HomePage_Banner
HomePage_Banner

ಆತೂರು ಚೆಕ್ ಪಾಯಿಂಟ್ ದ್ವಂಸ, ಪೊಲೀಸರ ಮೇಲೆ ಹಲ್ಲೆಗೆ ಯತ್ನ-ಆರೋಪ

Puttur_Advt_NewsUnder_1
Puttur_Advt_NewsUnder_1
  • 10 ಜನರ ವಿರುದ್ದ ಕಡಬ ಠಾಣೆಯಲ್ಲಿ ಪ್ರಕರಣ ದಾಖಲು

ಕಡಬ: ಆತೂರಿನಲ್ಲಿ ಜೂ.29ರಂದು ಆತೂರು ಚೆಕ್ ಪಾಯಿಂಟ್ ನಲ್ಲಿ ನಡೆದ ವಾಹನ ಅಪಘಾತ ಬಳಿಕ ಚೆಕ್ ಪಾಯಿಂಟ್ ದ್ವಂಸ ಮಾಡಿದ ಘಟನೆಯ ಬಗ್ಗೆ ಕಡಬ ಠಾಣೆಯಲ್ಲಿ ಸುಮಾರು ಹತ್ತು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಪೋಲಿಸರು ವಾಹನ ತಪಾಸಣೆಯ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಆಗಮಿಸಿದ ಹಲವಾರು ಮಂದಿ ಚೆಕ್ ಪಾಯಿಂಟ್ ಇಲ್ಲಿ ಇರಲೇಬಾರದು ಎಂದು ಹೇಳಿ ಚೆಕ್ ಪಾಯಿಂಟ್ ದ್ವಂಸ ಗೊಳಿಸಿದರಲ್ಲದೆ, ಪೋಲಿಸರನ್ನು ದೂಡಿ ಹಾಕಿದ್ದಾರೆ‌. ಬಳಿಕ ಕಡಬ ಠಾಣೆಯ ಎಸ್.ಐ. ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿ ಗಳು ಹಲ್ಲೆಕೋರರನ್ನು ಚದುರಿಸಿದ್ದಾರೆ. ಪೋಲಿಸರ ಕರ್ತವ್ಯ ಕ್ಕೆ ಅಡ್ಡಿಪಡಿಸಿರುವುದು, ಮತ್ತು ಪೋಲಿಸರಿಗೆ ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್.ಐ ರುಕ್ಮ ನಾಯ್ಕ್ ತಿಳಿಸಿದ್ದಾರೆ.

ಅಪಘಾತಕ್ಕೂ ಚೆಕ್ ಪಾಯಿಂಟ್ ಗೂ ಸಂಬಂಧವಿಲ್ಲ
ವಾಹನ ಅಪಘಾತದಲ್ಲಿ ಮೃತಪಟ್ಟವರು ದಾಖಲೆಗಳನ್ನು ತೋರಿಸಿ ಹೋಗಿದ್ದು ರಸ್ತೆ ದಾಟುತ್ತಿದ್ದ ವೇಳೆ ಎದುರಿನಿಂದ ಬಂದ ವಾಹನ ಡಿಕ್ಕಿ ಹೊಡೆದಿದೆ.ಇದರಿಂದ ಮೃತಪಟ್ಟಿದ್ದಾರೆ.ಚೆಕ್ ಪಾಯಿಂಟ್ ನಿಂದಾಗಿ ಯಾವುದು ಅಪಘಾತ ನಡೆದಿಲ್ಲ ಎಂದು ಎಸ್.ಐ ರುಕ್ಮ ನಾಯ್ಕ್ ಅವರು ಸುದ್ದಿಗೆ ಸ್ವಷ್ಟಪಡಿಸಿದ್ದಾರೆ.

ಆತೂರು: ಟೆಂಪೋ ಡಿಕ್ಕಿ – ಆತೂರು ನಿವಾಸಿ ಹ್ಯಾರಿಸ್ ಮೃತ್ಯು ;ಬ್ಯಾರಿಕೇಡ್‌ ಧ್ವಂಸಗೊಳಿಸಿದ ಆಕ್ರೋಶಿತರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.