HomePage_Banner
HomePage_Banner

ಆತೂರು : ಪೋಲಿಸ್ ಚೆಕ್ ಪೋಸ್ಟ್ ಧ್ವಂಸ ಪ್ರಕರಣ-ಕಡಬ ವಿ.ಹಿಂ.ಪ ಖಂಡನೆ ವಾಹನ ಅಪಘಾತಕ್ಕೆ ಪೋಲಿಸರನ್ನು ಹೊಣೆಯಾಗಿಸುವ ಹುನ್ನಾರ

Puttur_Advt_NewsUnder_1
Puttur_Advt_NewsUnder_1
ಆತೂರು : ಪೋಲಿಸ್ ಚೆಕ್ ಪೋಸ್ಟ್ ಧ್ವಂಸ ಪ್ರಕರಣ-ಕಡಬ ವಿ.ಹಿಂ.ಪ ಖಂಡನೆ
ವಾಹನ ಅಪಘಾತಕ್ಕೆ ಪೋಲಿಸರನ್ನು ಹೊಣೆಯಾಗಿಸುವ ಹುನ್ನಾರ
ಕಡಬ: ಆತೂರು ಪೋಲಿಸ್  ಚೆಕ್ ಪೋಸ್ಟ್   ಬಳಿ ನಡೆದ ವಾಹನ ಅಪಘಾತದ ಬಳಿಕ ಈ ಅಪಘಾತಕ್ಕೆ ಪೋಲಿಸರು ಕಾರಣ ಎಂಬ ನೆಪವೊಡ್ಡಿ ಚೆಕ್ ಚೆಕ್ ಪೋಸ್ಟ್  ಶೆಡ್ ನ್ನು ಧ್ವಂಸಗೊಳಿಸಿದ ಪ್ರಕರಣವನ್ನು ಕಡಬ ಪ್ರಖಂಡ ವಿ.ಹಿಂ.ಪ ಬಜರಂಗದಳ ಖಂಡಿಸಿದೆ.
ಕಡಬ ಪ್ರಖಂಡ ವಿ.ಹಿಂ.ಪ ಅಧ್ಯಕ್ಷ ರಾಧಾಕೃಷ್ಣ ಕೊಳ್ಪೆ ಹಾಗೂ ಕಾರ್ಯದರ್ಶಿ ಪ್ರಮೋದ್ ರೈ ಅವರು ಹೇಳಿಕೆ ನೀಡಿ, ಆತೂರು ಚೆಕ್ ಪೋಸ್ಟ್ ಬಳಿ ಪೋಲಿಸರಿಗೆ ದಾಖಲೆ ತೋರಿಸಿ ರಸ್ತೆ ದಾಟುತ್ತಿದ್ದ ವೇಳೆ ಎದುರಿನಿಂದ ಬಂದ ವಾಹನ ಡಿಕ್ಕಿಯಾಗಿ ಯುವಕನೋರ್ವ ಮೃತಪಟ್ಟಿದ್ದರು. ಆದರೆ ಈ ದುರ್ಘಟನೆಯ ಬೆನ್ನಲ್ಲೆ ಕಿಡಿಗೇಡಿಗಳು ಪೋಲಿಸ್ ಚೆಕ್ ಪೋಸ್ಟ್, ಬ್ಯಾರಿಕೇಡ್ಗಳನ್ನು ಧ್ವಂಸ ಮಾಡಿದ್ದಾರೆ, ಇದು ಖಂಡನಿಯ, ಆತೂರಿನಲ್ಲಿ ಅತೀ ಹೆಚ್ಚು ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳನ್ನು ಮಟ್ಟ ಹಾಕುವಲ್ಲಿ ಕಡಬ ಪೋಲಿಸರು ಯಶಸ್ವಿಯಾಗಿದ್ದು ಇದನ್ನು ಸಹಿಸದ ವ್ಯಕ್ತಿಗಳು  ಈ  ಕೃತ್ಯ ನಡೆಸಿದ್ದಾರೆ.  ಅಲ್ಲಿ ನಡೆದ ನಿಜ ಘಟನೆಯನ್ನು ಅರಿಯದೆ ಪೋಲಿಸರ ಮೇಲೆಯೇ ಹಲ್ಲೆ ನಡೆಸಲು ಕಿಡಿಗೇಡಿಗಳು ಪ್ರಯತ್ನಿಸಿರುವುದು ಕೂಡ ಖಂಡನಿಯ, ಅಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡುವ ಪೋಲಿಸರನ್ನು ಟಾರ್ಗೆಟ್ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.