HomePage_Banner
HomePage_Banner

ಪ್ರೌಢಶಾಲಾ ಸಹಶಿಕ್ಷಕರ ಗ್ರೇಡ್-2 ವೃಂದಕ್ಕೆ ಮುಂಬಡ್ತಿ ಪಡೆದ ಶಿಕ್ಷಕರ ಹಿತವನ್ನು ಕಾಪಾಡಿ – ಮೇಲ್ಮನವಿ ಸಲ್ಲಿಸಲು ಸರಕಾರ, ಇಲಾಖೆಯನ್ನು ಒತ್ತಾಯಿಸಲು ಶಾಸಕರಿಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ೨೦೧೮ರ ನಂತರ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಗೆ ಪದೋನ್ನತಿ ಹೊಂದಿದ ಶಿಕ್ಷಕರಿಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿ ಹಿಂಬಡ್ತಿ ಪಪಡೆಯಬೇಕಾಗಿದ್ದರಿಂದ ಮುಂಬಡ್ತಿ ಪಡೆದ ಶಿಕ್ಷಕರು ತಮ್ಮ ಹಿತವನ್ನು ಕಾಪಾಡಲು ಉಚ್ಚನ್ಯಾಯಲಯಕ್ಕೆ ಮೇಲ್ಮನವಿ ಸಲ್ಲಿಸುವಂತೆ ಸರಕಾರವನ್ನು ಒತ್ತಾಯಿಸುವಂತೆ ಪುತ್ತೂರು ಜಿಲ್ಲಾ ಬಡ್ತಿ ಶಿಕ್ಷಕರ ಸಂಘದ ಮೂಲಕ ಪುತ್ತೂರು ಶಾಸಕರಿಗ ಮನವಿ ಸಲ್ಲಿಸಲಾಗಿದೆ. ಶಿಕ್ಷಕರು ಜೂ. ೨೯ರಂದು ಪುತ್ತೂರು ಶಾಸಕ ಸಂಜೀವ ಮಠಂದೂರಿಗೆ ಮನವಿ ಸಲ್ಲಿಸಿದರು.

ಏನಿದು ವಿಷಯ…..
ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಮೇ ೧೨ರಂದು ನೀಡಿದ ತೀರ್ಪಿನ ಪ್ರಕಾರ ೬ನೇ ತರಗತಿಯಿಂದ ೮ನೇ ತರಗತಿಯ ತನಕ ಬೋಧಿಸಲು ನೇಮಕಾತಿಯಾದ ಶಿಕ್ಷಕರು ಮಾತ್ರ ಪ್ರೌಢಶಾಲಾ ಶಿಕ್ಷಕರು ಗ್ರೇಡ್ -೨ ಹುದ್ದೆಯನ್ನು ಹೊಂದಲು ಅರ್ಹರು ಮತ್ತು ಈ ಹಿಂದೆ ನೀಡಿರುವ ಎಲ್ಲಾ ಬಡ್ತಿಗಳನ್ನು ಹಿಂಪಡೆಯಬೇಕೆಂದು ತೀರ್ಪು ನೀಡಿದೆ. ಆದರೆ ಕಳೆದ ಸುಮಾರು ೨೫ ವರ್ಷಗಳಿಂದ ೧ನೇ ತರಗತಿಯಿಂದ ೭ನೇ ತರಗತಿಗೆ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರು ಬಿ.ಎಡ್ ಪದವಿಯ್ನು ಪಡೆದು ಜೇಷ್ಠತೆ ಮತ್ತು ಮೆರಿಟ್ ಆಧಾರದಲ್ಲಿ ಅರ್ಹ ಶಿಕ್ಷಕರಿಗೆ ಇಲಾಖೆಯ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್ -೨ ಹುದ್ದೆಗೆ ಮುಂಬಡ್ತಿಯನ್ನು ನೀಡಿದೆ. ಈ ನಡುವೆ ಕೆಎಟಿ ಆದೇಶದಿಂದ ೨೦೧೮ರಿಂದ ೨೦೨೦ರ ತನಕ ಮುಂಬಡ್ತಿ ಪಡೆದ ಪ್ರೌಢಶಾಲಾ ಸಹ ಶಿಕ್ಷಕರು ಆತಂಕತದಲ್ಲಿದ್ದಾರೆ.

ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿಗೆ ಮನವಿ:
ಹಿಂಬಡ್ತಿಯ ಆತಂಕದಲ್ಲಿರುವ ಶಿಕ್ಷಕರು ಶಿಕ್ಷಣ ಸಚಿವರಲ್ಲಿ ಮತ್ತು ಸರಕಾರದ ಮುಂದೆ ಮನವಿಗೆ ಮುಂದಾಗಿದ್ದು, ಇಲಾಖೆ ಮತ್ತು ಸರಕಾರ ಸೂಕ್ತ ಕಾಯ್ದೆಯನ್ನು ಜಾರಿಗೆ ತಂದು ಮುಂಬಡ್ತಿ ಶಿಕ್ಷಕರ ಪರವಾಗಿ ಘನ ಉಚ್ಛನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿ ಶಿಕ್ಷಕರ ಹಿತವನ್ನು ಕಾಪಾಡಿ ಶಿಕ್ಷಕರಿಗೆ ಹಿಂಬಡ್ತಿ ಆದೇಶದಿಂದ ರಕ್ಷಣೆ ನೀಡುವಂತೆ ಸರಕಾರದ ಮೇಲೆ ಒತ್ತಡ ತಂದು ಹಿಂಬಡ್ತಿಯ ಆತಂಕದಲ್ಲಿರುವ ಶಿಕ್ಷಕರಿಗೆ ನ್ಯಾಯ ಒದಗಿಸುವಂತೆ ಸರಕಾರವನ್ನು ಗಮನ ಸೆಳೆಯುವಂತೆ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ. ಸವಣೂರು ಸ.ಪ.ಪೂ, ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಮಾಮಚ್ಚನ್, ಶಾಂತಿನಗರ ಸ.ಪ್ರೌ.ಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ಗ್ರೇಸಿ ಡಿ ಸೋಜ, ಕುಂಬ್ರ ಕೆಪಿಎಸ್ ಕಾಲೇಜಿನ ಜ್ಯೋತಿ ಎಂ.ಎಚ್, ಬೆಟ್ಟಂಪಾಡಿ ಸ.ಪ.ಪೂ ಕಾಲೇಜಿನ ಭಾರತಿ ಬಿ, ನೆಟ್ಟಣಿಗೆಮುಡ್ನೂರು ಸ.ಪ್ರೌ.ಶಾಲೆಯ ಯಶೋದಾ ಕೆ, ಕಾಣಿಯೂರು ಸ.ಪ.ಪೂ ಕಾಲೇಜಿನ ಕುಸುಮಾವತಿ ಕೆ, ಕೆಯ್ಯೂರು ಕೆಪಿಎಸ್ ಕಾಲೇಜಿನ ಮೋಲಿ ವಿಲ್ಮಾ ಪಿಂಟೋ, ಮಣಿಕ್ಕರ ಸ.ಪ್ರೌ.ಶಾಲೆಯ ವಸಂತಿ ಕೆ, ನೆಟ್ಟಣಿಮುಡ್ನೂರು ಪ್ರೌ.ಶಾಲೆಯ ಉದಯ ಎಸ್ ಅವರು ಮನವಿ ನೀಡುವ ಸಂದರ್ಭ ಉಪಸ್ಥಿತರಿದ್ದರು.

ಶಾಸಕರಿಂದ ಭರವಸೆ
ಶಿಕ್ಷಕರ ಮನವಿಗೆ ಸ್ಪಂಧಿಸಿದ ಶಾಸಕರು ಶಿಕ್ಷಣ ಸಚಿವರಿಗೆ ಮತ್ತು ನಿರ್ದೇಶಕರಿಗೆ ಪತ್ರ ಮುಖೇನ ಬಡ್ತಿ ಹೊಂದಿದ ಶಿಕ್ಷಕರ ಹಿತವನ್ನು ಕಾಪಾಡಲು ತಿಳಿಸುತ್ತೇನೆ ಮತ್ತು ನಾಳೆಯ ದಿನ ಬೆಂಗಳೂರಿಗೆ ಹೋಗಲಿದ್ದು. ಅಲ್ಲಿ ಮುಖತಃ ಸಚಿವರೊಂದಿಗೆ ಮಾತನಾಡುತ್ತೇನೆ ಎಂದು ಶಾಸಕ ಸಂಜೀವ ಮಠಂದೂರು ಶಿಕ್ಷಕರಿಗೆ ಭರವಸೆ ನೀಡಿದರು.

(ಬಾಕ್ಸ್)
ಜಿಲ್ಲೆಯಲ್ಲಿ ೧೦೧ ಶಿಕ್ಷಕರು ಆತಂಕದಲ್ಲಿ
ಸುಮಾರು ೨೫ ವರ್ಷಗಳಿಂದ ಮುಂಬಡ್ತಿ ಕೊಡುವ ಪ್ರಕ್ರಿಯೆಗೆ ಇಲಾಖೆಯಿಂದ ಆಗಿದೆ. ಆದರೆ ಇತ್ತೀಚೆಗೆ ಜಿಪಿಟಿ ಶಿಕ್ಷಕರ ನೇಮಕಾತಿ ಆದ ಬಳಿಕ ಈ ಸಮಸ್ಯೆ ಎದ್ದು ಕಾಣುತ್ತಿದೆ.
ಶಾಸಕರ ಮೂಲಕ ಸರಕಾರವನ್ನು ಮತ್ತು ಇಲಾಖೆಯನ್ನು ಒತ್ತಾಯ ಮೇಲ್ಮನವಿ ಮಾಡುವ ಪ್ರಕ್ರಿಯೆಗೆ ಮನವಿ ಮಾಡಿದ್ದೇವೆ. ಜಿಲ್ಲೆಯಲ್ಲಿ ೧೦೧ ಶಿಕ್ಷಕರು ಮತ್ತು ಪುತ್ತೂರು ತಾಲೂಕಿನಲ್ಲಿ ೧೭ ಮಂದಿ ಶಿಕ್ಷಕರು ಆತಂಕದಲ್ಲಿದ್ದೇವೆ. ಪುತ್ತೂರು ಶಾಸಕರಿಗೆ ಪ್ರಥಮ ಮನವಿ ಸಲ್ಲಿಸಿದ್ದೇವೆ. ಮುಂದೆ ಪ್ರತಿ ತಾಲೂಕಿನಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಗುವುದು.
ಮಾಮಾಚ್ಚನ್, ಜಿಲ್ಲಾ ಮತ್ತು ಪುತ್ತೂರು ತಾಲೂಕು ಬಡ್ತಿ ಶಿಕ್ಷಕರ ಸಂಘ

ಬೈಟ್: ಮಾಮಚ್ಚನ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.