ಲಿ ಸಂತ ಫಿಲೋಮಿನಾ ಕೆ.ಜಿ ಶಾಲೆಯನ್ನು ಆರಂಭಿಸಲಾಗಿದೆ. ೨೦೧೬ರಲ್ಲಿ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಶಾಲೆಯು ಆರಂಭಿಸಲಾಗಿದ್ದು, ಇಲ್ಲಿ ೧ ರಿಂದ ೭ರ ವರೆಗೆ ಕಲಿಯುವ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರಸಕ್ತ ಸಿಸ್ಟರ್ ಲೋರಾ ಪಾಸ್‌ರವರು ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ೦೮೨೫೧-೨೩೭೪೭೦ ನಂಬರಿಗೆ ಕರೆ ಮಾಡಬಹುದು.

ಫಿಲೋಮಿನಾ ಪ್ರೌಢಶಾಲೆ:
ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯು ೧೯೪೯ರಲ್ಲಿ ಸ್ಥಾಪನೆಗೊಂಡಿದ್ದು, ಇಲ್ಲಿ ೮ ರಿಂದ ೧೦ರ ವರೆಗೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ದಾಖಲು ಮಾಡಿಕೊಳ್ಳಬಹುದು. ಈ ಪ್ರೌಢಶಾಲೆ ಕೂಡ ಎಸೆಸ್ಸೆಲ್ಸಿ ಪರೀಕ್ಷೆಗೆ ತಾಲೂಕಿನಲ್ಲಿ ಅತೀ ಹೆಚ್ಚು ವಿದ್ಯಾರ್ಥಿನಿಯರನ್ನು ಹೊಂದಿದ ಹೆಗ್ಗಳಿಕೆಯನ್ನು ಪಡೆದಿದೆ. ಅಲ್ಲದೆ ವಿದ್ಯಾರ್ಥಿಗಳ ಸಂಶೋಧನಾ ಜ್ಞಾನ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಅಟಲ್ ಟಿಂಕರಿಂಗ್ ಲ್ಯಾಬ್ ಕೂಡ ಹೊಂದಿದೆ. ಪ್ರಸಕ್ತ ಶ್ರೀಮತಿ ಲಿಯೋನಿಲ್ಲಾ ವೇಗಸ್‌ರವರು ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ ೦೮೨೫೧-೨೩೦೪೭೦ ನಂಬರಿಗೆ ಕರೆ ಮಾಡಬಹುದು.

ಫಿಲೋಮಿನಾ ಪಿಯು ಕಾಲೇಜು:
ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಹಲವಾರು ರ್‍ಯಾಂಕ್‌ಗಳನ್ನು ಗಳಿಸಿರುವ ಹೆಗ್ಗಳಿಕೆ ಪಡೆದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ೧೯೫೮ರಲ್ಲಿ ಸ್ಥಾಪನೆಗೊಂಡಿತ್ತು. ಜೊತೆಗೆ ಕ್ರೀಡಾ ಕ್ಷೇತ್ರದಲ್ಲೂ ಅನೇಕ ವಿದ್ಯಾರ್ಥಿಗಳು ಪ್ರಜ್ವಲಿಸುವಂತೆ ಮಾಡಿತ್ತು. ವೃತ್ತಿಪರ ಕೋರ್ಸ್‌ಗಳಿಗೆ ಅನುಗುಣವಾಗಿ ಸಿಇಟಿ, ನೀಟ್ ಪರೀಕ್ಷಾ ತರಬೇತಿಗಳನ್ನು ಕೂಡ ಸಂಸ್ಥೆಯು ನೀಡುತ್ತಾ ಬಂದಿದೆ. ಈ ಸಂಸ್ಥೆಯು ಕಲಾ ವಿಭಾಗ, ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗಗಳನ್ನು ಹೊಂದಿದ್ದು, ಕಲಾ ವಿಭಾಗದಲ್ಲಿ ಎಚ್‌ಇಎಸ್‌ಪಿ, ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿ, ಪಿಸಿಎಂಎಸ್, ಪಿಸಿಎಂಇ, ವಾಣಿಜ್ಯ ವಿಭಾಗದಲ್ಲಿ ಇಬಿಎಎಸ್, ಇಎಎಸ್‌ಸಿ, ಇಸಿಬಿಎ ಕಾಂಬಿನೇಷನ್‌ನಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ಮುಖೇನ ದಾಖಲಾತಿ ಮಾಡಿಕೊಳ್ಳಬಹುದು. ವಂ|ವಿಜಯ್ ಲೋಬೋರವರು ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ ೦೮೨೫೧-೨೩೬೩೪೦ ನಂಬರಿಗೆ ಕರೆ ಮಾಡಬಹುದು.

ಮಾಯಿದೆ ದೇವುಸ್ ಕ್ಯಾಂಪಸ್:
-ಮಾಯಿದೆ ದೇವುಸ್ ಹಿ.ಪ್ರಾ ಶಾಲೆ
-ಸಂತ ವಿಕ್ಟರ್ ಆ.ಮಾ ಶಾಲೆ
-ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ

ಫಿಲೋಮಿನಾ ಕ್ಯಾಂಪಸ್:
-ಫಿಲೋಮಿನಾ ಕೆ.ಜಿ/ಆ.ಮಾ ಶಾಲೆ
-ಫಿಲೋಮಿನಾ ಪ್ರೌಢಶಾಲೆ
-ಫಿಲೋಮಿನಾ ಪಿಯು ಕಾಲೇಜು
-ಫಿಲೋಮಿನಾ ಕಾಲೇಜು/ಸ್ನಾತಕೋತ್ತರ ಕೇಂದ್ರ

-ಫಿಲೋಮಿನಾ ಕ್ಯಾಂಪಸ್ಸಿನಲ್ಲಿ ಸುಸಜ್ಜಿತ
೪೦೦ಮೀ. ಟ್ರ್ಯಾಕ್ ಹಾಗೂ ಹಾಕಿ ಮೈದಾನ
-ಪುರುಷರ ಹಾಗೂ ಮಹಿಳೆಯರ ವಸತಿನಿಲಯ
-ಎನ್‌ಸಿಸಿ/ಎನ್‌ಎಸ್‌ಎಸ್ ತರಬೇತಿ
-ಸಿಇಟಿ/ನೀಟ್ ತರಬೇತಿ
-ನುರಿತ ಅಧ್ಯಾಪಕ ವೃಂದ
-ಕಲಿಕೆಗೆ ಯೋಗ್ಯವಾದ ಕ್ಯಾಂಪಸ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.