HomePage_Banner
HomePage_Banner

ಆರೋಗ್ಯ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

  • ವಿವೇಕಾನಂದ ಕಾಲೇಜಿನಲ್ಲಿ ನಗರಸಭೆ ಅಧ್ಯಕ್ಷರಿಂದ ಉದ್ಘಾಟನೆ
  • ಪ್ರಧಾನಿ ಕನಸು ಈಡೇರುತ್ತಿದೆ – ಕೆ.ಜೀವಂಧರ್ ಜೈನ್

ಪುತ್ತೂರು: ದೇಶದೆಲ್ಲೆಡೆ ಕೊರೋನಾ ಎರಡನೇ ಅಲೆಯ ತೀವ್ರಗೊಳ್ಳತ್ತೀರುವ ಬೆನ್ನಲ್ಲೆ ಮೇ 1 ರಿಂದಲೇ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರವೂ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಪುತ್ತೂರು ತಾಲೂಕಿನಲ್ಲಿ ಜೂ. 30ರಂದು 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.

ಪ್ರಧಾನಿ ಕನಸು ಈಡೇರುತ್ತಿದೆ:
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್‌ರವರು ಮಾತನಾಡಿ ಅತಿ ಕಡಿಮೆ ಅವಧಿಯಲ್ಲಿ ದೇಶದ ಗರಿಷ್ಠ ಜನತೆಗೆ ವ್ಯಾಕ್ಸಿನ್ ನೀಡುವ ನಿಟ್ಟಿನಲ್ಲಿ ಕೇಂದ್ರ ಕ್ರಮ ಕೈಗೊಳ್ಳುತ್ತಿದೆ. ೩ನೇ ಹಂತದ ಲಸಿಕಾ ಕಾರ್ಯಕ್ರಮದಡಿ ಲಸಿಕೆ ನೀಡುವಿಕೆ ಕಾರ್ಯಕ್ಕೆ ವೇಗ ನೀಡಲಾಗಿದೆ. ಇದರಿಂದಾಗಿ ಪ್ರಧಾನಿಯವರ ಕನಸು ಈಡೇರುತ್ತಿದೆ. ಎಲ್ಲರು ಕೊರೋನಾ ಮುಕ್ತ ದೇಶಕ್ಕಾಗಿ ಸಹಕಾರ ನೀಡಬೇಕೆಂದರು.

ವ್ಯಾಕ್ಸಿನ್ ರೋಗದ ತೀವ್ರತೆಯನ್ನು ಕಡಿಮೆ ಗೊಳಿಸುತ್ತದೆ:
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಮಾತನಾಡಿ ಜೂ. 28ರಿಂದ ವಿಶೇಷವಾಗಿ ಕಾಲೇಜಿಗೆ ಬಂದು ವ್ಯಾಕ್ಸಿನೇಷನ್ ಮಾಡುವ ಕುರಿತು ನಿರ್ಣಯಿಸಿದಂತೆ ವ್ಯಾಕ್ಸಿನೇಷನ್ ಆರಂಭಗೊಂಡಿದೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎಷ್ಟೇ ಇರಲಿ. ಎಲ್ಲರಿಗೂ ವ್ಯಾಕ್ಸಿನ್ ಕೊಡಲಾಗುವುದು. ವ್ಯಾಕ್ಸಿನ್ ತೆಗೆದು ಕೊಂಡ ತಕ್ಷಣ ನಾವು ಸುರಕ್ಷಿತ ಎಂದು ಭಾವಿಸಬೇಡಿ. ವ್ಯಾಕ್ಸಿನ್ ರೋಗದ ತೀವ್ರತೆಯನ್ನು ಕಡಿಮೆ ಗೊಳಿಸುವುದು ಮಾತ್ರ. ಈ ನಿಟ್ಟಿನಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಪಾಡುವುದು ಮಾಸ್ಕ್ ಧರಿಸುವುದು ಮತ್ತು ಸ್ಯಾನಿಟೈಸರ್ ಬಳಕೆ ಮಾಡುವುದು ಅಗತ್ಯ ಎಂದು ಹೇಳಿದ ಅವರು ಮುಂದೆ ಜುಲೈ ತಿಂಗಳಲ್ಲಿ ಎಲ್ಲಾ ಕಾಲೇಜು ಆರಂಭಗೊಂಡಾಗ ಕೋವಿಡ್ ಸೋಂಕು ಹರಡದಂತೆ ಎಚ್ಚರ ವಹಿಸಿ ಎಂದರು.

ಕಾಲೇಜಿಗೆ ಬರುವಾಗ ವ್ಯಾಕ್ಸಿನ್ ಪ್ರಮಾಣ ಪತ್ರ ಬೇಕಾಗಬಹುದು:
ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿ ಜೆ ಭಟ್ ಅವರು ಮಾತನಾಡಿ ಆರೋಗ್ಯ ಇಲಾಖೆ ಕೊಟ್ಟ ವ್ಯಾಕ್ಸಿನ್ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದು ಕೊಳ್ಳಬೇಕು. ಮುಂದಿನ ದಿನ ಸರಕಾರದ ನಿಯಮದಂತೆ ಕಾಲೇಜಿಗೆ ಬರುವಾಗ ವ್ಯಾಕ್ಸಿನ್ ಪ್ರಮಾಣ ಪತ್ರ ವಿದ್ಯಾರ್ಥಿಗಳಲ್ಲಿ ಬೇಕಾಗಬಹುದು ಎಂದರು. ರಕ್ಷಕ ಶಿಕ್ಷಕ ಸಂಘದ ಸದಸ್ಯ ಹಾರಾಡಿ ಅಬ್ದುಲ್ ರಝಾಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಅರುಣ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಸರದಿ ಸಾಲಿನಲ್ಲಿ ನೊಂದಾವಣೆ ಮಾಡಿಸಿಕೊಂಡು ವ್ಯಾಕ್ಸಿನ್ ಪಡೆದು ಕೊಂಡರು. ಇದರ ಜೊತೆಯಲ್ಲಿ ಅಗತ್ಯವಿದ್ದವರಿಗೆ ಕೋವಿಡ್ ಪರೀಕ್ಷೆಯನ್ನು ಮಾಡಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.